ದೆಹಲಿಯಲ್ಲಿ ವಾಯುಮಾಲಿನ್ಯ ತಗ್ಗಿಸಲು ಸಿದ್ಧವಾಯ್ತು ಹೊಗೆ ಗೋಪುರ; ಅಕ್ಟೋಬರ್ 1ರಿಂದ ಕಾರ್ಯನಿರ್ವಹಣೆ
Smog Tower: ದೆಹಲಿಯ ಕಾನಾಟ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಹೊಗೆ ಗೋಪುರ 24 ಮೀಟರ್ ಎತ್ತರವಾಗಿದೆ. ಕಳೆದ ತಿಂಗಳು ಅಂದರೆ ಆಗಸ್ಟ್ 23ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉದ್ಘಾಟನೆ ಮಾಡಿದ್ದರು.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯವಂತೂ ಮಿತಿಮೀರಿದೆ. ಅಲ್ಲಿನ ಜನರು ಸ್ವಚ್ಛಗಾಳಿ ಉಸಿರಾಡಲು ಸಾಧ್ಯವಾಗದೆ ಶ್ವಾಸಕೋಶಿ ಸಂಬಂಧಿತ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಹೀಗಿರುವಾದ ದೆಹಲಿ ಸರ್ಕಾರ ಜನರಿಗೊಂದು ಗುಡ್ನ್ಯೂಸ್ ಕೊಟ್ಟಿದೆ. ದೆಹಲಿಯ ಕೊನಾಟ್ ಪ್ರದೇಶದಲ್ಲಿ ನಿರ್ಮಾಣವಾದ ಹೊಗೆ ಗೋಪುರ (Smog Tower)ದ ಪ್ರಯೋಗ ಮುಗಿದಿದೆ. ಅಕ್ಟೋಬರ್ 1ರಿಂದ ಈ ಗೋಪುರ ಕಾರ್ಯ ನಿರ್ವಹಿಸಲಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ. ಇಂದು ಟ್ವೀಟ್ ಮಾಡಿರುವ ಅವರು, ಹೊಗೆ ಗೋಪುರದ ಪ್ರಾಯೋಗಿಕ ಕಾರ್ಯ ಮುಕ್ತಾಯವಾಗಿದೆ. ಅಕ್ಟೋಬರ್ 1ರಿಂದ ಪೂರ್ಣ ಪ್ರಮಾಣದಲ್ಲಿ ಇದು ಕೆಲಸ ನಿರ್ವಹಿಸಲಿದೆ. ಅದರ ಉಸ್ತುವಾರಿ, ಮೇಲ್ವಿಚಾರಣೆ ನೋಡಿಕೊಳ್ಳಲು ಐಐಟಿ-ಬಾಂಬೆ, ಐಐಟಿ-ದೆಹಲಿ ಮತ್ತು ಡಿಪಿಸಿಸಿಯ ವಿಜ್ಞಾನಿಗಳ ತಂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಹೊಗೆ ಗೋಪುರ ಮಲಿನ ಯುಕ್ತ ಗಾಳಿಯನ್ನು ಶುದ್ಧೀಕರಣಗೊಳಿಸುತ್ತದೆ. ಇದರಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಯಲಿದೆ. ಜನರು ಶುದ್ಧವಾದ ಗಾಳಿಯನ್ನು ಉಸಿರಾಡಬಹುದು. ನಗರದಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದನ್ನು ತಡೆಯಲು ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲಿ ಈ ಹೊಗೆ ಗೋಪುರವೂ ಒಂದು. ಇನ್ನು ಚಳಿಗಾಲದಲ್ಲಂತೂ ಇನ್ನಷ್ಟು ಕೆಟ್ಟ ಅನುಭವ ಆಗುತ್ತದೆ. ಅದನ್ನು ತಡೆಯಲೆಂದೇ ಕ್ರಿಯಾಯೋಜನೆ ರೂಪಿಸಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಗೋಪಾಲ್ ರಾಯ್ ಮಾಹಿತಿ ನೀಡಿದ್ದಾರೆ.
स्मॉग टॉवर का ट्रायल पूरा हुआ। आगामी 1 अक्टूबर से फुल कैपेसिटी में काम करना करेगा शुरू। मॉनिटरिंग के लिए IIT Bombay, IIT Delhi और DPCC के साइंटिस्टों की टीम तैयार।
— Gopal Rai (@AapKaGopalRai) September 22, 2021
24 ಮೀಟರ್ ಎತ್ತರ ಇನ್ನು ದೆಹಲಿಯ ಕಾನಾಟ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಹೊಗೆ ಗೋಪುರ 24 ಮೀಟರ್ ಎತ್ತರವಾಗಿದೆ. ಕಳೆದ ತಿಂಗಳು ಅಂದರೆ ಆಗಸ್ಟ್ 23ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉದ್ಘಾಟನೆ ಮಾಡಿದ್ದರು. ಈ ಗೋಪುರದಲ್ಲಿರುವ 40 ಫ್ಯಾನ್ಗಳು ಮತ್ತು ಹತ್ತು ಸಾವಿರ ಫಿಲ್ಟರ್ಗಳನ್ನು ಮಿನ್ನೇಸೋಟ ವಿಶ್ವವಿದ್ಯಾಲಯದ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಚೀನಾದ ಕ್ಸಿಯಾನ್ನಲ್ಲಿರುವ 100 ಮೀ. ಎತ್ತರದ ಸ್ಮಾಗ್ ಟವರ್ನ್ನು ನಿರ್ಮಿಸಲು ಕೂಡ ಈ ತಂಡವೇ ಸಹಾಯ ಮಾಡಿತ್ತು. ಈ ಹೊಗೆ ಟವರ್ಗೆ ದೆಹಲಿ ಸರ್ಕಾರ 20 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಹಾಗೇ, ಸೆಪ್ಟೆಂಬರ್ ಪ್ರಾರಂಭದಲ್ಲಿ ಇನ್ನೊಂದು ಹೊಗೆ ಟವರ್ ದೆಹಲಿಯ ಆನಂದ್ ವಿಹಾರದಲ್ಲಿ ಉದ್ಘಾಟನೆಯಾಗಿದೆ.
ಇದನ್ನೂ ಓದಿ: ಕಿಯಾರಾ ಅಡ್ವಾಣಿ ಫ್ಯಾಷನ್ ಅಭಿರುಚಿಗೆ ಸಾಟಿ ಯಾರು? ಶೇರ್ಷಾ ಸುಂದರಿ ಈಗ ಸಖತ್ ಮಿಂಚಿಂಗ್
Shreyas Iyer: ತನ್ನನ್ನು ನಾಯಕನಾಗಿ ಆಯ್ಕೆ ಮಾಡದ ಬಗ್ಗೆ ಮೊದಲ ಬಾರಿ ಮೌನ ಮುರಿದ ಶ್ರೇಯಸ್ ಅಯ್ಯರ್
(Smog Tower At Connaught Place Of Delhi To Start Working From October 1)
Published On - 9:56 am, Thu, 23 September 21