CWC meeting: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಅವಲೋಕನ

ಚುನಾವಣಾ ತಯಾರಿ ಮತ್ತು ಮೈತ್ರಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಖರ್ಗೆ, "ಸಂವಿಧಾನ, ಆರ್ಥಿಕ ಅಸಮಾನತೆ, ನಿರುದ್ಯೋಗ ಸಮಸ್ಯೆಗಳನ್ನು ಹೈಲೈಟ್ ಮಾಡಿ ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಯನ್ನು ಅಭಿನಂದಿಸಿದ್ದಾರೆ.

CWC meeting: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಅವಲೋಕನ
ಸಿಡಬ್ಲ್ಯೂಸಿ ಸಭೆ
Follow us
|

Updated on:Jun 08, 2024 | 3:03 PM

ದೆಹಲಿ ಜೂನ್ 08: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ಇಂದು (ಶನಿವಾರ) ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ನಡೆಯುತ್ತಿದೆ. 2024 ರ ಲೋಕಸಭೆ ಚುನಾವಣೆಯ (Lok Sabha Election) ನಂತರ ಪಕ್ಷದ ಮೊದಲ ಸಭೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರು ಮತ್ತು ದೇಶಾದ್ಯಂತದ ಲಕ್ಷಾಂತರ ಕಾರ್ಯಕರ್ತರ ಅಚಲ ನಿರ್ಧಾರ ಮತ್ತು ಕಠಿಣ ಪರಿಶ್ರಮಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ಖರ್ಗೆ ಸಭೆಯಲ್ಲಿ ತಮ್ಮ ಮಾತು ಆರಂಭಿಸಿದ್ದಾರೆ. “ಸಾರ್ವಜನಿಕರು ನಮ್ಮ ಮೇಲೆ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸರ್ವಾಧಿಕಾರಿ ಶಕ್ತಿಗಳು ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ಬಲವಾದ ಪ್ರತ್ಯುತ್ತರವನ್ನು ನೀಡಿದ್ದಾರೆ. ಭಾರತದ ಮತದಾರರು ಬಿಜೆಪಿಯ 10 ವರ್ಷಗಳ ವಿಭಜನೆ, ದ್ವೇಷ ಮತ್ತು ಧ್ರುವೀಕರಣದ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಪ್ರತಿಕೂಲ ಸಂದರ್ಭಗಳಲ್ಲಿ ಚುನಾವಣೆಯಲ್ಲಿ ಹೋರಾಡಿ ಗೆದ್ದ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ ಸದಸ್ಯರಿಗೆ ಅಭಿನಂದನೆಗಳು ಎಂದು ಖರ್ಗೆ ಹೇಳಿದ್ದಾರೆ.

ಚುನಾವಣಾ ತಯಾರಿ ಮತ್ತು ಮೈತ್ರಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಖರ್ಗೆ, “ಸಂವಿಧಾನ, ಆರ್ಥಿಕ ಅಸಮಾನತೆ, ನಿರುದ್ಯೋಗ ಸಮಸ್ಯೆಗಳನ್ನು ಹೈಲೈಟ್ ಮಾಡಿ ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಯನ್ನು ಅಭಿನಂದಿಸಿದ್ದಾರೆ.

ಸಿಡಬ್ಲ್ಯೂಸಿ ಸಭೆ

ಭಾರತ್ ಜೋಡೋ ಯಾತ್ರೆಯ ಪ್ರಭಾವವನ್ನು ಎತ್ತಿ ಹಿಡಿದ ಖರ್ಗೆ, ಯಾತ್ರೆಗೆ ಅಂಗೀಕಾರ ಸಿಕ್ಕ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಶೇಕಡಾವಾರು ಮತ್ತು ಸ್ಥಾನಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. ಮಣಿಪುರವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು ಅಲ್ಲಿ ಪಕ್ಷವು ಎರಡೂ ಸ್ಥಾನಗಳನ್ನು ಗೆದ್ದಿದೆ. ನಾಗಾಲ್ಯಾಂಡ್, ಅಸ್ಸಾಂ ಮತ್ತು ಮೇಘಾಲಯದಂತಹ ಇತರ ಈಶಾನ್ಯ ರಾಜ್ಯಗಳಲ್ಲಿಯೂ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತದಾರರಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿದೆ. ಆದಾಗ್ಯೂ, ನಗರ ಮತದಾರರಲ್ಲಿ ಪಕ್ಷದ ಪ್ರಭಾವವನ್ನು ಬಲಪಡಿಸಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಲೋಕಸಭೆಯಲ್ಲಿ ಆ ಯಶಸ್ಸನ್ನು ಪುನರಾವರ್ತಿಸಲು ವಿಫಲವಾಗಿದೆ. ನಾವು ಶೀಘ್ರದಲ್ಲೇ ಈ ಎಲ್ಲಾ ವಿಷಯಗಳನ್ನು ಪ್ರತ್ಯೇಕವಾಗಿ ಚರ್ಚಿಸುತ್ತೇವೆ. ನಾವು ಕೂಡ ತಕ್ಷಣದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಅದೇ ವೇಳೆ ಇಂಡಿಯಾ ಬಣದ ಪಾಲುದಾರರ ಕೊಡುಗೆಗಳನ್ನು ಶ್ಲಾಘಿಸಿದ ಖರ್ಗೆ, ಸಂಸತ್ತಿನ ಒಳಗೆ ಮತ್ತು ಹೊರಗೆ ಏಕತೆ ಮತ್ತು ಸಾಮೂಹಿಕ ಕ್ರಿಯೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

“ಇಂಡಿಯಾ ಮೈತ್ರಿಕೂಟದ ಪಾಲುದಾರರನ್ನು ನಾನು ಅಂಗೀಕರಿಸದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲನಾಗುತ್ತೇನೆ, ಇದರಲ್ಲಿ ಪ್ರತಿಯೊಂದು ಪಕ್ಷವು ವಿವಿಧ ರಾಜ್ಯಗಳಲ್ಲಿ ಅದರ ಗೊತ್ತುಪಡಿಸಿದ ಪಾತ್ರವನ್ನು ವಹಿಸಿದೆ, ಪ್ರತಿ ಪಕ್ಷವು ಇನ್ನೊಂದಕ್ಕೆ ಕೊಡುಗೆ ನೀಡಿದೆ. ಇಂಡಿಯಾ ಬಣ ಮುಂದುವರೆಯಬೇಕು ಎಂಬುದು ನಮ್ಮ ಸಂಕಲ್ಪ. ಸಂಸತ್ತಿನಲ್ಲಿ ಮತ್ತು ಹೊರಗೆ ನಾವು ಒಗ್ಗಟ್ಟಾಗಿ ಮತ್ತು ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: PM Modi Oath Taking Ceremony: ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಗೆ ಆಗಮಿಸಿದ ಬಾಂಗ್ಲಾ ಪ್ರಧಾನಿ ಶೇಖಾ ಹಸೀನಾ

ನಾವು ಚುನಾವಣಾ ಪ್ರಚಾರದಲ್ಲಿ ಉಲ್ಲೇಖಿಸಿದ ವಿಷಯಗಳು ಸಾಮಾನ್ಯ ಜನರಿಗೆ ಕಾಳಜಿಯ ವಿಷಯಗಳಾಗಿವೆ. ಆದ್ದರಿಂದ, ಅವರು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ನಾವು ಜನರ ಈ ಪ್ರಶ್ನೆಗಳನ್ನು ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Sat, 8 June 24

ತಾಜಾ ಸುದ್ದಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ
Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು
Daily Horoscope: ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿ ಕಿಡಿ
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಒಂದೇ ಒಂದು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ..
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ಅಂತಾರಾಷ್ಟ್ರೀಯ ಯೋಗ ದಿನ; ದಟ್ಟ ಹಿಮದಲ್ಲಿ ಯೋಗಾಭ್ಯಾಸ ಮಾಡಿದ ಸೈನಿಕರು
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ಶ್ರೀನಿವಾಸ್​
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು