ನಿತೀಶ್​​​ಗೆ ಇಂಡಿಯಾ ಬಣದಿಂದ ಬಂದಿತ್ತು ಪ್ರಧಾನಿ ಆಫರ್​, ಆದರೆ NDA, ಹುದ್ದೆಗಿಂತ ಗೌರವ ನೀಡಿದೆ: ಕೆಸಿ ತ್ಯಾಗಿ

ಪ್ರಧಾನಿ ಮೋದಿ ಅವರು ಜೂ.9ರಂದು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆದರೆ ಇದರ ಮಧ್ಯೆ ಜೆಡಿಯು ನಾಯಕರೊಬ್ಬರು ಸತ್ಯವನ್ನು ಬಯಲು ಮಾಡಿದ್ದಾರೆ. ಇಂಡಿಯಾ ಒಕ್ಕೂಟದಿಂದ ನಿತೀಶ್​​​ ಅವರಿಗೆ ಪ್ರಧಾನಿ ಹುದ್ದೆಯ ಆಫರ್​​ ಬಂದಿತ್ತು. ಆದರೆ ಇದನ್ನು ಅವರು ತಿರಸ್ಕರ ಮಾಡಿದ್ದಾರೆ, ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

ನಿತೀಶ್​​​ಗೆ ಇಂಡಿಯಾ ಬಣದಿಂದ ಬಂದಿತ್ತು ಪ್ರಧಾನಿ ಆಫರ್​, ಆದರೆ NDA, ಹುದ್ದೆಗಿಂತ ಗೌರವ ನೀಡಿದೆ: ಕೆಸಿ ತ್ಯಾಗಿ
Follow us
|

Updated on: Jun 08, 2024 | 2:44 PM

ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಅವರು ಇದೀಗ ಡಿಮ್ಯಾಂಡ್​​​ ಮ್ಯಾನ್​​​​, ಇವರು ಇಂಡಿಯಾಕ್ಕೂ ಬೇಕು ಎನ್​ಡಿಎಗೂ ಬೇಕು, ಆದರೆ ನಿತೀಶ್ ಕುಮಾರ್ ಮಾತ್ರ ಎನ್​​ಡಿಎಗೆ ತಮ್ಮ ಬೆಂಬಲ ನೀಡಿದ್ದಾರೆ. ಪ್ರಧಾನಿ ಮೋದಿ ಆಡಳಿತವನ್ನು ಮೆಚ್ಚಿಕೊಂಡು, ಜತೆಯಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಎನ್​​ಡಿಎ ಸೇರಿಕೊಂಡಿದ್ದಾರೆ, ಆದರೆ ಇತ್ತ ಇಂಡಿಯಾ ಒಕ್ಕೂಟ ಅವರಿಗೆ ಪ್ರಧಾನಿ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ. ಈ ಹಿಂದೆ ನಿತೀಶ್ ಕುಮಾರ್ ನಮ್ಮ ಜತೆಗೆ ನಿಂತರೇ ನಾವು ಅವರಿಗೆ ಉಪಪ್ರಧಾನಿ ಸ್ಥಾನ ನೀಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಇದೀಗ ಜೆಡಿಯು ಪಕ್ಷದ ನಾಯಕ ಕೆಸಿ ತ್ಯಾಗಿ ಅವರು ನಿತೀಶ್ ಅವರಿಗೆ ಇಂಡಿಯಾ ಒಕ್ಕೂಟ ಪ್ರಧಾನಿ ಆಫರ್​​​ ನೀಡಿದ್ದರು ಎಂದು ಹೇಳಿದ್ದಾರೆ. ಆದರೆ ಅದನ್ನು ನಿತೀಶ್ ದಿಕ್ಕಾರಿಸಿದ್ದಾರೆ. ನಾವು ಎನ್‌ಡಿಎ ಜತೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ ಎಂದು ಕೆಸಿ ತ್ಯಾಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಇಂಡಿಯಾ ಒಕ್ಕೂಟಕ್ಕೆ ಸರಿಯಾದ ಸಂಖ್ಯಾ ಬಲ ಇಲ್ಲ. ಆ ಕಾರಣಕ್ಕೆ ಎನ್​​ಡಿಎ ಪಕ್ಷವನ್ನು ಹೊಡೆದು ನಿತೀಶ್ ಮತ್ತು ಚಂದ್ರಬಾಬು ನಾಯ್ಡು ಅವರನ್ನು ತಮ್ಮ ಬಳಿ ಸೆಳೆಯಬೇಕು ಎಂಬ ಪ್ರಯತ್ನ ಮಾಡಿದರು ಎಂಬ ಮಾತಿನ ಮಧ್ಯೆ ಈ ಸತ್ಯ ಹೊರಬಂದಿದೆ. ಚುನಾವಣೆ ಫಲಿತಾಂಶದ ನಂತರ ಇಂಡಿಯಾ ಬಣ ಸರ್ಕಾರ ರಚನೆ ಮಾಡಬೇಕು ಎಂಬ ಕಸರತ್ತು ಮಾಡಿತ್ತು. ಆದರೆ ಅದು ತಲೆಕೆಳಗಾಗಿದೆ. 543 ಸ್ಥಾನಗಳಲ್ಲಿ 234 ಸ್ಥಾನ ಪಡೆದ ಇಂಡಿಯಾ ಒಕ್ಕೂಟಕ್ಕೆ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಆದರೆ ಎನ್​​ಡಿಎ 293 ಸ್ಥಾನಗಳನ್ನು ಪಡೆದುಕೊಂಡಿದ್ದು, ಅದರಲ್ಲಿ ಬಿಜೆಪಿ 240 ಸ್ಥಾನಗಳನ್ನು ಗಳಿಸಿದ್ದು, ಬಹುಮತಕ್ಕೆ 32 ಸ್ಥಾನಗಳ ಕೊರತೆ ಇತ್ತು ಅದಕ್ಕಾಗಿ ನಿತೀಶ್ ಹಾಗೂ ಚಂದ್ರಬಾಬು ನಾಯ್ಡು ಅವರ ಬೆಂಬಲವನ್ನು ಪಡೆದಿದೆ.

ಇನ್ನು ನಿತೀಶ್​​ ಕುಮಾರ್​​​ಗೆ ಇಂಡಿಯಾ ಬಣ ನೀಡಿದ ಆಫರ್​​​ ಬಗ್ಗೆ ಕೆಸಿ ತ್ಯಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಿತೀಶ್​​​ ಕುಮಾರ್​​ ಅವರಿಗೆ ಇಂಡಿಯಾ ಬಣದ ಒಬ್ಬ ನಾಯಕ ಪ್ರಧಾನಿ ಸ್ಥಾನ ನೀಡುವುದಾಗಿ ಹೇಳಿದರು. ಆದರೆ ನಮಗೆ ಚುನಾವಣೆ ಸಮಯದಲ್ಲಿ ಇಂಡಿಯಾ ಒಕ್ಕೂಟ ಮಾಡಿದ ಮೋಸಕ್ಕೆ ಆ ಒಕ್ಕೂಟದಿಂದ ಹೊರಬಂದಿದ್ದೇವೆ. ಇದೀಗ ನಾವು ಎನ್‌ಡಿಎಗೆ ಸೇರಿದ್ದೇವೆ, ಈಗ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ರಾಹುಲ್ ಭರವಸೆ​​ ನೀಡಿದ್ದ 1 ಲಕ್ಷ ರೂ. ಗ್ಯಾರಂಟಿ ನೀಡಿ, ಚಡ್ಡಾ, ಸಂಜಯ್ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಆಗಾಗ ಮೈತ್ರಿ ಬದಲಾಯಿಸಲು ಹೆಸರುವಾಸಿಯಾದ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟ ವಾಸ್ತುಶಿಲ್ಪಿ, ಅವರ ನೇತೃತ್ವದಲ್ಲಿ ಪಾಟ್ನಾದಲ್ಲಿ ಮೊದಲ ಇಂಡಿಯಾ ಸಭೆ ನಡೆಯಿತು. ಆದರೆ ಅಲ್ಲಿ ನಡೆದ ಕುತಂತ್ರದಿಂದ ಇಂಡಿಯಾ ತೊರೆದು, ಎನ್​ಡಿಎ ಸೇರಿಕೊಂಡರು. ನೆನ್ನೆ (ಜೂ.7) ನಡೆದ ಎನ್​​ಡಿಎ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ನಾಳೆ (ಜೂ.9) ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ