AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ […]

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!
ಸಾಧು ಶ್ರೀನಾಥ್​
|

Updated on:Oct 28, 2019 | 7:15 PM

Share

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ ಹಿಂದೆ ಈತನಿಗೆ ಟಿಕ್​ಟಾಕ್​ನಲ್ಲಿ ಹೈದರಾಬಾದ್​ನ ಹುಡುಗಿ ಪರಿಚಯವಾಗಿದ್ಲು. ಟಿಕ್​ಟಾಕ್ ಮಾಡುತ್ತಲೇ ಇಬ್ಬರ ನಡ್ವೆ ಲವ್ವಿಡವ್ವಿ ಶುರುವಾಗಿದೆ. ಕೊನೆಗೆ ಹೆಂಡ್ತಿಗೆ ಹೇಳದೆ ಕದ್ದುಮುಚ್ಚಿ ತಿರುಪತಿ ದೇವಸ್ಥಾನದಲ್ಲಿ ಮದ್ವೆ ಆಗಿದ್ದಾನೆ.

ಇದನ್ನ ಪ್ರಶ್ನೆ ಮಾಡಿದ ಮೊದಲ ಪತ್ನಿಯನ್ನ ಹತ್ಯೆಗೆ ಸಹ ಯತ್ನಿಸಿದ್ದನಂತೆ. ಹೀಗಾಗಿ, ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ಕೊಟ್ಟಿದ್ದಾಳೆ. ಹೆಂಡ್ತಿ ದೂರು ನೀಡ್ತಿದ್ದಂತೆಯೇ ಸತ್ಯರಾಜ್ ಪೊಲೀಸ್ ಸ್ಟೇಷನ್​ಗೆ ಬಂದಿದ್ದಾನೆ. ಈ ವೇಳೆ ನಮ್ಮ ಅಪ್ಪ-ಅಮ್ಮನನ್ನ ಸರಿಯಾಗಿ ನೋಡಿಕೊಳ್ತಿರಲಿಲ್ಲ. ಅದ್ಕೆ ಎರಡನೇ ಮದ್ವೆ ಆದೆ ಅಂತಾ ಸಬೂಬು ಹೇಳಿದ್ದಾನೆ.

ಆದ್ರೆ ಈಗ ಗಂಡನ ಟಿಕ್​ಟಾಕ್ ಗೀಳು ಪತ್ನಿಯನ್ನ ಬೀದಿಪಾಲು ಮಾಡಿದೆ. ಒಂದೆಡೆ ಮಕ್ಕಳು ಇಲ್ಲ, ಇದೀಗ ಕಟ್ಕೊಂಡ ಗಂಡ ಇನ್ನೊಂದು ಮದ್ವೆಯಾಗಿದ್ದಾನೆ. ಹೀಗಾಗಿ, ಕೇಸ್ ದಾಖಲಿಸಿಕೊಂಡಿರೋ ಪೊಲೀಸ್ ಸತ್ಯರಾಜ್​​ನನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Published On - 7:13 pm, Mon, 28 October 19

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ