ರಾಹುಲ್ ಭರವಸೆ ನೀಡಿದ್ದ 1 ಲಕ್ಷ ರೂ. ಗ್ಯಾರಂಟಿ ನೀಡಿ, ಚಡ್ಡಾ, ಸಂಜಯ್ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಇಂಡಿಯಾ ಒಕ್ಕೂಟದ ಗ್ಯಾರೆಂಟಿ: ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಮಹಿಳೆಯರಿಗೆ 1 ಲಕ್ಷ ರೂ. ಗ್ಯಾರಂಟಿ ಪರಿಣಾಮ ಈಗ ಕಾಣಿಸುತ್ತಿದೆ. ಇಂಡಿಯಾ ನಾಯಕರು ಇದೀಗ ಜನರ ಅಕ್ರೋಶವನ್ನು ಎದುರಿಸುತ್ತಿದ್ದಾರೆ. ರಾಹುಲ್ ನೀಡದ್ದ ಗ್ಯಾರಂಟಿ ಭರವಸೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಕಚೇರಿಗೂ ಕೂಡ ಮುತ್ತಿಗೆಯನ್ನು ಹಾಕುತ್ತಿದ್ದಾರೆ. ಇದೀಗ ಇಂಡಿಯಾ ಒಕ್ಕೂಟ ಇಬ್ಬರು ಸಂಸದರು ಈ ಪರಿಸ್ಥಿತಿಯನ್ನು ಎದುರಿಸಿದ್ದಾರೆ.
ದೆಹಲಿ, ಜೂ.8: ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ನೀಡಿದ್ದ 1 ಲಕ್ಷ ರೂ. ಗ್ಯಾರಂಟಿ ಇದೀಗ ಉಲ್ಟಾ ಹೊಡೆದಿದೆ. ಇಂಡಿಯಾ ನಾಯಕರು ಕಂಡಲ್ಲಿ ಜನರ ಅವರುನ್ನು ತಡೆದು 1 ಲಕ್ಷವನ್ನು ನೀಡುವಂತೆ ಮುತ್ತಿಗೆ ಹಾಕುತ್ತಿದ್ದಾರೆ. ಇದರ ಪರಿಣಾಮ ದೆಹಲಿಯಲ್ಲಿ ಕಂಡು ಬಂದಿದೆ. ಹೌದು ಮೈತ್ರಿಕೂಟದ ನಾಯಕರಾದ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ಅವರನ್ನು ದೆಹಲಿಯಲ್ಲಿ ಮಹಿಳೆಯರು ಮುತ್ತಿಗೆ ಹಾಕಿದ್ದಾರೆ. ಶಿವಸೇನೆಯ ಯುಬಿಟಿಯ ಸಂಜಯ್ ರಾವುತ್ ಅವರನ್ನು ಭೇಟಿಯಾಗಲು ಹೊರಟಿದ್ದ ಎಎಪಿ ನಾಯಕರಾದ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ಅವರ ಕಾರನ್ನು ದೆಹಲಿಯಲ್ಲಿ ಹಲವಾರು ಮಹಿಳೆಯರು ಸುತ್ತುವರೆದಿದ್ದರು. ರಾಹುಲ್ ಗಾಂಧಿ ಅವರು ನೀಡಿದ್ದ 1 ಲಕ್ಷ ರೂ. ಭರವಸೆಯನ್ನು ಈಡೇರಿಸುವಂತೆ ಒತ್ತಾಯ ಮಾಡಿದ್ದಾರೆ.
ಇತ್ತೀಚೆಗೆ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದ ‘ಗ್ಯಾರಂಟಿ ಕಾರ್ಡ್’ಗಳ ಹಿಡಿದುಕೊಂಡು ಲಕ್ನೋದಲ್ಲಿ ಮಹಿಳೆಯರು ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಘಟನೆ ನಂತರ ಇದು ನಡೆದಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಹಲವು ಮನೆಗಳಿಗೆ ‘ಗ್ಯಾರಂಟಿ ಕಾರ್ಡ್’ಗಳನ್ನು ವಿತರಿಸಿ, ಪ್ರತಿ ಬಡ ಕುಟುಂಬದ ಯಜಮನಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದಾಗಿ ಹೇಳಿತ್ತು. ಈ ಕಾರಣಕ್ಕೆ ಲಕ್ನೋದಲ್ಲಿ ಮಹಿಳೆಯರು ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಈ ಬಗ್ಗೆ ವಿಡಿಯೋ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ: ಭಾರತದಲ್ಲಿ 1 ವರ್ಷದೊಳಗೆ ಮಧ್ಯಂತರ ಚುನಾವಣೆ; ಕಾಂಗ್ರೆಸ್‌ನ ಭೂಪೇಶ್ ಬಘೇಲ್ ಭವಿಷ್ಯ
ಪ್ರಚಾರ ಸಮಯದಲ್ಲಿ ನಮ್ಮ ಮನೆ ಬಂದು ನಮ್ಮ ದಾಖಲೆಗಳು ಹಾಗೂ ವಿಳಾಸವನ್ನು ಪಡೆದು, ಚುನಾವಣೆ ನಂತರ ನಿಮ್ಮ ಖಾತೆಗೆ ಕಾಂಗ್ರೆಸ್ 1 ಲಕ್ಷ ರೂ. ಹಾಕುತ್ತೇವೆ ಎಂದು ಅರ್ಜಿಯನ್ನು ಪಡೆದು ಗ್ಯಾರಂಟಿ ಕಾರ್ಡ್ ನೀಡಿತ್ತು ಎಂದು ಅಲ್ಲಿ ಮಹಿಳೆಯರು ಹೇಳಿದರು. ಈ ಯೋಜನೆಯನ್ನು ತಿಳಿಸಲು ಸುಮಾರು 80 ಮಿಲಿಯನ್ ಮನೆಗಳನ್ನು ತಲುಪಲು ಕಾಂಗ್ರೆಸ್ ‘ಘರ್ ಘರ್ ಗ್ಯಾರಂಟಿ’ ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Sat, 8 June 24