Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ

| Updated By: ಸಾಧು ಶ್ರೀನಾಥ್​

Updated on: Oct 25, 2021 | 6:36 PM

ಚಂದೂಲಾಲ್​ ತಮ್ಮ ಬ್ಯಾಂಕ್​ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್​​ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್​ ಖಾತೆಗಳಿಗೆ ಚಂದೂಲಾಲ್​ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರು ವಂಚಕನ ಮೋಡಸ್​ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

Online fraud:  ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ
Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ
Follow us on

ಸೈಬರ್​ ಖದೀಮರು ಷೇರ್ ಮಾರ್ಕೆಟ್​​ನಲ್ಲಿ ಹಣ ಹೂಡಿದರೆ ಬಂಪರ್​ ಲಾಭದ ತಂದುಕೊಡುವ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ಮೋಸಾ ಮಾಡಿದ್ದಾರೆ. ಹೈದರಾಬಾದ್​​ನ ರಾಮನಗರ ನಿವಾಸಿ ಚಂದೂಲಾಲ್ ಚೌಧರಿ ಅವರ ವಾಟ್ಸಪ್​ ನಂಬರಿಗೆ ವ್ಯಕ್ತಿಯೊಬ್ಬ ಮೆಸೆಜ್​ ಕಳಿಸಿದ್ದಾನೆ. ಸಣ್ಣ ಮೊತ್ತದ ಹೂಡಿಕೆಯಿಂದಲೆ ಬಂಪರ್​ ಲಾಭದ ತಂದುಕೊಡುವ ಆಮಿಷವೊಡ್ಡಿದ್ದಾನೆ. ಮತ್ತು ಇದರಲ್ಲಿ ಆಸಕ್ತಿಯಿದ್ದರೆ ತಾನುಕಳಿಸಿರುವ ಮೊಬೈಲ್​ ಆ್ಯಪ್​ ಡೌನ್​ ಲೋಡ್​ ಮಾಡಿಕೊಳ್ಳಲು ವಂಚಕ ಸೂಚಿಸಿದ್ದಾನೆ.

ಮೊದಲು ಚಂದೂಲಾಲ್​ ತಮ್ಮ ಬ್ಯಾಂಕ್​ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್​​ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್​ ಖಾತೆಗಳಿಗೆ ಚಂದೂಲಾಲ್​ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರು ವಂಚಕನ ಮೋಡಸ್​ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೆ ಕ್ರಮೇಣ ತಾನು ಮೋಸ ಹೋಗಿರುವುದು ಚಂದೂಲಾಲ್ ಚೌಧರಿ ಅನುಭವಕ್ಕೆ ಬಂದಿದೆ. ಸೈಬರ್​​ ವಂಚಕನು ತನ್ನ ಲಕ್ಷಾಂತರ ರೂಪಾಯಿ ಹಣವನ್ನು ಸ್ವಾಹಾ ಮಾಡಿರುವುದು ಗೊತ್ತಾಗಿದೆ. ಆಗ ಚಂದೂಲಾಲ್ ಚೌಧರಿ ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರ ಬಳಿ ಹೋಗಿ ತನಗೆ ಮೋಸವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸೈಬರ್​​ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೈಸ್ ಮುಖ್ಯಸ್ಥ ಸೂಟ್ಕೇಸ್ ತಗೊಂಡು ದೇವೇಗೌಡ್ರ ಮನೆಗೆ ಬಂದಿದ್ರು |TV9Kannada

(Hyderabad man Chandulal Chowdhary duped lakhs of rupees in online fraud say Hyderabad Cyber crime officials )