ಮೋದಿಯ ಈ ಒಂದು ಎಕ್ಸ್​​​​ ಪ್ರತಿಕ್ರಿಯೆಗೆ ಉರಿದುಕೊಂಡ ಚೀನಾ, ಕಾರಣವೇನು?

ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಅನೇಕ ದೇಶದ ನಾಯಕರು ಶುಭಾಶಯಗಳನ್ನು ತಿಳಸಿದ್ದಾರೆ. ಈ ಪೈಕಿ ತೈವಾನ್​​​ ಅಧ್ಯಕ್ಷರು ಒಬ್ಬರು. ಇದೀಗ ಅವರ ಶುಭಾಶಯಕ್ಕೆ ಪ್ರಧಾನಿ ಮೋದಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಪ್ರತಿಕ್ರಿಯೆಯಿಂದ ಚೀನಾ ಉರಿದುಕೊಂಡಿದೆ. ಅದಷ್ಟು ಮೋದಿ ಪ್ರತಿಕ್ರಿಯಿಸಿದ್ದೇನು? ಚೀನಾ ಯಾಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ಮೋದಿಯ ಈ ಒಂದು ಎಕ್ಸ್​​​​ ಪ್ರತಿಕ್ರಿಯೆಗೆ ಉರಿದುಕೊಂಡ ಚೀನಾ, ಕಾರಣವೇನು?
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 08, 2024 | 11:02 AM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂ.9ಕ್ಕೆ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಜಗತ್ತಿನ ಬೇರೆ ಬೇರೆ ದೇಶದ ನಾಯಕರು ಮೋದಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತೈವಾನ್ ಅಧ್ಯಕ್ಷ ಕೂಡ ಮೋದಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಕೂಡ ರಾಜತಂತ್ರಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಪ್ರತಿಕ್ರಿಯೆಯನ್ನು ಚೀನಾಕ್ಕೆ ಸಹಿಕೊಳ್ಳಲಾಗುತ್ತಿಲ್ಲ. ಈಗಾಗಲೇ ತೈವಾನ್ ಜತೆಗೆ ದ್ವೇಷ ಕಟ್ಟಿಕೊಂಡಿರುವ ಚೀನಾ, ಮೋದಿ ಅವರ ಪ್ರತಿಕ್ರಿಯೆಯನ್ನು ವಿರೋಧಿಸಿದೆ. ನರೇಂದ್ರ ಮೋದಿ ಮತ್ತು ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಇಬ್ಬರು ಕೂಡ ಎಕ್ಸ್​ನಲ್ಲಿ​​​​ ಅಭಿನಂದನೆಯನ್ನು ತಿಳಿಸಿದ್ದಾರೆ. ಆದರೆ ಚೀನಾ ಭಾರತ ಮತ್ತು ತೈವಾನ್​​​ನ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಭಾರತ ಮತ್ತು ಚೀನಾ ನಡುವೆ ವ್ಯಾಪರ ಒಪ್ಪಂದಗಳು ಹಾಗೂ ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದಗಳು ಇದೆ. ಇದರ ಮಧ್ಯೆ ತೈವಾನ್ ಜತೆಗೆ ಭಾರತ ಸಂಬಂಧ ಬೆಳಸಿಕೊಳ್ಳುವುದು ಸರಿಯಲ್ಲ, ನಮಗೂ ತೈವಾನ್​​ ನಡುವೆ ಈಗಾಗಲೇ ಬಿರುಕು ಇದೆ ಎಂದು ಚೀನಾ ಹೇಳಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್, ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಭಾಗವಾಗಿದೆ ಎಂದು ಹೇಳಿದೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೈವಾನ್​​ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಒಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಹಾಗೂ ಒಳ್ಳೆಯ ವಿಚಾರಕ್ಕೆ ಅಭಿನಂದನೆ ಸಲ್ಲಿಸುವುದು ರಾಜತಾಂತ್ರಿಕ ವ್ಯವಹಾರದ ಸಾಮಾನ್ಯ ಭಾಗವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ವಿಜಯಕ್ಕಾಗಿ ನನ್ನ ಪ್ರಾಮಾಣಿಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್- ಭಾರತ. ತಮ್ಮ ಪಾಲುದಾರಿಕೆಯಲ್ಲಿ ಇನ್ನು ಹೆಚ್ಚಿನ ಬೆಂಬಲವನ್ನು ಎದುರು ನೋಡುತ್ತಿದೆ. ಹಾಗೂ ಇಂಡೋಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಎರಡು ದೇಶಗಳ ಸಹಯೋಗವನ್ನು ಬಯಸುತ್ತೇನೆ ಎಂದು ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಎಕ್ಸ್​​​ನಲ್ಲಿ ಪೋಸ್ಟ್ ಮಾಡಿದರು.

ಇದನ್ನೂ ಓದಿ: ರಾಹುಲ್ ಭರವಸೆ​​ ನೀಡಿದ್ದ 1 ಲಕ್ಷ ರೂ. ಗ್ಯಾರಂಟಿ ನೀಡಿ, ಚಡ್ಡಾ, ಸಂಜಯ್ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ನಿಮ್ಮ ಶುಭಾಶಯಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾವು ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಪಾಲುದಾರಿಕೆಯಲ್ಲಿ ನಿಮ್ಮ ಜತೆಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಈ ಒಂದು ಪ್ರತಿಕ್ರಿಯೆ ಚೀನಾಕ್ಕೆ ಭಯಗೊಳಿಸಿದೆ. ಇನ್ನು ಈ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ತೈವಾನ್ ಅಧಿಕಾರಿಗಳು ಮತ್ತು ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳ ನಡುವಿನ ಎಲ್ಲಾ ರೀತಿಯ ಅಧಿಕೃತ ಸಂವಹನಗಳನ್ನು ಚೀನಾ ವಿರೋಧಿಸುತ್ತದೆ. ಜಗತ್ತಿನಲ್ಲಿ ಒಂದೇ ಒಂದು ಚೀನಾ ಇದೆ. ತೈವಾನ್ ಭೂಪ್ರದೇಶದ ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್