Charminar at Night: ರಾತ್ರಿ ವೇಳೆ ಚಾರ್ಮಿನಾರ್ ಸೊಬಗನ್ನು ಕಣ್ತುಂಬಿಕೊಳ್ಳಲು ಆಗುತ್ತಿಲ್ಲ, ಯಾಕೆ ಗೊತ್ತಾ?

|

Updated on: Jun 08, 2024 | 11:53 AM

Hyderabad: ರಾತ್ರಿಯಾದರೆ ಚಾರ್ಮಿನಾರ್ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳೂ ಕತ್ತಲಾಗುತ್ತವೆ. ರಾತ್ರಿ 11 ಗಂಟೆಯ ನಂತರ ಚಾರ್ಮಿನಾರಿನ ನೈಜ ಆನಂದವನ್ನು ಹತ್ತಿರದಿಂದ ನೋಡಲು ಅವಕಾಶ ಸಿಗುತ್ತಿಲ್ಲ. ಅಗೋ ಅಲ್ಲಿ ಕಾಣುತ್ತಿರುವುದೇ ಚಾರ್ಮಿನಾರ್ ಎಂದು ದೂರದಿಂದ ಹೇಳುತ್ತಾ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಜನ.

Charminar at Night: ರಾತ್ರಿ ವೇಳೆ ಚಾರ್ಮಿನಾರ್ ಸೊಬಗನ್ನು ಕಣ್ತುಂಬಿಕೊಳ್ಳಲು ಆಗುತ್ತಿಲ್ಲ, ಯಾಕೆ ಗೊತ್ತಾ?
ರಾತ್ರಿಯ ವೇಳೆ ಚಾರ್ಮಿನಾರ್ ಸೊಬಗನ್ನು ಕಣ್ತುಂಬಿಕೊಳ್ಳಲು ಆಗುತ್ತಿಲ್ಲ ಯಾಕೆ?
Follow us on

ಹೈದರಾಬಾದ್ ಅನೇಕ ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿ. ದೇಶದಲ್ಲಿ ಹೈದರಾಬಾದ್ ನಗರಕ್ಕೆ ವಿಶೇಷ ಸ್ಥಾನವಿದೆ. ವಿಶೇಷವಾಗಿ ಹೈದರಾಬಾದ್ ನಗರದ ಸ್ಥಳಗಳನ್ನು ನೋಡಲು ಅನೇಕ ದೂರದೂರುಗಳಿಂದ ಜನರು ಬರುತ್ತಾರೆ. ಇಲ್ಲಿನ ಅದ್ಬೂತ ಪುರಾತನ ಚಾರ್​​​ಮಿನಾರ್ ಒಂದು ಐತಿಹಾಸಿಕ ಕಟ್ಟಡವಾಗಿದ್ದು, ಹೈದರಾಬಾದ್ ನಗರಕ್ಕೆ ವಿಶೇಷ ಮೆರುಗು ತಂದಿದೆ. ತುಂಬಾ ವಿಶಿಷ್ಟವಾಗಿರುವ ಚಾರ್ಮಿನಾರ್ ಅನ್ನು ನೋಡುವುದು ( Charminar At Night) ಕಷ್ಟವಾಗುತ್ತಿದೆ ಎಂದು ಕೆಲ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ (Hyderabad Police).

ಚಾರ್ಮಿನಾರ್ ಪ್ರದೇಶವು ಹಗಲು ವೇಳೆಗಿಂತ ರಾತ್ರಿಯಲ್ಲಿ ಹೆಚ್ಚು ಸುಂದರವಾಗಿರುತ್ತದೆ ಎಂಬುದು ಹಲವಾರು ಮಂದಿಯ ಅಭಿಪ್ರಾಯ. ದಿನವಿಡೀ ಕಚೇರಿ ಕೆಲಸಗಳಲ್ಲಿ ನಿರತರಾಗುವ ನೌಕರರು ಹಾಗೂ ಕಾಲೇಜು ವಿದ್ಯಾರ್ಥಿಗಳು ಹೀಗೆ ಯೋಚಿಸುತ್ತಾ ರಾತ್ರಿ ಚಾರ್ಮಿನಾರ್ ಗೆ ಭೇಟಿ ನೀಡಿ ಸ್ವಲ್ಪ ಸಮಯ ಕಳೆಯಲು ಬಯಸುತ್ತಾರೆ. ಆದರೆ ಇತ್ತೀಚೆಗೆ ಈ ಅವಕಾಶ ಕೈತಪ್ಪುತ್ತಿದೆ ಎಂದು ಹಲವರು ವಾದಿಸುತ್ತಿದ್ದಾರೆ. ಚಾರ್ಮಿನಾರ್ ಅನ್ನು ಕತ್ತಲಲ್ಲಿ ನೋಡಲು ಬಯಸುವ ಕೆಲವು ಸ್ಥಳೀಯರು ಮತ್ತು ಪ್ರವಾಸಿಗರು ಇಂತಹ ಸಂತೋಷವನ್ನು ತಮ್ಮಿಂದ ದೂರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು ಸಹ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.

ಚಾರ್ಮಿನಾರ್‌ಗೆ ತೆರಳುವ ಪ್ರಮುಖ ರಸ್ತೆಗಳನ್ನು ರಾತ್ರಿ 11 ಗಂಟೆಗೆ ಪೊಲೀಸರು ಮುಚ್ಚುತ್ತಿರುವುದು ನಿಜವಾದ ಸಮಸ್ಯೆಯಾಗಿದೆ. ವಾಹನ ಸವಾರರು ಪ್ರವೇಶಿಸದಂತೆ ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಸ್ವಲ್ಪ ಹೊತ್ತು ಹಾಗೆ ಚಾರ್​​​ಮಿನಾರ್​ ಸುತ್ತ ಒಂದು ರೌಂಡ್​​ ಹಾಕಿಬರುತ್ತೇವೆ ಎಂದು ಹೇಳಿದರೂ ಸಾಧ್ಯವಿಲ್ಲ ಎಂದು ಪೊಲೀಸರು ಜನರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಹಗಲಿನಲ್ಲಿ ಕೆಲಸಕಾರ್ಯಗಳಲ್ಲಿ ನಿರತವಾಗುವುದರಿಂದ ರಾತ್ರಿ ವೇಳೆ ಕುಟುಂಬ ಸಮೇತ ಎಂಜಾಯ್ ಮಾಡುವುದಕ್ಕೆ ಅಡ್ಡಿಯಾಗುತ್ತಿದೆ ಎಂದು ದೂರುತ್ತಿದ್ದಾರೆ.

ರಾತ್ರಿಯಾದರೆ ಚಾರ್ಮಿನಾರ್ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳೂ ಕತ್ತಲಾಗುತ್ತವೆ. ರಾತ್ರಿ 11 ಗಂಟೆಯ ನಂತರ ಚಾರ್ಮಿನಾರಿನ ನೈಜ ಆನಂದವನ್ನು ಹತ್ತಿರದಿಂದ ನೋಡಲು ಅವಕಾಶ ಸಿಗುತ್ತಿಲ್ಲ. ಅಗೋ ಅಲ್ಲಿ ಕಾಣುತ್ತಿರುವುದೇ ಚಾರ್ಮಿನಾರ್ ಎಂದು ದೂರದಿಂದ ಹೇಳುತ್ತಾ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಜನ. ಬಹಳಷ್ಟು ಆಸೆಪಟ್ಟು ಬಂದ ಜನರ ಭಾವನೆಗಳು, ಭರವಸೆಗಳು ಇದರಿಂದ ಅವಕಾಶ ವಂಚಿಸುತ್ತಿದೆ ಎಂದು ಹಲವಾರು ಮಂದಿ ದೂರಿದ್ದಾರೆ.

Also Read: ಸಂಜಯ್ ಗಾಂಧಿ ಕಟ್ಟಾ ಬೆಂಬಲಿಗ, ಸೈಬರಾಬಾದ್ ಖ್ಯಾತಿಯ ಚಂದ್ರಬಾಬು ನಾಯ್ಡು ಕೈಗೆ ಮತ್ತೆ ಆಂಧ್ರ ಚುಕ್ಕಾಣಿ

ಹಗಲಿನಲ್ಲಿ ಮೋಡ ಕವಿದ ವಾತಾವರಣವಿದ್ದರೆ ಹೆಚ್ಚು ಜನ ಇರುವ ಚಾರ್ಮಿನಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೋಟೋ ತೆಗೆಯಲು ಅವಕಾಶ ಇರುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚಾರ್ಮಿನಾರ್ ಕಟ್ಟಡವನ್ನು ದೀಪಗಳಿಂದ ಅಲಂಕರಿಸಿ ರಾತ್ರಿ ವೇಳೆ ಪ್ರವಾಸಿಗರು ಆನಂದಿಸಲು ಅವಕಾಶ ಕಲ್ಪಿಸಬೇಕು ಎಂಬುದು ಪ್ರವಾಸಿಗರು ಮತ್ತು ಸ್ಥಳೀಯರ ಆಗ್ರಹವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ