Rahul Gandhi: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ; ನಿರ್ಣಯ ಅಂಗೀಕರಿಸಿದ ಸಿಡಬ್ಲ್ಯುಸಿ

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ ಅವರಿಗೆ ಸಿಡಬ್ಲ್ಯುಸಿ ಸರ್ವಾನುಮತದಿಂದ ವಿನಂತಿಸಿದೆ. ಸಂಸತ್ತಿನ ಒಳಗೆ ಈ ಅಭಿಯಾನವನ್ನು ಮುನ್ನಡೆಸಲು ರಾಹುಲ್ ಜಿ ಅತ್ಯುತ್ತಮ ವ್ಯಕ್ತಿ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

Rahul Gandhi: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ; ನಿರ್ಣಯ ಅಂಗೀಕರಿಸಿದ ಸಿಡಬ್ಲ್ಯುಸಿ
ರಾಹುಲ್ ಗಾಂಧಿ
Follow us
|

Updated on:Jun 08, 2024 | 3:38 PM

ದೆಹಲಿ ಜೂನ್ 08: ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ (LoP) ಪಾತ್ರವನ್ನು ವಹಿಸುವಂತೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಮನವಿ ಮಾಡುವ ನಿರ್ಣಯವನ್ನು ಅಂಗೀಕರಿಸಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ ಅವರಿಗೆ ಸಿಡಬ್ಲ್ಯುಸಿ ಸರ್ವಾನುಮತದಿಂದ ವಿನಂತಿಸಿದೆ. ಸಂಸತ್ತಿನ ಒಳಗೆ ಈ ಅಭಿಯಾನವನ್ನು ಮುನ್ನಡೆಸಲು ರಾಹುಲ್ ಜಿ ಅತ್ಯುತ್ತಮ ವ್ಯಕ್ತಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಲೋಕಸಭೆಯಲ್ಲಿ ವಿಪಕ್ಷ ನಾಯಕನ ಪಾತ್ರವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಅವರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹುಮ್ಮಸ್ಸಿನಿಂದ ಇದ್ದಾರೆ. ಸಿಡಬ್ಲ್ಯುಸಿಯಲ್ಲಿನ ವಾತಾವರಣವು ನಾಲ್ಕು ತಿಂಗಳ ಹಿಂದೆ ಇದ್ದದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಸುದ್ದಿಗೋಷ್ಠಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್ ಹೇಳಿದ್ದಾರೆ

ಮಾಧ್ಯಮಗಳೊಂದಿಗೆ ವೇಣುಗೋಪಾಲ್ ಮಾತು

ಈ ಬಗ್ಗೆ ಮಾಹಿತಿ ಇಲ್ಲ: ವೇಣುಗೋಪಾಲ್

ಇಂಡಿಯಾ ಮೈತ್ರಿಕೂಟದಿಂದ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಹುದ್ದೆಯ ಆಫರ್ ಬಂದಿತ್ತ  ಎಂಬ ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿರುವ ಕುರಿತು ಕೇಳಿದಾಗ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, “ನಮಗೆ ಅಂತಹ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, “ನಮ್ಮ ನಿರೀಕ್ಷೆಗಿಂತ ಕಡಿಮೆ ಸಾಧನೆ ತೋರಿದ ಪ್ರತಿಯೊಂದು ರಾಜ್ಯದಲ್ಲೂ ಸಮಿತಿಯನ್ನು ರಚಿಸಲಾಗುವುದು. ಆ ಸಮಿತಿಯು ಫಲಿತಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತನ್ನ ವರದಿಯನ್ನು ಆದಷ್ಟು ಬೇಗ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಲಿದೆ ಎಂದಿದ್ದಾರೆ.

CWC ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ, ಖಂಡಿತವಾಗಿಯೂ ಅವರು (ರಾಹುಲ್ ಗಾಂಧಿ) ಲೋಕಸಭೆಯಲ್ಲಿ ವಿಪಕ್ಷ ನಾಯಕ ಆಗಬೇಕು. ಇದು ನಮ್ಮ ಕಾರ್ಯಕಾರಿ ಸಮಿತಿಯ ವಿನಂತಿ. ಅವರು ನಿರ್ಭೀತ ಮತ್ತು ಧೈರ್ಯಶಾಲಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಿಡಬ್ಲ್ಯುಸಿ ನಿರ್ಣಯವು ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿಯವರ ಪ್ರಯತ್ನಗಳನ್ನು ಶ್ಲಾಘಿಸಿದೆ.

“ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿದ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಶ್ಲಾಘಿಸಬೇಕು. ಅವರ ಚಿಂತನೆ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಈ ಎರಡೂ ಯಾತ್ರೆಗಳು ನಮ್ಮ ರಾಷ್ಟ್ರದ ರಾಜಕೀಯದಲ್ಲಿ ಐತಿಹಾಸಿಕ ತಿರುವುಗಳಾಗಿದ್ದು, ನಮ್ಮ ಲಕ್ಷಾಂತರ ಕಾರ್ಯಕರ್ತರು ಮತ್ತು ನಮ್ಮ ಕೋಟಿಗಟ್ಟಲೆ ಮತದಾರರಲ್ಲಿ ಭರವಸೆ ಮತ್ತು ವಿಶ್ವಾಸವನ್ನು ತುಂಬಿದವು ಎಂದು ನಿರ್ಣಯವು ಹೇಳಿದೆ.

ಇದನ್ನೂ ಓದಿ: ನಿತೀಶ್​​​ಗೆ ಇಂಡಿಯಾ ಬಣದಿಂದ ಬಂದಿತ್ತು ಪ್ರಧಾನಿ ಆಫರ್​, ಆದರೆ NDA, ಹುದ್ದೆಗಿಂತ ಗೌರವ ನೀಡಿದೆ: ಕೆಸಿ ತ್ಯಾಗಿ

“ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರವು ಏಕ ಮನಸ್ಸಿನ, ತೀಕ್ಷ್ಣ ಮತ್ತು ಮೊನಚಾದ ಮತ್ತು ಇತರ ಯಾವುದೇ ವ್ಯಕ್ತಿಗಳಿಗಿಂತ ಹೆಚ್ಚಾಗಿ ಅವರು ನಮ್ಮ ಗಣರಾಜ್ಯದ ಸಂವಿಧಾನದ ರಕ್ಷಣೆಯನ್ನು 2024 ರ ಚುನಾವಣೆಯಲ್ಲಿ ಕೇಂದ್ರ ವಿಷಯವನ್ನಾಗಿ ಮಾಡಿದರು. ಚುನಾವಣಾ ಪ್ರಚಾರದಲ್ಲಿ ಅತ್ಯಂತ ಶಕ್ತಿಯುತವಾಗಿ ಪ್ರತಿಧ್ವನಿಸಿದ ಪಂಚನ್ಯಾಯ್-ಪಚ್ಚೀಸ್ ಗ್ಯಾರಂಟಿ ಕಾರ್ಯಕ್ರಮವು ರಾಹುಲ್ ಜಿ ಅವರ ಯಾತ್ರೆಗಳ ಫಲಿತಾಂಶವಾಗಿದೆ. ಇದರಲ್ಲಿ ಅವರು ಎಲ್ಲಾ ಜನರ ವಿಶೇಷವಾಗಿ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರ ಭಯ, ಕಾಳಜಿ ಮತ್ತು ಆಕಾಂಕ್ಷೆಗಳನ್ನು ಆಲಿಸಿದರು ಎಂದು ನಿರ್ಣಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sat, 8 June 24

ತಾಜಾ ಸುದ್ದಿ