12ನೇ ದಿನ ಕೇವಲ ಲಕ್ಷಗಳಲ್ಲಿ ‘ದಿ ಡೆವಿಲ್’ ಗಳಿಕೆ; ಒಟ್ಟಾರೆ ಗ್ರಾಸ್ 33 ಕೋಟಿ ರೂ.
ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ 12 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದೆ. ಆರಂಭಿಕ ಅಬ್ಬರದ ನಂತರ, ಚಿತ್ರದ ಗಳಿಕೆ ಕುಸಿದಿದ್ದು, 12ನೇ ದಿನ ಕೇವಲ ಲಕ್ಷಗಳಲ್ಲಿ ಸಂಗ್ರಹಿಸಿದೆ. ಮಿಶ್ರ ಪ್ರತಿಕ್ರಿಯೆ ಮತ್ತು ಪೈರಸಿ ಇದಕ್ಕೆ ಕಾರಣ ಎನ್ನಲಾಗಿದ್ದು, ಮುಂಬರುವ ಹೊಸ ಸಿನಿಮಾಗಳಿಂದ 'ಡೆವಿಲ್' ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಚಿತ್ರದ ಒಟ್ಟು ಗಳಿಕೆ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ (Devil Movie) 12 ದಿನಗಳನ್ನು ಪೂರೈಸಿದೆ. ಮೊದಲ ಮೂರು ದಿನ ಅಬ್ಬರಿಸಿದ ಚಿತ್ರವು ನಂತರ ಮಂಕಾಗಿದೆ. ಫ್ಯಾನ್ಸ್ ಕೂಡ ಸಿನಿಮಾ ವೀಕ್ಷಣೆಯನ್ನು ನಿಲ್ಲಿಸಿದರೇ ಎಂಬ ಪ್ರಶ್ನೆ ಮೂಡಿದೆ. sacnilk ವರದಿ ಪ್ರಕಾರ ಈ ಸಿನಿಮಾದ ಭಾರತದ ಗ್ರಾಸ್ ಕಲೆಕ್ಷನ್ ಸರಿ ಸುಮಾರು 33 ಕೋಟಿ ರೂಪಾಯಿ. ನೆಟ್ ಕಲೆಕ್ಷನ್ 27.93 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ಚಿತ್ರದ ಲೈಫ್ಟೈಮ್ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಡೆವಿಲ್ ಸಿನಿಮಾ 12ನೇ ದಿನ (ಡಿಸೆಂಬರ್ 22) ಕೇವಲ 33 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ರಿಲೀಸ್ ಆದಾಗಿನಿಂದ ಈ ಚಿತ್ರ ಇಷ್ಟು ಕಡಿಮೆ ಗಳಿಕೆ ಮಾಡಿದ್ದು ಇದೇ ಮೊದಲು. ಸಿನಿಮಾಗೆ ಮುಂದಿನ ಎರಡು ದಿನ ಮಾತ್ರ ಅವಕಾಶ ಎಂದರೂ ತಪ್ಪಾಗಲಿಕ್ಕಿಲ್ಲ. ಆ ಬಳಿಕ ‘ಮಾರ್ಕ್’ ಹಾಗೂ ‘45’ ರಿಲೀಸ್ ಆಗಲಿದೆ. ಈ ಸಿನಿಮಾಗಳ ಅಬ್ಬರದಲ್ಲಿ ‘ಡೆವಿಲ್’ ಸಿನಿಮಾ ಸಂಪೂರ್ಣ ಮಂಕಾಗಲಿದೆ.
ಕಲೆಕ್ಷನ್ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಆದರೆ, ಸಾಮಾನ್ಯವಾಗಿ ಯಾವ ನಿರ್ಮಾಪಕರು ಕೂಡ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಅದರಲ್ಲೂ ಮಿಶ್ರಪ್ರತಿಕ್ರಿಯೆ ಪಡೆದ ಸಿನಿಮಾ ಸಂಕಷ್ಟದಲ್ಲಿ ಇರುತ್ತದೆ. ಹೀಗಾಗಿ, ಇದರ ಲೆಕ್ಕ ನೀಡಲು ಯಾವ ನಿರ್ಮಾಪಕರೂ ರೆಡಿ ಇರೋದಿಲ್ಲ.
ಇದನ್ನೂ ಓದಿ: ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್ನ ಬಿಗ್ ಬಾಸ್ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್
‘ಡೆವಿಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ದರ್ಶನ್ ಜೈಲಿನಲ್ಲಿ ಇರುವಾಗಲೇ ಸಿನಿಮಾ ರಿಲೀಸ್ ಆಯಿತು. ಆದರೆ, ಚಿತ್ರ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡಿಲ್ಲ ಎಂಬುದು ಬೇಸರದ ವಿಷಯ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ಒಂದು ಕಡೆಯಾದರೆ, ಚಿತ್ರದ ಪೈರಸಿ ಲಿಂಕ್ ಎಲ್ಲ ಕಡೆಗಳಲ್ಲಿ ಹರಿದಾಡಿದ್ದು ಮತ್ತೊಂದು ಕಡೆ. ಇದೆಲ್ಲವೂ ಸಿನಿಮಾಗೆ ಹಿನ್ನಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




