‘ನಾನು ದುರ್ಬಲರು, ಬಡವರ ತಂದೆ‘-ರಾಕೇಶ್​ ಟಿಕಾಯತ್​ಗೆ ತಿರುಗೇಟು ನೀಡಿದ ಅಸಾದುದ್ದೀನ್​ ಓವೈಸಿ

| Updated By: Digi Tech Desk

Updated on: Sep 23, 2021 | 12:27 PM

Asaduddin Owaisi: ಈ ಹಿಂದೆ ಯೋಗಿ ಆದಿತ್ಯನಾಥ್​ ವಿರುದ್ಧ ಕಿಡಿಕಾರಿದ್ದ ಓವೈಸಿ,  ಯೋಗಿ ಆದಿತ್ಯನಾಥ್​ ಅವರೇಕೆ ಅಬ್ಬಾ ಜಾನ್​ ಎನ್ನುತ್ತಾರೆ? ಆ ಶಬ್ದದ ಬದಲಿಗೆ ಪಿತಾ ಜಿ ಎಂದು ಹೇಳಬಹುದಲ್ಲ ಎಂದು ಪ್ರಶ್ನಿಸಿದ್ದರು.

‘ನಾನು ದುರ್ಬಲರು, ಬಡವರ ತಂದೆ‘-ರಾಕೇಶ್​ ಟಿಕಾಯತ್​ಗೆ ತಿರುಗೇಟು ನೀಡಿದ ಅಸಾದುದ್ದೀನ್​ ಓವೈಸಿ
ಅಸಾದುದ್ದೀನ್​ ಓವೈಸಿ
Follow us on

ಸಂಭಾಲ್​: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ರೈತಸಂಘಟನೆ ಬಿಕೆಯು ಮುಖಂಡ ರಾಕೇಶ್​ ಟಿಕಾಯತ್​ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ. ಹಾಗೇ, ತಮ್ಮನ್ನು ತಾವು ದುರ್ಬಲ ವರ್ಗದ ತಂದೆ ಎಂದು ಕರೆದುಕೊಂಡಿದ್ದಾರೆ.  ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಪ್ರಚಾರ ಪ್ರಚಾರದ ವೇಳೆ ಮಾತನಾಡಿದ ಅವರು, ಕೆಲ ಜನರು ನನ್ನನ್ನು ಚಾಚಾ ಜಾನ್​ ಎಂದು ಕರೆಯುತ್ತಾರೆ. ಆದರೆ ನಾನು ದುರ್ಬಲರು, ಬಡವರ್ಗದವರು ಮತ್ತು ಉತ್ತರ ಪ್ರದೇಶದಲ್ಲಿ ದಬ್ಬಾಳಿಕೆಗೆ ಒಳಗಾದವರ ತಂದೆ ಎಂದು ಹೇಳಿಕೊಂಡಿದ್ದಾರೆ.  

ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಕೆಲವು ದಿನಗಳ ಹಿಂದೆ ಅಬ್ಬಾ ಜಾನ್​ ಎಂಬ ಪ್ರಯೋಗ ಮಾಡಿದ್ದರು. ಹಾಗೇ, ರಾಕೇಶ್​ ಟಿಕಾಯತ್​ ಅವರು ಅಸಾದುದ್ದೀನ್​ ಓವೈಸಿಯನ್ನು ಚಾಚಾ ಜಾನ್​ ಎಂದು ಕರೆದಿದ್ದರು. ಬಿಜೆಪಿ ಮತ್ತು ಓವೈಸಿ ಇಬ್ಬರೂ ಒಂದೇ ತಂಡ. ನಾವು ರೈತರು ಅವರ ನಡೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಲ್ಲದೆ, ಅಸಾದುದ್ದೀನ್​ ಓವೈಸಿ ಚಾಚಾ ಜಾನ್​  ಎಂದು ಹೇಳಿದ್ದರು.  ಅಸಾದುದ್ದೀನ್​ ಓವೈಸಿಗೆ ಬಿಜೆಪಿಯಿಂದ ಆಶೀರ್ವಾದ ಇದೆ. ಓವೈಸಿ ಬಿಜೆಪಿಯನ್ನು ನಿಂದಿಸಬಹುದು. ಆದರೆ ಬಿಜೆಪಿಯವರು ಅವರ ವಿರುದ್ಧ ಒಂದೂ ಪ್ರಕರಣ ದಾಖಲಿಸುವುದಿಲ್ಲ. ಓವೈಸಿಗೆ ಎರಡು ಮುಖ ಇದೆ. ಅವರಿಂದ ರೈತರ ಸರ್ವನಾಶ ಆಗುತ್ತದೆ. ಚುನಾವಣೆ ಸಮಯದಲ್ಲಿ ಒಟ್ಟಾಗಿ ಪಿತೂರಿಗಳನ್ನು ಮಾಡುತ್ತಾರೆ ಎಂದೂ ಟಿಕಾಯತ್​ ಆರೋಪಿಸಿದ್ದರು.

ಹಾಗೇ, ಈ ಹಿಂದೆ ಯೋಗಿ ಆದಿತ್ಯನಾಥ್​ ವಿರುದ್ಧ ಕಿಡಿಕಾರಿದ್ದ ಓವೈಸಿ,  ಯೋಗಿ ಆದಿತ್ಯನಾಥ್​ ಅವರೇಕೆ ಅಬ್ಬಾ ಜಾನ್​ ಎನ್ನುತ್ತಾರೆ? ಆ ಶಬ್ದದ ಬದಲಿಗೆ ಪಿತಾ ಜಿ ಎಂದು ಹೇಳಬಹುದಲ್ಲ. ಹೀಗೆ ಕೋಡ್​ ವರ್ಡ್​​ಗಳನ್ನು ಬಳಸುವುದು ಯಾಕೆ ಎಂದು ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದರು.  ಯೋಗಿ ಆದಿತ್ಯನಾಥ್​ ಅವರು ಸಮಾಜವಾದಿ ಪಕ್ಷವನ್ನು ಉದ್ದೇಶಿಸಿ ಮಾತನಾಡುವಾಗ ಮುಸ್ಲಿಂ ಸಮುದಾಯದವರನ್ನೂ ಉಲ್ಲೇಖಿಸಿ ಅಬ್ಬಾ ಜಾನ್​ ಎಂದು ಪದ ಪ್ರಯೋಗ ಮಾಡುತ್ತಿದ್ದರು.

ಉತ್ತರ ಪ್ರದೇಶ ಚುನಾವಣೆ ಸಿದ್ಧತೆ
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಸಿದ್ಧತೆಯಲ್ಲಿ ಅಸಾದುದ್ದೀನ್​ ಓವೈಸಿ ತೊಡಗಿದ್ದಾರೆ. ಯುಪಿಯಲ್ಲಿ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ.  2017ರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಕೇವಲ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಇದನ್ನೂ ಓದಿ: ಹಾಲು, ತಿಂಡಿಯ ಜೊತೆ ಆಲ್ಕೋ ಹಾಲ್ ಮಾರಾಟ; ಮದ್ಯ ಮಾರಾಟ ಮಾಡುತ್ತಿದ್ದವನಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು

Temple Tour: ಮೀಸೆ ಹೊತ್ತ ಶಕ್ತಿ ದೇವತೆ ಉಚ್ಚಂಗವ್ವನ ದರ್ಶನ ಮಾಡಿದ್ದೀರಾ?

Published On - 9:05 am, Thu, 23 September 21