ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ: ಮಗ ಸಜೀಬ್ ವಾಝೇದ್ ಜಾಯ್
ಹೌದು, ಆಕೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಎಂದು ನಾನು ಹೇಳಿದ್ದು ನಿಜ. ಆದರೆ ದೇಶಾದ್ಯಂತ ನಮ್ಮ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಿರಂತರ ದಾಳಿಯ ನಂತರ ಕಳೆದ ಎರಡು ದಿನಗಳಲ್ಲಿ ಬಹಳಷ್ಟು ಬದಲಾಗಿದೆ. ಈಗ ನಾವು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ಏನು ಬೇಕಾದರೂ ಮಾಡಲಿದ್ದೇವೆ. ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಾಯ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಢಾಕಾ ಆಗಸ್ಟ್ 08: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಪ್ರಯಾಣದ ಯೋಜನೆಗಳ ಬಗ್ಗೆ ಅನಿಶ್ಚಿತತೆಯ ಮಧ್ಯೆ, ಅವರ ಪುತ್ರ ಸಜೀಬ್ ವಾಝೆದ್ ಜಾಯ್, ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಿದ ತಕ್ಷಣ ಹಸೀನಾ ದೇಶಕ್ಕೆ ಹಿಂತಿರುಗುತ್ತಾರೆ ಎಂದು ಹೇಳಿದ್ದಾರೆ. ಪಿಟಿಐ ಪ್ರಕಾರ, ಶೇಖ್ ಹಸೀನಾ ಅವರು “ನಿವೃತ್ತ ಅಥವಾ ಸಕ್ರಿಯ” ರಾಜಕಾರಣಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಾರೆಯೇ ಎಂದು ಇನ್ನೂ ನಿರ್ಧರಿಸಿಲ್ಲ ಎಂದು ಜಾಯ್ ಹೇಳಿದರು. ಹಸೀನಾ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಎಂದು ಜಾಯ್ ಈ ಹಿಂದೆ ಟಿವಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು.
ಹೌದು, ಆಕೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಎಂದು ನಾನು ಹೇಳಿದ್ದು ನಿಜ. ಆದರೆ ದೇಶಾದ್ಯಂತ ನಮ್ಮ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಿರಂತರ ದಾಳಿಯ ನಂತರ ಕಳೆದ ಎರಡು ದಿನಗಳಲ್ಲಿ ಬಹಳಷ್ಟು ಬದಲಾಗಿದೆ. ಈಗ ನಾವು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ಏನು ಬೇಕಾದರೂ ಮಾಡಲಿದ್ದೇವೆ. ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಾಯ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಅವಾಮಿ ಲೀಗ್ ಬಾಂಗ್ಲಾದೇಶದ ಅತಿದೊಡ್ಡ ಮತ್ತು ಹಳೆಯ ರಾಜಕೀಯ ಪಕ್ಷವಾಗಿದೆ. ಆದ್ದರಿಂದ ನಾವು ನಮ್ಮ ಜನರಿಂದ ದೂರ ಹೋಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಿದ ನಂತರ ಅವರು ಖಂಡಿತವಾಗಿಯೂ ಬಾಂಗ್ಲಾದೇಶಕ್ಕೆ ಮರಳುತ್ತಾರೆ ಎಂದು ಅವರು ಹೇಳಿದರು.
ಉಚ್ಚಾಟಿತ ಬಾಂಗ್ಲಾದೇಶದ ಪ್ರಧಾನಿ ರಾಜೀನಾಮೆಯ ನಂತರ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದು, ಸೋಮವಾರ ರಾಷ್ಟ್ರ ರಾಜಧಾನಿ ಬಳಿಯ ಹಿಂಡನ್ ವಾಯುನೆಲೆಗೆ ಬಂದಿಳಿದರು. ಆಕೆಯನ್ನು ವಾಯುನೆಲೆಯಿಂದ ಅನಿರ್ದಿಷ್ಟ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.
ಮಧ್ಯಂತರ ಸರ್ಕಾರವನ್ನು ಮುನ್ನಡೆಸಲು ಗುರುವಾರ ಢಾಕಾಕ್ಕೆ ಬಂದಿಳಿದ ಹಸೀನಾ ಅವರ ಕಟು ಟೀಕಾಕಾರರಾದ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು ದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರವನ್ನು ಮುಂದುವರೆಸುತ್ತಿರುವ ಹಿನ್ನೆಲೆಯಲ್ಲಿ ಶಾಂತವಾಗಿರಲು ಮನವಿ ಮಾಡಿದ್ದಾರೆ. “ಹಿಂದಿನ ತಪ್ಪುಗಳು ಭವಿಷ್ಯವನ್ನು ಮುಚ್ಚಿಹಾಕಲು ಬಿಡದೆ” ಮುಂದುವರಿಯುವ ತನ್ನ ಬದ್ಧತೆಗೆ ಯೂನಸ್ ಬದ್ಧರಾಗುತ್ತಾರೆ ಎಂದು ಜಾಯ್ ಭರವಸೆ ವ್ಯಕ್ತಪಡಿಸಿದರು. “ಅವರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ ಜಾಯ್.
ಆದಾಗ್ಯೂ, ಅವರ ಸ್ವಂತ ರಾಜಕೀಯ ಭವಿಷ್ಯದ ಬಗ್ಗೆ ಮತ್ತು ಅವರ ಸಹೋದರಿ ಸೈಮಾ ವಾಜೆದ್ ಅವರ ರಾಜಕೀಯ ಭವಿಷ್ಯದ ಬಗ್ಗೆ, ಜಾಯ್ ಬದ್ಧರಾಗಿಲ್ಲ.
“ಈ ಪ್ರಶ್ನೆಗೆ ನಾನು ಖಚಿತವಾದ ಉತ್ತರವನ್ನು ನೀಡಲು ಸಾಧ್ಯವಿಲ್ಲ. ಆದರೆ ಬಾಂಗ್ಲಾದೇಶವನ್ನು ಉಳಿಸಲು ಮತ್ತು ಅವಾಮಿ ಲೀಗ್ ಅನ್ನು ರಕ್ಷಿಸಲು ನಾನು ಏನು ಬೇಕಾದರೂ ಮಾಡುತ್ತೇನೆ. ಮುಜೀಬ್ ಕುಟುಂಬವು ಅವರನ್ನು ಗೊಂದಲದಲ್ಲಿ ಬಿಡುವುದಿಲ್ಲ” ಎಂದು ಅವರು ಹೇಳಿದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ದೇಶದಲ್ಲಿ ನಡೆಯುತ್ತಿರುವ ಅಶಾಂತಿಗೆ ಉತ್ತೇಜನ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮುಂದಿನ ಸೂಚನೆ ಬರುವವರೆಗೆ ವೀಸಾ ಕೇಂದ್ರ ಮುಚ್ಚಿದ ಭಾರತ
” ಸಾಂದರ್ಭಿಕ ಸಾಕ್ಷ್ಯದಿಂದ ನನಗೆ ಖಚಿತವಾಗಿದೆ. ಪಾಕಿಸ್ತಾನದ ಐಎಸ್‌ಐ ಭಾಗಿಯಾಗಿರುವ ಶಂಕೆ ಇದೆ. ದಾಳಿಗಳು ಮತ್ತು ಪ್ರತಿಭಟನೆಗಳು ಬಹಳ ಸಂಘಟಿತವಾಗಿದ್ದವು, ನಿಖರವಾಗಿ ಯೋಜಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಪರಿಸ್ಥಿತಿಯನ್ನು ಪ್ರಚೋದಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆದಿವೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಏನೇ ಮಾಡಿದರೂ ಹದಗೆಡಲು ಯತ್ನಿಸುತ್ತಲೇ ಇದ್ದರು ಎಂದು ಜಾಯ್ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Thu, 8 August 24