ಗಗನಯಾನದಿಂದ ಹಿಡಿದು, ಒಂದು ದೇಶ ಒಂದು ಚುನಾವಣೆವರೆಗೆ ಬಿಜೆಪಿಯ ಪ್ರಣಾಳಿಕೆ ಮುಖ್ಯಾಂಶಗಳು
BJP election manifesto 2024 Highlights: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಸರ್ಕಾರ ರಚನೆ ಮಾಡುತ್ತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುತ್ತಿದ್ದಾರೆ. ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದರೂ ಎನ್ಡಿಎ ಅವಶ್ಯಕ ಬಹುಮತ ಪಡೆಯುವಲ್ಲಿ ಸಫಲವಾಗಿದೆ. ಕಾಂಗ್ರೆಸ್ನ ಪ್ರಬಲ ಗ್ಯಾರಂಟಿ ಭರವಸೆಗಳ ನಡುವೆ ಬಿಜೆಪಿಯೂ ಕೂಡ ಚುನಾವಣಾ ಪ್ರಣಾಳಿಕೆಯಲ್ಲಿ ಒಂದಷ್ಟು ಭರವಸೆಗಳನ್ನು ಕೊಟ್ಟಿತ್ತು. ಅವುಗಳ ಮುಖ್ಯಾಂಶಗಳು ಇಲ್ಲಿವೆ....
ನವದೆಹಲಿ, ಜೂನ್ 7: ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿ ಎನ್ಡಿಎ ಮೈತ್ರಿಕೂಟ ಸರ್ಕಾರ ರಚಿಸುತ್ತಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಜೂನ್ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಟಿಡಿಪಿ ಮತ್ತು ಜೆಡಿಯು ಪಕ್ಷಗಳು ಐದು ವರ್ಷ ಸುಭದ್ರ ಆಡಳಿತಕ್ಕೆ ಅನುವು ಮಾಡಿಕೊಡುವ ಇರಾದೆ ತೋರಿವೆ. ಕಾಂಗ್ರೆಸ್ನ ಹಲವು ಗ್ಯಾರಂಟಿ ಭರವಸೆಗಳಿಗೆ ಪ್ರತಿಯಾಗಿ ಬಿಜೆಪಿಯೂ ಚುನಾವಣಾ ಪ್ರಣಾಳಿಕೆಯಲ್ಲಿ ಒಂದಷ್ಟು ಭರವಸೆಗಳನ್ನು (BJP election manifesto) ನೀಡಿತ್ತು. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡುವುದೂ ಗ್ಯಾರಂಟಿಗಳಲ್ಲಿ ಒಂದು. ಬಿಜೆಪಿಯ ಚುನಾವಣಾ ಪ್ರಣಾಳಿಕೆಗಳ ಮುಖ್ಯಾಂಶಗಳು ಇಂತಿವೆ:
ಬಿಜೆಪಿ ಚುನಾವಣಾ ಭರವಸೆಗಳ (2024ರಿಂದ 2029) ಮುಖ್ಯಾಂಶ
- ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡುವುದು.
- ಚಂದ್ರನ ನೆಲದ ಮೇಲೆ ಮನುಷ್ಯನನ್ನು ಇಳಿಸುವ ಯೋಜನೆ.
- 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಆಯುಷ್ಮಾನ್ ಯೋಜನೆ ನೆರವು
- ಐದು ವರ್ಷ ಕಾಲ ಉಚಿತ ಪಡಿತರ ಯೋಜನೆ ಮುಂದುವರಿಕೆ
- ಮುದ್ರಾ ಯೋಜನೆ ಅಡಿ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ
- ಪ್ರತೀ ಗ್ರಾಮ, ಪಟ್ಟಣ, ನಗರಗಳ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ.
- ಪಿಎಂ ಸೂರ್ಯ ಘರ್ ಬಿಜಲಿ ಯೋಜನೆ ಅಡಿಯಲ್ಲಿ ಬಡ ಮನೆಗಳಿಗೆ ಉಚಿತ ವಿದ್ಯುತ್.
- ಐಐಟಿ, ಐಐಎಂ, ಎಐಐಎಂಎಸ್ ಮತ್ತಿತರ ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಳ.
- 2036ರ ಒಲಿಂಪಿಕ್ ಗೇಮ್ಸ್ಗೆ ಬಿಡ್ ಸಲ್ಲಿಸುವುದು.
ಇದನ್ನೂ ಓದಿ: ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ
- ಉತ್ತರ ಭಾರತ, ದಕ್ಷಿಣ ಭಾರತ ಮತ್ತು ಪೂರ್ವ ಭಾರತದಲ್ಲಿ ಬುಲೆಟ್ ಟ್ರೈನ್ ಕಾರಿಡಾರ್.
- ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ಕಾರ್, ವಂದೇ ಭಾರತ್ ಮೆಟ್ರೋ ಹೀಗೆ ಮೂರು ಮಾದರಿ ವಂದೇ ಭಾರತ್ ರೈಲುಗಳ ಪರಿಚಯ.
- ರೈಲು ಸಂಬಂಧಿತ ಎಲ್ಲಾ ಸೇವೆಗಳನ್ನು ಒದಗಿಸುವ ಸೂಪರ್ ಆ್ಯಪ್ ಪರಿಚಯ.
- ಹೊಸ ತಲೆಮಾರಿನ ರೈಲುಗಳು, ವಿಶ್ವದರ್ಜೆಯ ನಿಲ್ದಾಣಗಳ ಸ್ಥಾಪನೆ
- ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಮತ್ತು ಪರೀಕ್ಷೆ ಪಾರದರ್ಶಕವಾಗಿ ನಡೆಯಲು ಕಾನೂನು.
- ಒಂದು ದೇಶ ಒಂದು ವಿದ್ಯಾರ್ಥಿ ಐಡಿ ಯೋಜನೆ. ಪ್ರೀಸ್ಕೂಲ್ನಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳಿಂದ ಹಿಡಿದು ಪ್ರತಿಯೊಂದು ಮಾಹಿತಿಯೂ ಒಂದು ರಿಜಿಸ್ಟ್ರಿಯಲ್ಲಿ ಸಂಗ್ರಹವಾಗುವಂತಹ ವ್ಯವಸ್ಥೆ.
- ಒಂದು ದೇಶ ಒಂದು ಚುನಾವಣೆ ಜಾರಿ
- ಪಿಎಂ ಆವಾಸ್ ಯೋಜನೆ ಮತ್ತು ಪಿಎಂ ಉಜ್ವಲ ಯೋಜನೆ ವಿಸ್ತರಣೆ
- ಬಡವರಿಗೆ ಮೂರು ಕೋಟಿ ಹೆಚ್ಚು ಮನೆಗಳು
- ಮೂರು ಕೋಟಿ ಮಹಿಳಾ ಸ್ವಸಹಾಯ ಗುಂಪುಗಳು
- ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಾಸ್ಟಲ್.
- ವಿವಿಧ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ತೀರ್ಥ ಯಾತ್ರೆ ಯೋಜನೆ
- ತರಕಾರಿ ಉತ್ಪಾದನೆ ಮತ್ತು ಸಂಗ್ರಹಕ್ಕೆ ಹೊಸ ಕ್ಲಸ್ಟರ್ಗಳು
- ಹೊಸ ಗ್ಲೋಬಲ್ ಕ್ಯಾಪಿಟಲ್ ಸೆಂಟರ್, ಟೆಕ್ ಸೆಂಟರ್ ಮತ್ತು ಎಂಜಿನಿಯರಿಂಗ್ ಸೆಂಟರ್ಗಳ ಸ್ಥಾಪನೆ.
- ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಳ
- ನಾಗರಿಕ ವಿಮಾನಯಾನ ಅಮೃತ ಕಾಲ ಯೋಜನೆ. ಏರ್ಪೋರ್ಟ್ಗಳನ್ನು ಪ್ರಾದೇಶಿಕ ಅಂತಾರಾಷ್ಟ್ರೀಯ ಹಬ್ಗಳಾಗಿ ಪರಿವರ್ತನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ