ಹೈದರಾಬಾದ್ ಎನ್​ಕೌಂಟರ್​: ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಕೋರ್ಟ್​ ತಡೆ

ಹೈದರಾಬಾದ್: ನಿನ್ನೆ ಬೆಳ್ಳಂಬೆಳಗ್ಗೆ ತೆಲಂಗಾಣ ರಾಜ್ಯ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇಡೀ ದೇಶದ ಜನರು ತೆಲಂಗಾಣ ಪೊಲೀಸರನ್ನು ಹಾಡಿ ಹೊಗಳುತ್ತಿದ್ರು. ಯಾಕಂದ್ರೆ, ತೆಲಂಗಾಣ ಪೊಲೀಸರ ಸಖಾಕಿ ಗನ್​ನಿಂದ ಸಿಡಿದ ಬುಲೆಟ್ ನರರಕ್ಕಸರ ಎದೆ ಸೀಳಿ ಬಿಟ್ಟಿತ್ತು. ಬಾಳಿ ಬದುಕಬೇಕಿದ್ದ ದಿಶಾಳನ್ನು ಈ ಕಾಮುಕರು ಹುರಿದು ಮುಕ್ಕಿದ್ರು. ನವೆಂಬರ್ 27ರ ರಾತ್ರಿ ಹೈದರಾಬಾದ್​ನ ಚಟಾನ್​ಪಲ್ಲಿ ಬ್ರಿಡ್ಜ್ ಬಳಿ ಕ್ರೂರವಾಗಿ ಅತ್ಯಾಚಾರವೆಸಗಿ, ಸುಟ್ಟು ಹಾಕಿದ್ರು. ಈ ಪೈಶಾಚಿಕ ಕೃತ್ಯ ನಡೆದ ಎಂಟೇ ದಿನಕ್ಕೆ ಖಾಕಿ ಶಿಕ್ಷೆ […]

ಹೈದರಾಬಾದ್ ಎನ್​ಕೌಂಟರ್​: ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಕೋರ್ಟ್​ ತಡೆ

Updated on: Dec 07, 2019 | 7:18 AM

ಹೈದರಾಬಾದ್: ನಿನ್ನೆ ಬೆಳ್ಳಂಬೆಳಗ್ಗೆ ತೆಲಂಗಾಣ ರಾಜ್ಯ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇಡೀ ದೇಶದ ಜನರು ತೆಲಂಗಾಣ ಪೊಲೀಸರನ್ನು ಹಾಡಿ ಹೊಗಳುತ್ತಿದ್ರು. ಯಾಕಂದ್ರೆ, ತೆಲಂಗಾಣ ಪೊಲೀಸರ ಸಖಾಕಿ ಗನ್​ನಿಂದ ಸಿಡಿದ ಬುಲೆಟ್ ನರರಕ್ಕಸರ ಎದೆ ಸೀಳಿ ಬಿಟ್ಟಿತ್ತು.

ಬಾಳಿ ಬದುಕಬೇಕಿದ್ದ ದಿಶಾಳನ್ನು ಈ ಕಾಮುಕರು ಹುರಿದು ಮುಕ್ಕಿದ್ರು. ನವೆಂಬರ್ 27ರ ರಾತ್ರಿ ಹೈದರಾಬಾದ್​ನ ಚಟಾನ್​ಪಲ್ಲಿ ಬ್ರಿಡ್ಜ್ ಬಳಿ ಕ್ರೂರವಾಗಿ ಅತ್ಯಾಚಾರವೆಸಗಿ, ಸುಟ್ಟು ಹಾಕಿದ್ರು. ಈ ಪೈಶಾಚಿಕ ಕೃತ್ಯ ನಡೆದ ಎಂಟೇ ದಿನಕ್ಕೆ ಖಾಕಿ ಶಿಕ್ಷೆ ಕೊಟ್ಟಿದೆ. ಅತ್ಯಾಚಾರವೆಸಗಿದ ಸ್ಥಳದಲ್ಲೇ ಕಾಮಕ್ರಿಮಿಗಳಿಗೆ ನರಕ ತೋರಿಸಿದೆ. ಖಾಕಿ ಬುಲೆಟ್​ಗೆ ಮೊಹಮ್ಮದ್ ಆರಿಫ್, ಚೆನ್ನಕೇಶವುಲು, ಜೊಲ್ಲು ಶಿವ ಮತ್ತು ಜೊಲ್ಲು ನವೀನ್ ಎದೆ ಚೂರು ಚೂರಾಗಿತ್ತು.

ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ:
ನಿನ್ನೆ ತೆಲಂಗಾಣ ಹೈಕೋರ್ಟ್, ಎನ್​ಕೌಂಟರ್ ಪ್ರಕರಣದ ವಿಚಾರಣೆ ನಡೆಸ್ತು. ಆರೋಪಿಗಳ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ ಅಂತಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸೋಮವಾರ ರಾತ್ರಿ 8 ಗಂಟೆ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಅಂತಾ ಹೇಳಿದೆ.

ಅಲ್ದೆ, ಆರೋಪಿಗಳ ಮರಣೋತ್ತರ ಪರೀಕ್ಷೆ ನಡೆಸಿರೋ ವಿಡಿಯೋವನ್ನ ಇಂದು ಸಂಜೆಯೊಳಗಾಗಿ ಹಸ್ತಾಂತರ ಮಾಡುವಂತೆ ಸೂಚಿಸಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸೋದಾಗಿ ಹೈಕೋರ್ಟ್​ ಹೇಳಿದೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿದ ಮಹಬೂಬ್ ನಗರದ ಸರ್ಕಾರಿ ಆಸ್ಪತ್ರೆಗೆ ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us