Narendra Modi: ಎನ್‌ಡಿಎ ಬಲಿಷ್ಠ, ಸ್ಥಿರ ಮತ್ತು ಅಭಿವೃದ್ಧಿಯ ಧ್ಯೇಯ ಹೊಂದಿರುವ ಸರ್ಕಾರವನ್ನು ರಚಿಸಲಿದೆ: ಮೋದಿ

ಎನ್‌ಡಿಎಗೆ ಮೂರನೇ ಬಾರಿಗೆ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಮಗೆ ಅವಕಾಶ ನೀಡಿದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಮೊದಲಿನಂತೆಯೇ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Narendra Modi: ಎನ್‌ಡಿಎ ಬಲಿಷ್ಠ, ಸ್ಥಿರ ಮತ್ತು ಅಭಿವೃದ್ಧಿಯ ಧ್ಯೇಯ ಹೊಂದಿರುವ ಸರ್ಕಾರವನ್ನು ರಚಿಸಲಿದೆ: ಮೋದಿ
ನರೇಂದ್ರ ಮೋದಿ
Follow us
|

Updated on:Jun 07, 2024 | 7:34 PM

ದೆಹಲಿ ಜೂನ್ 07: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ (Narendra Modi) ಅವರನ್ನು ಆಯ್ಕೆ ಮಾಡಿದ ನಂತರ ರಾಷ್ಟ್ರಪತಿ  ದ್ರೌಪದಿ ಮುರ್ಮು (Droupadi Murmu) ಅವರು ಕೇಂದ್ರದಲ್ಲಿ ಸರ್ಕಾರ ರಚಿಸಲು ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಮುರ್ಮು ಅವರನ್ನು ಭೇಟಿಯಾದ ನಂತರ ರಾಷ್ಟ್ರಪತಿ ಭವನದ ಹೊರಗೆ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಮೋದಿ, ‘ರಾಷ್ಟ್ರಪತಿಯವರು ಈಗಲೇ ಕರೆ ಮಾಡಿ ಪ್ರಧಾನಿಯಾಗಿ ಕೆಲಸ ಮಾಡುವಂತೆ ಹೇಳಿದ್ದು, ಪ್ರಮಾಣ ವಚನ ಸಮಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. 9ರಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವುದಾಗಿ ನಾನು ಹೇಳಿದ್ದೇನೆ. ಜೂನ್‌ನಲ್ಲಿ ರಾಷ್ಟ್ರಪತಿ ಭವನವು ಉಳಿದ ವಿವರಗಳನ್ನು ಸಿದ್ಧಪಡಿಸುತ್ತದೆ. ಆ ನಂತರ ನಾವು ಸಚಿವರ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸುತ್ತೇವೆ ಎಂದಿದ್ದಾರೆ.

“ಎನ್‌ಡಿಎಗೆ ಮೂರನೇ ಬಾರಿಗೆ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಮಗೆ ಅವಕಾಶ ನೀಡಿದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಮೊದಲಿನಂತೆಯೇ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

ಮೋದಿ ಭಾಷಣ

ಮೂರನೇ ಬಾರಿಗೆ ಎನ್‌ಡಿಎಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, 18ನೇ ಲೋಕಸಭೆಯಲ್ಲಿ, “ಅದೇ ವೇಗ ಮತ್ತು ಸಮರ್ಪಣೆಯೊಂದಿಗೆ ದೇಶದ ಆಕಾಂಕ್ಷೆಗಳನ್ನು ಈಡೇರಿಸುತ್ತೇವೆ” ಎಂದು ಮೋದಿ ಭರವಸೆ ನೀಡಿದ್ದಾರೆ.

18 ನೇ ಲೋಕಸಭೆಯು ಒಂದು ರೀತಿಯಲ್ಲಿ, ಹೊಸ ಶಕ್ತಿ, ಯುವ ಶಕ್ತಿಯಿಂದ ಕೂಡಿದೆ. ಈ 18 ನೇ ಲೋಕಸಭೆಯು 2047 ರಲ್ಲಿ ದೇಶವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಆ ಕನಸುಗಳನ್ನು ನನಸಾಗಿಸುವ ಪ್ರಮುಖ ಮೈಲಿಗಲ್ಲು” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ

“ಈ 10 ವರ್ಷಗಳ ಅವಧಿಯಲ್ಲಿ, ಭಾರತವು ವಿಶ್ವಕ್ಕೆ ವಿಶ್ವಬಂಧು ಆಗಿ ಹೊರಹೊಮ್ಮಿದೆ. ಅದರ ಗರಿಷ್ಠ ಪ್ರಯೋಜನವು ಈಗ ಪ್ರಾರಂಭವಾಗಿದೆ.  ಮುಂದಿನ 5 ವರ್ಷಗಳು ಜಾಗತಿಕ ಪರಿಸರದಲ್ಲಿ ಭಾರತಕ್ಕೆ ತುಂಬಾ ಉಪಯುಕ್ತವಾಗಲಿದೆ ಎಂದು ನನಗೆ ಖಾತ್ರಿಯಿದೆ. ಜಗತ್ತು ಅನೇಕ ಬಿಕ್ಕಟ್ಟುಗಳು, ಅನೇಕ ಉದ್ವಿಗ್ನತೆಗಳು, ವಿಪತ್ತುಗಳನ್ನು ಎದುರಿಸುತ್ತಿದೆ.ನಾವು ಭಾರತೀಯರು ಅದೃಷ್ಟವಂತರು, ಅನೇಕ ದೊಡ್ಡ ಬಿಕ್ಕಟ್ಟುಗಳ ಹೊರತಾಗಿಯೂ, ನಾವು ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೆಸರಾಗಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Fri, 7 June 24

ತಾಜಾ ಸುದ್ದಿ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ