ಮೊದಲ ಹಂತದಲ್ಲಿ 1.30 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಇಂದಿನಿಂದ (ಮಾರ್ಚ್ 1) 2ನೇ ಹಂತದ ಲಸಿಕೆ ಅಭಿಯಾನ ಶುರುವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರೂ ಸಹ ಇತರ ರೋಗಗಳಿಂದ ಬಳಲುತ್ತಿದ್ದರೆ ಲಸಿಕೆ ಪಡೆಯಬಹುದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಸಾಕಷ್ಟು ರಾಷ್ಟ್ರೀಯ ನಾಯಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಎರಡನೇ ಹಂತದ ಕೊರೊನಾ ಲಸಿಕೆ ನೀಡುತ್ತಿರುವವರ ಬಗ್ಗೆ ಕೇಳಿದ ಪ್ರಶ್ನೆಗೆ ಖರ್ಗೆ ಉತ್ತರ ನೀಡಿದ್ದಾರೆ. ನನ್ನ ವಯಸ್ಸು 70 ವರ್ಷದಾಟಿದೆ. ನಾನು ಇನ್ನು ಹೆಚ್ಚು ಅಂದರೆ 10-15 ವರ್ಷ ಬದುಕಬಹುದು. ಹೀಗಾಗಿ ಬಾಳಿ ಬದುಕಬೇಕಾದ ಯುವಕರಿಗೆ ಕೊರೊನಾ ಲಸಿಕೆ ನೀಡಿ ಎಂದು ಮನವಿ ಮಾಡಿದ್ದಾರೆ.
ದೇಶದ 10 ಸಾವಿರ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲು ನಿರ್ಧರಿಸಿದ್ದು, 20 ಸಾವಿರ ಖಾಸಗಿ ಕೇಂದ್ರಗಳ ಮೂಲಕವೂ ಲಸಿಕೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆಗೆ 250 ರೂಪಾಯಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.
I am above 70 years of age. You should give it (#COVID19 vaccine) to youngsters who have a longevity in life as opposed to me. I merely have 10-15 more years to live: Mallikarjun Kharge, Leader of Opposition in Rajya Sabha, when asked if he would take the vaccine jab pic.twitter.com/n5ljqmInZt
— ANI (@ANI) March 1, 2021
ರಾಜಕೀಯ ನಾಯಕರಿಗೆ ಲಸಿಕೆ:
ಪ್ರಧಾನಿ ನರೇಂದ್ರ ಮೋದಿ ಅವರು ಕೊವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಂದು ಕೊರೊನಾ ಲಸಿಕೆ ಪಡೆದಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ಮೋದಿ ಲಸಿಕೆ ಪಡೆದುಕೊಂಡರೆ, ಮೇದಾಂತಾ ಆಸ್ಪತ್ರೆಯ ವೈದ್ಯರು ಅಮಿತ್ ಶಾಗೆ ಕೊರೊನಾ ಔಷಧ ಕೊಟ್ಟಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಪಡೆದ ಕೊವಿಡ್ ವ್ಯಾಕ್ಸಿನ್ ಯಾವುದು? ಲಸಿಕೆ ಪಡೆದ ಬಳಿಕ ಪುದುಚೇರಿ, ಕೇರಳದ ನರ್ಸ್ಗಳಿಗೆ ಹೇಳಿದ್ದೇನು?