ನನಗೀಗ 52 ವರ್ಷ, ನನಗಿನ್ನೂ ಸ್ವಂತ ಮನೆಯಿಲ್ಲ ಎಂದ ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ವ್ಯಂಗ್ಯ

ಅದೊಂದು ಸಣ್ಣ ವಿಚಾರ ಆದರೆ ನಂತರ ಅದರ ಆಳ ಅರ್ಥವಾಯಿತು. ಯಾತ್ರೆ ಮನೆಯಾದ ದಿನ ಯಾತ್ರೆಯೇ ಬದಲಾಯಿತು. ಜನರು ನನ್ನೊಂದಿಗೆ ರಾಜಕೀಯದ ಬಗ್ಗೆ ಮಾತನಾಡಲಿಲ್ಲ. ತದನಂತರ ನಮ್ಮ ಪುಟ್ಟ ಮನೆ ಕಾಶ್ಮೀರವನ್ನು ತಲುಪಿದಾಗ ನಾನು ನನ್ನ ಮನೆಯನ್ನು ತಲುಪಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನನಗೀಗ 52 ವರ್ಷ, ನನಗಿನ್ನೂ ಸ್ವಂತ ಮನೆಯಿಲ್ಲ ಎಂದ ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ವ್ಯಂಗ್ಯ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 26, 2023 | 10:01 PM

ರಾಯ್‌ಪುರ: 1997 ರ ಚುನಾವಣೆಯ ನಂತರದ ಘಟನೆಯನ್ನು ವಿವರಿಸಿದ ರಾಹುಲ್ ಗಾಂಧಿ (Rahul Gandhi), ಒಂದು ದಿನ ಅವರ ತಾಯಿ ಅವರು ಮನೆಯಿಂದ ಹೊರಹೋಗುವುದಾಗಿ ಹೇಳುವವರೆಗೂ ನಮ್ಮ ಕುಟುಂಬ ವಾಸಿಸುತ್ತಿದ್ದ ಸರ್ಕಾರಿ ಮನೆ ನಮ್ಮದೇ ಎಂದು ನಾನು ಭಾವಿಸಿದ್ದೆ ಎಂದಿದ್ದಾರೆ. ಮನೆಯಲ್ಲಿ ವಿಚಿತ್ರ ಪರಿಸ್ಥಿತಿ ಇತ್ತು, ನಾನು ಅಮ್ಮನ ಬಳಿ ಹೋಗಿ ಏನಾಯಿತು ಎಂದು ಕೇಳಿದೆ. ನಾವು ಮನೆಯಿಂದ ಹೋಗುತ್ತಿದ್ದೇವೆ ಎಂದು ಅವರು ನನಗೆ ಹೇಳಿದರು. ಇದು ನನ್ನ ಮನೆ ಅಲ್ಲವೇ ಎಂದು ಕೇಳಿದಾಗ ಅಲ್ಲ, ಈ ಮನೆ ನಮ್ಮದಲ್ಲ, ಇದು ಸರ್ಕಾರದ್ದು ಎಂದು ಹೇಳಿದರು. ಇದು ಕೇಳಿ ಬೇಸರಗೊಂಡ ನಾನು ನಾವು ಎಲ್ಲಿ ಹೋಗುತ್ತೇವೆ ಎಂದು ಕೇಳಿದೆ. ನಹೀ ಮಾಲೂಮ್(ಗೊತ್ತಿಲ್ಲ ) ಎಂದು ನನ್ನ ಅಮ್ಮ ಸೋನಿಯಾ ಗಾಂಧಿ(Sonia Gandhi) ಹೇಳಿದರು.

ನನಗೀಗ 52 ವರ್ಷ, ನನಗೆ ಮನೆ ಇಲ್ಲ. ಅಲಹಾಬಾದ್‌ನಲ್ಲಿರುವ ಕುಟುಂಬದ ಮನೆ ನಮ್ಮದಲ್ಲ. ನಾನು 12, ತುಗ್ಲಕ್ ಲೇನ್ ನಲ್ಲಿ ವಾಸಿಸುತ್ತೇವನೆ. ಆದರೆ ಅದು ನನ್ನ ಮನೆಯಲ್ಲ. ನಾನು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದಾಗ, ಯಾತ್ರೆಗೆ ಸೇರಿದ ಎಲ್ಲಾ ಜನರಿಗಾಗಿ ನನ್ನ ಜವಾಬ್ದಾರಿ ಏನು ಎಂದು ನಾನು ಕೇಳಿದೆ.ಆಗ ನನ್ನ ಮನಸ್ಸಿಗೆ ಒಂದು ಉಪಾಯ ಹೊಳೆಯಿತು. ಯಾತ್ರೆಯ ವೇಳೆ ನನ್ನನ್ನು ಭೇಟಿಯಾಗಲು ಬರುವವರು ಮನೆಯಲ್ಲೇ ಇರಬೇಕೆಂದು ನನ್ನ ಕಚೇರಿಯವರಿಗೆ ಹೇಳಿದೆ. ಯಾತ್ರೆಯು ನಮ್ಮ ಮನೆಯಾಗಿರುತ್ತದೆ ಮತ್ತು ಈ ಮನೆಯ ಬಾಗಿಲು ಶ್ರೀಮಂತರು, ಬಡವರು, ಪ್ರಾಣಿಗಳುಎಲ್ಲರಿಗೂ ತೆರೆದಿರುತ್ತದೆ  ಎಂದು ರಾಯ್‌ಪುರದಲ್ಲಿ ನಡೆದ ಕಾಂಗ್ರೆಸ್‌ನ 85 ನೇ ಸರ್ವಸದಸ್ಯರ ಅಧಿವೇಶನದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ:ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕೈ ಮತಗಳಿಗೆ ಹೊಡೆತ, ಹೀಗಾಗಿ ಕೆರೆಯುತ್ತಿಲ್ಲ: ಪ್ರಲ್ಹಾದ್ ಜೋಶಿ

ಅದೊಂದು ಸಣ್ಣ ವಿಚಾರ ಆದರೆ ನಂತರ ಅದರ ಆಳ ಅರ್ಥವಾಯಿತು. ಯಾತ್ರೆ ಮನೆಯಾದ ದಿನ ಯಾತ್ರೆಯೇ ಬದಲಾಯಿತು. ಜನರು ನನ್ನೊಂದಿಗೆ ರಾಜಕೀಯದ ಬಗ್ಗೆ ಮಾತನಾಡಲಿಲ್ಲ. ತದನಂತರ ನಮ್ಮ ಪುಟ್ಟ ಮನೆ ಕಾಶ್ಮೀರವನ್ನು ತಲುಪಿದಾಗ ನಾನು ನನ್ನ ಮನೆಯನ್ನು ತಲುಪಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ಬಹಳ ಸಮಯ ತೆಗೆದುಕೊಂಡರು. 52 ವರ್ಷಗಳ ನಂತರ, ರಾಹುಲ್ ಗಾಂಧಿ ಅವರು ಜವಾಬ್ದಾರಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ನಂತರ ತಮ್ಮ ಜವಾಬ್ದಾರಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ನಾನು ನಿಮಗೆ ಹೇಳುತ್ತೇನೆ, ರಾಹುಲ್ ಗಾಂಧಿ ಜೀ, ಇತರ ಗಾಂಧಿ ಕುಟುಂಬ ಸದಸ್ಯರಂತೆ ನಿಮ್ಮ ಜವಾಬ್ದಾರಿ ಎಂದರೆ ಜವಾಬ್ದಾರಿಯಿಲ್ಲದ ಅಧಿಕಾರ ಎಂದಿದ್ದಾರೆ.

52 ವರ್ಷಗಳ ನಂತರ ನೀವು ಏನನ್ನು ಅರಿತುಕೊಂಡಿದ್ದೀರಿ ಎಂಬುದನ್ನು ನಮ್ಮ ಇಬ್ಬರು ಪ್ರಧಾನಿಗಳು ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಅರ್ಥಮಾಡಿಕೊಂಡರು. ಎಲ್ಲಾ ಸರ್ಕಾರಿ ಮನೆಗಳು ನಿಮಗೆ ಸೇರಿದ್ದು ಎಂದು ನೀವು ಭಾವಿಸಿದ್ದೀರಿ. ಇಂಗ್ಲಿಷ್‌ನಲ್ಲಿ, ಇದನ್ನು ಅರ್ಹತೆಯ ಅರ್ಥ ಎಂದು ಕರೆಯಲಾಗುತ್ತದೆ ಎಂದಿದ್ದಾರೆ ಪಾತ್ರಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Sun, 26 February 23