Sheikh Hasina: ಆ ಒಂದು ಫೋನ್ ಕಾಲ್​ನಿಂದ ಬಾಂಗ್ಲಾದೇಶ ಬಿಟ್ಟು ಹೊರಟ ಶೇಖ್ ಹಸೀನಾ

Bangladesh Crisis: ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸೇನಾ ವಿಮಾನದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯಕ್ಕೆ ಅವರು ಭಾರತದಲ್ಲಿದ್ದು, ಇಂಗ್ಲೆಂಡ್​ಗೆ ತೆರಳುವ ನಿರೀಕ್ಷೆಯಿದೆ. ಆದರೆ, ಶೇಖ್ ಹಸೀನಾ ರಾಜೀನಾಮೆ ನೀಡುವ ಮೊದಲು ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಏನೇನು ನಡೆಯಿತು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

Sheikh Hasina: ಆ ಒಂದು ಫೋನ್ ಕಾಲ್​ನಿಂದ ಬಾಂಗ್ಲಾದೇಶ ಬಿಟ್ಟು ಹೊರಟ ಶೇಖ್ ಹಸೀನಾ
ಶೇಖ್ ಹಸೀನಾ
Follow us
ಸುಷ್ಮಾ ಚಕ್ರೆ
|

Updated on:Aug 06, 2024 | 4:33 PM

ಢಾಕಾ: ಬಾಂಗ್ಲಾದೇಶದ ಸರ್ವಾಧಿಕಾರಿಯೆಂದೇ ಕರೆಯಲ್ಪಡುವ ಶೇಖ್ ಹಸೀನಾ ಅವರ ರಾಜಕೀಯ ಜೀವನ ಅಂತ್ಯವಾದಂತಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶೇಖ್ ಹಸೀನಾ ಪ್ರಧಾನಿ ಖುರ್ಚಿ ಬಿಟ್ಟು ಕೆಳಗಿಳಿಯಲೇಬೇಕಾದ ಅನಿವಾರ್ಯತೆ ತಲೆದೋರಿತು. ಈ ನಿರ್ಧಾರ ಆಕೆಗೆ ಸುಲಭದ್ದಾಗಿರಲಿಲ್ಲ. ಆದರೆ, ಆ ಒಂದು ಫೋನ್ ಕರೆಯಿಂದಾಗಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಯಿತು. ಅಷ್ಟಕ್ಕೂ ಬಾಂಗ್ಲಾದೇಶ ಬಿಟ್ಟು ಪರಾರಿಯಾಗುವ ಮುನ್ನ ಶೇಖ್ ಹಸೀನಾ ಅವರ ನಿವಾಸದಲ್ಲಿ ಏನೆಲ್ಲ ನಡೆಯಿತು ಗೊತ್ತಾ?

ಏನೇ ಆದರೂ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ದೇಶಾದ್ಯಂತ ನಡೆಯುತ್ತಿದ್ದ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರವನ್ನು ನಿಯಂತ್ರಿಸಲು ಬಯಸಿದ್ದರು. ಆದರೆ, ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಟ್ಟು, ಕೊನೆಗೆ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಸಿತು. ಭದ್ರತಾ ಮೇಲಧಿಕಾರಿಗಳು ಪ್ರತಿಭಟನೆಗಳನ್ನು ಬಲವಂತವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಶೇಖ್ ಹಸೀನಾಗೆ ದಿಕ್ಕು ತೋಚದಂತಾಗಿತ್ತು. ಒಂದೆಡೆ ದೇಶದಲ್ಲಿ ಪ್ರತಿಭಟನೆಯಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆ ಆತಂಕ ಮೂಡಿಸಿದರೆ ಇನ್ನೊಂದೆಡೆ ತಾವೇ ಕಟ್ಟಿಕೊಂಡ ಸಾಮ್ರಾಜ್ಯವನ್ನು ಬಿಟ್ಟುಕೊಡುವುದು ಹೇಗೆಂಬ ಗೊಂದಲ ಹೆಚ್ಚಾಗಿತ್ತು.

ಇದನ್ನೂ ಓದಿ: 49 ವರ್ಷಗಳ ಹಿಂದೆಯೂ ಶೇಖ್ ಹಸೀನಾಗೆ ಆಶ್ರಯ ನೀಡಿ ಪ್ರಾಣ ಉಳಿಸಿತ್ತು ಭಾರತ; ಆಗ ನಡೆದಿದ್ದೇನು?

ಮಿಲಿಟರಿ ವಿಮಾನದಲ್ಲಿ ಶೇಖ್ ಹಸೀನಾ ಕೊನೆಯ ನಿಮಿಷದಲ್ಲಿ ತಪ್ಪಿಸಿಕೊಳ್ಳುವ ಮೊದಲು ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಏನಾಯಿತು? ಎಂಬ ಕುರಿತು ಇಲ್ಲಿದೆ ವಿವರ.

ಭದ್ರತಾ ಮುಖ್ಯಸ್ಥರೊಂದಿಗೆ ಬೆಳಿಗ್ಗೆ ಭೇಟಿ:

ಪ್ರಥಮ್ ಅಲೋ ವರದಿಯ ಪ್ರಕಾರ, ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಸೋಮವಾರ ಬೆಳಗ್ಗೆ ಭದ್ರತಾ ಸಂಸ್ಥೆ ಮತ್ತು ಪೊಲೀಸ್ ಪಡೆಯ ಉನ್ನತ ಅಧಿಕಾರಿಗಳನ್ನು ತನ್ನ ನಿವಾಸಕ್ಕೆ ಕರೆದರು. ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರ ಕೆಲವು ಸಲಹೆಗಾರರು ಪ್ರಧಾನಿಯವರ ಅಧಿಕಾರವನ್ನು ಸೇನೆಗೆ ವರ್ಗಾಯಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ 76ರ ಹರೆಯದ ನಾಯಕಿ ಶೇಖ್ ಹಸೀನಾ ಐದು ಬಾರಿ ಪ್ರಧಾನಿಯಾಗಿದ್ದರು. ಅವರು ತಮ್ಮ ಅಧಿಕಾರ ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಈಗಾಗಲೇ ಜಾರಿಯಲ್ಲಿರುವ ಕರ್ಫ್ಯೂ ಅನ್ನು ಬಲಪಡಿಸಲು ಅವರು ಪಡೆಗಳಿಗೆ ಸೂಚಿಸಿದರು. ಆದರೆ, ಬೀದಿಗಳಲ್ಲಿ ಹಿಂಸಾಚಾರದ ಪರಿಸ್ಥಿತಿಯು ವೇಗವಾಗಿ ಬದಲಾಗುತ್ತಿತ್ತು. ಕರ್ಫ್ಯೂ ಹೊರತಾಗಿಯೂ, ಪ್ರತಿಭಟನಾಕಾರರು ಢಾಕಾದ ವಿವಿಧ ಸ್ಥಳಗಳಲ್ಲಿ ಜಮಾಯಿಸಲಾರಂಭಿಸಿದರು.

ಭದ್ರತಾ ಮೇಲಧಿಕಾರಿಗಳೊಂದಿಗಿನ ತನ್ನ ಸಭೆಯಲ್ಲಿ, ಅವರು ಪ್ರತಿಭಟನೆಗಳನ್ನು ಏಕೆ ತಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು. ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ಏರುತ್ತಿರುವ ದೃಶ್ಯಗಳನ್ನು ಅವರು ತೋರಿಸಿದರು. ನಿಮ್ಮನ್ನು ನಂಬಿ ಈ ಹುದ್ದೆ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಈ ಸಭೆಯಲ್ಲಿ ಶೇಖ್ ಹಸೀನಾ ಅವರು ಪ್ರತಿಭಟನೆಗಳಿಗೆ ಪೊಲೀಸರ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. ಆದರೆ ಪೊಲೀಸರಿಗೆ ಇದನ್ನು ಹೆಚ್ಚು ಕಾಲ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದರು.

ಇದನ್ನೂ ಓದಿ: Viral Video: ಶೇಖ್ ಹಸೀನಾ ಪರಾರಿಯಾಗುತ್ತಿದ್ದಂತೆ ಪ್ರಧಾನಿ ನಿವಾಸದಲ್ಲಿ ಶಾಪಿಂಗ್ ಮಾಡಿದ ಜನ!

ಮಗನಿಂದ ಬಂತು ಫೋನ್:

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಅಧಿಕಾರಿಗಳು ಆಕೆಗೆ ಸಲಹೆ ನೀಡಿದರೂ ಆಕೆ ಅದನ್ನು ಒಪ್ಪಲಿಲ್ಲ. ನಂತರ ಅಧಿಕಾರಿಗಳು ಮತ್ತೊಂದು ಕೊಠಡಿಯಲ್ಲಿ ಶೇಖ್ ಹಸೀನಾ ಅವರ ಸಹೋದರಿ ರೆಹಾನಾ ಅವರೊಂದಿಗೆ ಮಾತನಾಡಿ ಪ್ರಧಾನಿಗೆ ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಿದರು. ರೆಹಾನಾ ಹಸೀನಾ ಜೊತೆ ಮಾತಾಡಿದರೂ ಪ್ರಯೋಜನವಾಗಲಿಲ್ಲ. ಈ ಹಂತದಲ್ಲಿ, ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಅವರು ಎಂಟ್ರಿ ಕೊಟ್ಟರು. ಅಮೆರಿಕಾದಲ್ಲಿ ನೆಲೆಸಿರುವ ಸಜೀಬ್ ಅವರು ತಮ್ಮ ತಾಯಿಯೊಂದಿಗೆ ಫೋನ್​ನಲ್ಲಿ ಮಾತನಾಡಿ ರಾಜೀನಾಮೆ ನೀಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ತನ್ನ ತಾಯಿಯ ಜೀವಕ್ಕೆ ಏನಾದರೂ ತೊಂದರೆಯಾಗಬಹುದು ಎಂಬ ಭೀತಿಯಲ್ಲಿ ಅವರು ಬಾಂಗ್ಲಾದೇಶವನ್ನು ಬಿಟ್ಟು ಬರಲು ಅವರ ಮನವೊಲಿಸಿದರು.

ಕೊನೆಯ ಭಾಷಣಕ್ಕೂ ಅವಕಾಶ ಸಿಗಲಿಲ್ಲ:

ಪ್ರತಿಭಟನಕಾರರ ಗುಂಪು ಹೆಚ್ಚುತ್ತಲೇ ಇತ್ತು. ಗುಪ್ತಚರ ಮಾಹಿತಿಯು ಆ ಗುಂಪು ಪ್ರಧಾನಿಯವರ ಅಧಿಕೃತ ನಿವಾಸವಾದ ಗಣಭವನ್‌ಗೆ ನುಗ್ಗಬಹುದು ಎಂದು ಹೇಳಿತ್ತು. ಒಂದುವೇಳೆ ಅವರು ಒಳಗೆ ನುಗ್ಗಿದರೆ ಶೇಖ್ ಹಸೀನಾ ಅವರಿಗೆ ಯಾವುದೇ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ, ಶೇಖ್ ಹಸೀನಾಗೆ ತಮ್ಮ ಲಗೇಜ್ ಪ್ಯಾಕ್ ಮಾಡಲು 45 ನಿಮಿಷ ನೀಡಲಾಯಿತು. ಅವರು ದೇಶದ ಜನರನ್ನು ಉದ್ದೇಶಿಸಿ ಕೊನೆಯ ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ, ಅದಕ್ಕೂ ಸಮಯವಿರಲಿಲ್ಲ. ಆತುರಾತುರವಾಗಿ ಸಹೋದರಿ ರೆಹಾನಾ ಜೊತೆಯಲ್ಲಿ ಅವರು ಮನೆಯಿಂದ ಹೊರಟರು. ಬಾಂಗ್ಲಾದೇಶದ ಅಧ್ಯಕ್ಷರ ಅಧಿಕೃತ ನಿವಾಸವಾದ ಬಂಗಬಾಬನ್‌ನಲ್ಲಿ ಅವರು ರಾಜೀನಾಮೆ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು.

ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ರಾಜೀನಾಮೆ ನೀಡಿದ ಬಳಿಕ ಶೇಖ್ ಹಸೀನಾ ಮಿಲಿಟರಿ ವಿಮಾನದಲ್ಲಿ ಹೊರಟರು. ಈ ಮೂಲಕ 15 ವರ್ಷಗಳ ಕಾಲ ನಿರಂತರವಾಗಿ ಬಾಂಗ್ಲಾದೇಶವನ್ನು ಆಳಿದ ಶೇಖ್ ಹಸೀನಾ ಕದ್ದುಮುಚ್ಚಿ ದೇಶದಿಂದ ಪರಾರಿಯಾಗಬೇಕಾದ ಸ್ಥಿತಿ ನಿರ್ಮಾಣವಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Tue, 6 August 24

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!