ಪ್ರಧಾನಿ ಮೋದಿಗೆ ಸಂಪುಟ ಸವಾಲು: ಕ್ಯಾಬಿನೆಟ್ ಸೇರಲು ಯಾರೆಲ್ಲ ರೇಸ್‌ನಲ್ಲಿದ್ದಾರೆ? ಇಲ್ಲಿದೆ ಪಟ್ಟಿ

Narendra Modi Cabinet: ಮೋದಿ ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ಸೇರಲು ಯಾರೆಲ್ಲ ರೇಸ್‌ನಲ್ಲಿದ್ದಾರೆ? ಎನ್‌ಡಿಎ ಅಂಗಪಕ್ಷಗಳ ಯಾಱರಿಗೆ ಸ್ಥಾನ ಸಿಗಲಿದೆ? ಕರ್ನಾಟಕದಿಂದ ಟವೆಲ್ ಹಾಕಿರೋದು ಯಾರೆಲ್ಲ ಎಂಬ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿಗೆ ಸಂಪುಟ ಸವಾಲು: ಕ್ಯಾಬಿನೆಟ್ ಸೇರಲು ಯಾರೆಲ್ಲ ರೇಸ್‌ನಲ್ಲಿದ್ದಾರೆ? ಇಲ್ಲಿದೆ ಪಟ್ಟಿ
ನರೇಂದ್ರ ಮೋದಿ
Follow us
| Updated By: ಗಣಪತಿ ಶರ್ಮ

Updated on:Jun 08, 2024 | 10:29 AM

ನವದೆಹಲಿ, ಜೂನ್ 8: ಇನ್ನೊಂದೇ ದಿನದಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ (Narendra Modi Government) ಮತ್ತೆ ಅಸ್ತಿತ್ವಕ್ಕೆ ಬರಲಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್ ಜೆಡಿಎಸ್‌ನಿಂದ ಹೆಚ್‌ಡಿ ಕುಮಾರಸ್ವಾಮಿ ಬೆಂಬಲದೊಂದಿಗೆ ಮೋದಿ ಆಡಳಿತ ಶುರುವಾಗಲಿದೆ. ಆದರೆ, ಸರ್ಕಾರ ರಚನೆಗೂ ಮುನ್ನವೇ ಸಂಪುಟ (Modi cabinet) ಸೇರಲು ಸಚಿವಾಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಮಿತ್ರಪಕ್ಷಗಳು ಬೇಡಿಕೆ ಮೇಲೆ ಬೇಡಿಕೆ ಉಡುತ್ತಿದ್ದರೆ, ಬಿಜೆಪಿ ಸಂಸದರು ಕೂಡ ಭಾರೀ ಪೈಪೋಟಿ ನಡೆಸುತ್ತಿದ್ದಾರೆ.

ಮೋದಿ ಸರ್ಕಾರದ ಸಂಭಾವ್ಯ ಸಚಿವರಿವರು

ಕಳೆದ ಬಾರಿ ವಿದೇಶಾಂಗ ಖಾತೆ ನಿರ್ವಹಿಸಿದ್ದ ಎಸ್ ಜೈಶಂಕರ್‌ಗೆ ರಾಜ್ಯಸಭಾ ಕೋಟಾದಡಿ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅಮಿತ್ ಶಾ, ನಿತಿನ್ ಗಡ್ಕರಿಗೆ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ. ಇದರ ಜೊತೆಗೆ ಲಖನೌದಿಂದ ಸ್ಪರ್ಧಿಸಿ ಗೆದ್ದಿರುವ ರಾಜನಾಥ್‌ ಸಿಂಗ್‌ಗೆ ಮತ್ತು ಅಮೇಠಿಯಿಂದ ಸ್ಪರ್ಧಿಸಿ ಸೋತಿರುವ ಸ್ಮೃತಿ ಇರಾನಿಗೆ ಈ ಬಾರಿಯೂ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ಅನುರಾಗ್‌ ಠಾಕೂರ್‌, ಪಿಯೂಷ್ ಗೋಯಲ್, ರಾಜಸ್ಥಾನದಿಂದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಭೂಪೇಂದ್ರ ಯಾದವ್​ಗೂ ಪಟ್ಟ ಸಿಗಬಹುದು. ದೆಹಲಿಯಿಂದ ಬಾನ್ಸೂರಿ ಸ್ವರಾಜ್, ರಾಂವೀರ್ ಸಿಂಗ್ ಬಿಧುರಿ, ಬಿಹಾರದಿಂದ ರಾಜೀವ್ ಪ್ರತಾಪ್ ರೂಡಿ ರೇಸ್‌ನಲ್ಲಿದ್ದಾರೆ.

ಮಿತ್ರರಿಗೆ ಎಷ್ಟು ಸಚಿವ ಸ್ಥಾನ?

  • ಚಿರಾಗ್ ಪಾಸ್ವಾನ್ – ಎಲ್‌ಜೆಪಿ, ಬಿಹಾರ
  • ಲಾಲ್ಲನ್ ಸಿಂಗ್ – ಜೆಡಿಯು, ಬಿಹಾರ
  • ಅನುಪ್ರಿಯಾ ಪಟೇಲ್ – ಅಪ್ನಾದಳ್, ಉತ್ತರಪ್ರದೇಶ
  • ಜೀತನ್ ರಾಮ್ ಮಾಂಝಿ – ಎಚ್​​ಎಎಂ, ಬಿಹಾರ

ಕರ್ನಾಟಕದಿಂದ ಕೇಂದ್ರ ಸಚಿವರಾಗೋದು ಯಾರು?

ಕರ್ನಾಟಕದಿಂದಲೂ ಹಲವರು ರೇಸ್‌ನಲ್ಲಿದ್ದಾರೆ. ಮೋದಿ ಸಂಪುಟ ಸೇರಲು ತಮ್ಮ ನಾಯಕರ ಮೂಲಕ ಲಾಬಿ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.

ರಾಜ್ಯದಲ್ಲಿ ಮೂರರಿಂದ ನಾಲ್ವರು ಸಂಸದರಿಗೆ ಸಚಿವ ಸ್ಥಾನ ಸಿಗಬಹುದು. ಆದರೆ ಡಜನ್‌ಗಟ್ಟಲೆ ನಾಯರು ರೇಸ್‌ನಲ್ಲಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾಗಿರೋ ಪ್ರಲ್ಹಾದ್ ಜೋಶಿ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಬಸವರಾಜ ಬೊಮ್ಮಾಯಿಗೆ ಅಮಿತ್ ಶಾ ಬೆಂಬಲವಿದೆ. ಶೆಟ್ಟರ್‌ಗೆ ಬಿಎಸ್‌ವೈ ಬಲವಿದ್ದು, ಇಬ್ಬರ ನಡುವೆ ಫೈಟ್ ಇದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದಿರುವ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದಿಂದ ಜಯ ಸಾಧಿಸಿರುವ ಪಿಸಿ ಮೋಹನ್ ಹೆಸರು ಚರ್ಚೆಯಲ್ಲಿದೆ. ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದ ಬಾಗಲಕೋಟೆಯ ಪಿ.ಸಿ ಗದ್ದಿಗೌಡರ್‌ ಕೂಡಾ ರೇಸ್‌ನಲ್ಲಿದ್ದಾರೆ. ಹಾಗೆಯೇ ಗೋವಿಂದ ಕಾರಜೋಳ ಜೊತೆಗೆ ಜೆಡಿಎಸ್‌ ಜೊತೆ ಮೈತ್ರಿಯಾಗಿರುವುದರಿಂದ ಹೆಚ್‌ಡಿ ಕುಮಾರಸ್ವಾಮಿಗೆ ಪಟ್ಟ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು? ಇಲ್ಲಿದೆ ವಿವರ

ಭಾನುವಾರ ಸಂಜೆ ಮೋದಿ ಜತೆ ಎಷ್ಟು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಇದೆ. ಸೋಮವಾರದ ಬಳಿಕ ಸಚಿವ ಸ್ಥಾನ ಹಂಚಿಕೆ ಫೈನಲ್ ಆಗಲಿದ್ದು, ಯಾಱರಿಗೆ ಅದೃಷ್ಟ ಖುಲಾಯಿಸಲಿದೆ ಎಂಬುದು ಗೊತ್ತಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Sat, 8 June 24

ತಾಜಾ ಸುದ್ದಿ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್