AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನನ್ನು ಕೊಂದು ಹೃದಯಾಘಾತ ಎಂದು ಬಿಂಬಿಸಲು ಪತ್ನಿ ಯತ್ನ, ಕೊಲೆ ಎಂದು ತಿಳಿದಿದ್ಹೇಗೆ?

ಹೈದರಾಬಾದ್‌ನಲ್ಲಿ ಪತಿಯನ್ನು ಕೊಂದು ಹೃದಯಾಘಾತವೆಂದು ಬಿಂಬಿಸಲು ಯತ್ನಿಸಿದ ಪತ್ನಿಯ ಕೃತ್ಯ ಬಯಲಾಗಿದೆ. ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿ, ಶೌಚಾಲಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಳು. ಪೊಲೀಸರು ಮೃತದೇಹದ ಮೇಲೆ ಅನುಮಾನಾಸ್ಪದ ಗಾಯಗಳನ್ನು ಪತ್ತೆಹಚ್ಚಿ, ಸಿಸಿಟಿವಿ ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ತನಿಖೆ ನಡೆಸಿದರು. ಕೊನೆಗೆ ಪತ್ನಿ ತನ್ನ ತಪ್ಪೊಪ್ಪಿಕೊಂಡಿದ್ದಾಳೆ.

ಗಂಡನನ್ನು ಕೊಂದು ಹೃದಯಾಘಾತ ಎಂದು ಬಿಂಬಿಸಲು ಪತ್ನಿ ಯತ್ನ, ಕೊಲೆ ಎಂದು ತಿಳಿದಿದ್ಹೇಗೆ?
ಪೊಲೀಸ್Image Credit source: NDTV
ನಯನಾ ರಾಜೀವ್
|

Updated on: Dec 23, 2025 | 7:57 AM

Share

ಹೈದರಾಬಾದ್, ಡಿಸೆಂಬರ್ 23: ಗಂಡನನ್ನು ಕೊಂದು ಹೃದಯಾಘಾತ ಎಂಬು ಬಿಂಬಿಸಲು ಹೋಗಿ ಮಹಿಳೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದು ಹೃದಯಾಘಾತವಾಗಿ ಶೌಚಾಲಯದಲ್ಲಿ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಆಕೆಯ ಪತಿ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 11ರಂದು ಬೋಡುಪ್ಪಲ್​ನಲ್ಲಿರುವ ನಿವಾಸದಲ್ಲಿ 45 ವರ್ಷದ ವ್ಯಕ್ತಿಯನ್ನು ಅವರ ಪತ್ನಿ ಹಾಗೂ ಆಕೆಯ ಜತೆ ಸಂಬಂಧ ಹೊಂದಿದ್ದ ಕಟ್ಟಡ ಕಾರ್ಮಿಕ ಸೇರಿ ಕೊಲೆ(Crime) ಮಾಡಿದ್ದರು ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ.

ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳುವ ಮೂಲಕ ಮಹಿಳೆ ಸಂಬಂಧಿಕರನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಪತಿ ಮನೆಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಲ್ಕಾಜ್‌ಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಅವರು ಮೆಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ತನಿಖೆಯ ಸಮಯದಲ್ಲಿ, ಮೃತ ದೇಹದ ಮೇಲೆ ಅನುಮಾನಾಸ್ಪದ ಗಾಯಗಳು ಕಂಡುಬಂದಿದ್ದು, ಅದರಲ್ಲಿ ಕೆನ್ನೆ ಮತ್ತು ಕುತ್ತಿಗೆಯ ಮೇಲಿನ ಗಾಯಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ, ಇದು ಸಾವಿನ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ಓದಿ: ಅಮೆರಿಕದಿಂದ ಭಾರತಕ್ಕೆ ಬಂದು ಕೊಲೆ ಮಾಡಿ ಪರಾರಿಯಾಗುವಾಗ ಸಿಕ್ಕಿಬಿದ್ದ ಎನ್​ಆರ್​ಐ

ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ, ಮಹಿಳೆ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯ ಸಮಯದಲ್ಲಿ ಮಹಿಳೆಯ ಪತಿ ಈ ಸಂಬಂಧದ ಬಗ್ಗೆ ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದ್ದ, ತನಗೆ ಕಿರುಕುಳ ನೀಡುತ್ತಿದ್ದ ಈ ಕಾರಣದಿಂದ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

ಡಿಸೆಂಬರ್ 11 ರಂದು, ಮ್ಯಾನೇಜರ್ ಕೆಲಸದಿಂದ ಮನೆಗೆ ಹಿಂದಿರುಗಿದ ನಂತರ ಪತನಿ ಹಾಗೂ ಪ್ರಿಯಕರ ಇಬ್ಬರೂ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಪತ್ನಿ ಪತಿಯ ಕಾಲು ಹಿಡಿದುಕೊಂಡರೆ, ಪ್ರಿಯಕರ ದುಪಟ್ಟಾದಲ್ಲಿ ಕತ್ತು ಬಿಗಿದು ಕೊಲೆ ಮಾಡಿದ್ದ. ಕೊಲೆಯ ನಂತರ, ಆರೋಪಿ ಬಲಿಪಶುವಿನ ಬಟ್ಟೆಗಳನ್ನು ಬದಲಾಯಿಸಿ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ