ಹೆಂಡತಿ ಇದ್ದ ಶಾಲೆಗೆ ಮಚ್ಚು ಹಿಡಿದು ಬಂದ ಪತಿರಾಯ ಮಾಡಿದ್ದೇನು?
ಕೊರೊನಾ, ಕೊರೊನಾ, ಕೊರೊನಾ. ಹೀಗೆ ಬರೀ ಕೊರೊನಾ ಪದವನ್ನೇ ಕೇಳಿ ಬೆಚ್ಚಿಬಿದ್ದಿದ್ದ ಭಾರತದಲ್ಲಿ ಈಗ ನಿಧಾನವಾಗಿ ಎಲ್ಲವೂ ಸಹಜಸ್ಥಿತಿಗೆ ಮರಳುತ್ತಿದೆ. ಹೀಗೆ ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಕೊರೊನಾ ಕಂಟಕದ ನಡುವೆ ಸಭೆಯನ್ನು ಆಯೋಜಿಸಲಾಗಿತ್ತು. ಹೀಗೆ ಸಭೆಯನ್ನುದ್ದೇಶಿಸಿ ಶಿಕ್ಷಕಿಯೊಬ್ಬರು ಮಾತನಾಡುವಾಗ, ಮಚ್ಚು ಹಿಡಿದು ಬಂದ ವ್ಯಕ್ತಿಯೊಬ್ಬ ಮನಸೋಯಿಚ್ಛೆ ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಹೆಂಡತಿ ಇದ್ದ ಶಾಲೆಗೆ ಮಚ್ಚು ಹಿಡಿದು ಬಂದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವೆಲಮ ಕೊತ್ತೂರಿನ ಕಸ್ತೂರ ಬಾ ಶಾಲೆಯಲ್ಲಿ ಈ ಭೀಬತ್ಸ ಘಟನೆ ನಡೆದಿದೆ. ಸರ್ಕಾರದ […]
ಕೊರೊನಾ, ಕೊರೊನಾ, ಕೊರೊನಾ. ಹೀಗೆ ಬರೀ ಕೊರೊನಾ ಪದವನ್ನೇ ಕೇಳಿ ಬೆಚ್ಚಿಬಿದ್ದಿದ್ದ ಭಾರತದಲ್ಲಿ ಈಗ ನಿಧಾನವಾಗಿ ಎಲ್ಲವೂ ಸಹಜಸ್ಥಿತಿಗೆ ಮರಳುತ್ತಿದೆ. ಹೀಗೆ ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಕೊರೊನಾ ಕಂಟಕದ ನಡುವೆ ಸಭೆಯನ್ನು ಆಯೋಜಿಸಲಾಗಿತ್ತು. ಹೀಗೆ ಸಭೆಯನ್ನುದ್ದೇಶಿಸಿ ಶಿಕ್ಷಕಿಯೊಬ್ಬರು ಮಾತನಾಡುವಾಗ, ಮಚ್ಚು ಹಿಡಿದು ಬಂದ ವ್ಯಕ್ತಿಯೊಬ್ಬ ಮನಸೋಯಿಚ್ಛೆ ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.
ಹೆಂಡತಿ ಇದ್ದ ಶಾಲೆಗೆ ಮಚ್ಚು ಹಿಡಿದು ಬಂದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವೆಲಮ ಕೊತ್ತೂರಿನ ಕಸ್ತೂರ ಬಾ ಶಾಲೆಯಲ್ಲಿ ಈ ಭೀಬತ್ಸ ಘಟನೆ ನಡೆದಿದೆ. ಸರ್ಕಾರದ ಆದೇಶದಂತೆ ಕೊರೊನಾ ನಂತರ ಶಾಲೆಗಳ ಆರಂಭದ ಬಗ್ಗೆ ಪೋಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಾಕಷ್ಟು ಪೋಷಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಮಧುರಾಕ್ಷಿ ಮಾತನಾಡುತ್ತಿದ್ದರು, ಆದ್ರೆ ಅದೆಲ್ಲಿಂದ ಬಂದನೋ ರಾಕ್ಷಸ ಪತಿ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದ. ಮನಸೋಯಿಚ್ಛೆ ಕೊಚ್ಚಿ ಸ್ಥಳದಿಂದ ಪರಾರಿಯಾದ.
ಮಚ್ಚಿನ ಏಟು ತಿಂದ ಶಿಕ್ಷಕಿ ಸ್ಥಿತಿ ಗಂಭೀರ ಮಚ್ಚಿನಿಂದ ಭೀಕರವಾಗಿ ಹಲ್ಲೆಗೆ ಒಳಗಾಗಿದ್ದ ಶಿಕ್ಷಕಿ ಮಧುರಾಕ್ಷಿಯನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾಕಿನಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಮಚ್ಚಿನ ಏಟು ತಿಂದ ಶಿಕ್ಷಕಿ ಸ್ಥಿತಿ ಗಂಭೀರವಾಗಿದ್ದು, ಪರಾರಿಯಾಗಿರುವ ಪಾಪಿ ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಒಟ್ನಲ್ಲಿ ಶಾಲೆಗೆ ನುಗ್ಗಿ ಪಾಪಿ ಪತಿಯೊಬ್ಬ ಇಷ್ಟು ಭಯಾನಕವಾಗಿ ದಾಳಿ ನಡೆಸಿರೋದು ಆಂಧ್ರಪ್ರದೇಶದಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ. ಆದರೆ ಆತ ಇಷ್ಟು ಭಯಾನಕವಾಗಿ ದಾಳಿ ನಡೆಸಲು ಕಾರಣ ಏನು ಅನ್ನೋದೆ ಈವರೆಗೂ ರಿವೀಲ್ ಆಗಿಲ್ಲ. ಹೀಗಾಗಿ ಪ್ರಕರಣದ ಬೆನ್ನುಬಿದ್ದಿರುವ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.