AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ 1 ವರ್ಷದೊಳಗೆ ಮಧ್ಯಂತರ ಚುನಾವಣೆ; ಕಾಂಗ್ರೆಸ್‌ನ ಭೂಪೇಶ್ ಬಘೇಲ್ ಭವಿಷ್ಯ

ಭಾರತ ದೇಶದಲ್ಲಿ ಇನ್ನು 6 ತಿಂಗಳಿಂದ 1 ವರ್ಷದೊಳಗೆ ಮಧ್ಯಂತರ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಅದಕ್ಕೆ ಸಿದ್ಧರಾಗುವಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಘೇಲ್ ಮನವಿ ಮಾಡಿದ್ದಾರೆ.

ಭಾರತದಲ್ಲಿ 1 ವರ್ಷದೊಳಗೆ ಮಧ್ಯಂತರ ಚುನಾವಣೆ; ಕಾಂಗ್ರೆಸ್‌ನ ಭೂಪೇಶ್ ಬಘೇಲ್ ಭವಿಷ್ಯ
ಭೂಪೇಶ್ ಬಘೇಲ್
ಸುಷ್ಮಾ ಚಕ್ರೆ
|

Updated on: Jun 07, 2024 | 10:43 PM

Share

ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಎನ್​ಡಿಎ ಸರ್ಕಾರ ರಚಿಸುವುದು ಖಚಿತವಾಗಿದ್ದು, ನರೇಂದ್ರ ಮೋದಿ (Narendra Modi) ಇದೇ ಭಾನುವಾರ 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ನಡುವೆ ಕಾಂಗ್ರೆಸ್ ನಾಯಕ ಹಾಗೂ ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಇನ್ನು 1 ವರ್ಷದೊಳಗೆ ದೇಶವು ಮಧ್ಯಂತರ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕ ಮತ್ತು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಿದ ದಿನವೇ ಭೂಪೇಶ್ ಬಘೇಲ್ ಈ ಹೇಳಿಕೆ ನೀಡಿದ್ದಾರೆ. “ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಿ. 6 ತಿಂಗಳಿಂದ 1 ವರ್ಷದ ನಡುವೆ ಮಧ್ಯಂತರ ಚುನಾವಣೆ ನಡೆಯಲಿದೆ” ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭೂಪೇಶ್ ಬಘೇಲ್ ಹೇಳಿದ್ದಾರೆ.

ಇದನ್ನೂ ಓದಿ: ಕಾಲಿಗೆ ಬೀಳಲು ಬಂದ ನಿತೀಶ್​ ಕುಮಾರ್​ಗೆ ಪಿಎಂ ನರೇಂದ್ರ ಮೋದಿ ಮಾಡಿದ್ದೇನು?

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ರಾಜಸ್ಥಾನ ಕೌಂಟರ್ ಭಜನ್ ಲಾಲ್ ಶರ್ಮಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧವೂ ಭೂಪೇಶ್ ಬಘೇಲ್ ವಾಗ್ದಾಳಿ ನಡೆಸಿದರು. ಯೋಗಿ ಆದಿತ್ಯನಾಥ್ ಅವರ ಕುರ್ಚಿ ಅಲುಗಾಡುತ್ತಿದೆ. ಭಜನ್ ಲಾಲ್ ಶರ್ಮಾ ಅಲುಗಾಡುತ್ತಿದ್ದಾರೆ ಮತ್ತು ದೇವೇಂದ್ರ ಫಡ್ನವಿಸ್ ಕೂಡ ರಾಜೀನಾಮೆ ನೀಡುತ್ತಿದ್ದಾರೆ” ಎಂದು ಬಘೇಲ್ ಹೇಳಿದರು.

“ಒಂಟೆ ಈಗ ಪರ್ವತದ ಕೆಳಗೆ ಬಂದಿದೆ. ನರೇಂದ್ರ ಮೋದಿ ದಿನಕ್ಕೆ 3 ಬಾರಿ ಬಟ್ಟೆ ಬದಲಾಯಿಸುತ್ತಿದ್ದವರು ಈಗ ಒಂದೇ ಉಡುಪಿನಲ್ಲಿ 3 ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಅವರು ಇನ್ನು ಮುಂದೆ ತಿನ್ನುವುದು, ಕುಡಿಯುವುದು ಅಥವಾ ಏನು ಧರಿಸುತ್ತಾರೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಭೂಪೇಶ್ ಬಘೇಲ್ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Narendra Modi: ಎನ್‌ಡಿಎ ಬಲಿಷ್ಠ, ಸ್ಥಿರ ಮತ್ತು ಅಭಿವೃದ್ಧಿಯ ಧ್ಯೇಯ ಹೊಂದಿರುವ ಸರ್ಕಾರವನ್ನು ರಚಿಸಲಿದೆ: ಮೋದಿ

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಪಕ್ಷಗಳನ್ನು ಒಡೆಯುವ, ಚುನಾಯಿತ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕುವ ಮತ್ತು ಬೆದರಿಕೆ ಹಾಕುವವರಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ