ಲಖನೌ: ನಾನಂತೂ ಈಗ ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಲಸಿಕೆಯನ್ನು ನಂಬುವುದಾದರೂ ಹೇಗೆ ಎಂದು ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ವಿತರಣೆ ಯೋಜನೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯ ಮಾಡಿದ್ದಾರೆ.
ನನಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿತರಿಸಲಿರುವ ಕೊರೊನಾ ಲಸಿಕೆಯ ಮೇಲೆ ವಿಶ್ವಾಸವಿಲ್ಲ. ಹೀಗಾಗಿ, ಸರ್ಕಾರ ಲಸಿಕೆ ವಿತರಿಸಿದರೂ ಸಹ ನಾನು ಈಗಲೇ ಕೊರೊನಾ ಲಸಿಕೆ ಪಡೆಯುವುದಿಲ್ಲ ಎಂದಿರುವ ಅವರು, ಒಂದು ವೇಳೆ ನಮ್ಮ ಪಕ್ಷ ಸರ್ಕಾರ ರಚಿಸಿದರೆ ಎಲ್ಲರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
I am not going to get vaccinated for now. How can I trust BJP's vaccine, when our government will be formed everyone will get free vaccine. We cannot take BJP's vaccine: Samajwadi Party chief Akhilesh Yadav#COVID19 pic.twitter.com/qnmGENzUBH
— ANI UP (@ANINewsUP) January 2, 2021
ಬೆಳಗ್ಗೆಯಷ್ಟೇ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಕೊರೊನಾ ಲಸಿಕೆಯನ್ನು ದೇಶದ ಎಲ್ಲರಿಗೂ ಉಚಿತವಾಗಿ ವಿತರಿಸಲಾಗುವುದೆಂದು ಹೇಳಿಕೆ ನೀಡಿದ್ದರು. ಆದರೆ ತಮ್ಮ ಹೇಳಿಕೆಯನ್ನು ಟ್ವಿಟ್ಟರ್ನಲ್ಲಿ ಹಂಚಿ ಸ್ಪಷ್ಟನೆ ನೀಡಿದ್ದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು 2 ಕೋಟಿ ಕೊರೊನಾ ವಾರಿಯರ್ಗಳಿಗೆ ಮಾತ್ರ ಉಚಿತ ಲಸಿಕೆ ನೀಡಲಾಗುವುದು. ಉಚಿತ ಲಸಿಕೆ ಪಡೆಯಲಿರುವ ಉಳಿದ 27 ಕೋಟಿ ಜನರನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ. ಒಮ್ಮೆ ಎಲ್ಲ ದೇಶವಾಸಿಗಳಿಗೂ ಉಚಿತ ಲಸಿಕೆ ಒದಗಿಸುವ ಹೇಳಿಕೆ ನೀಡಿ, ನಂತರ 30 ಕೋಟಿ ಜನರಿಗೆ ಒದಗಿಸುತ್ತೇವೆ ಎಂಬ ಕೇಂದ್ರ ಸಚಿವರ ದ್ವಂದ್ವದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ತಿರುಗೇಟು ನೀಡಿದ್ದಾರೆ.
In 1st phase of #COVID19Vaccination free #vaccine shall be provided across the nation to most prioritised beneficiaries that incl 1 crore healthcare & 2 crore frontline workers
Details of how further 27 cr priority beneficiaries are to be vaccinated until July are being finalised pic.twitter.com/K7NrzGrgk3— Dr Harsh Vardhan (@drharshvardhan) January 2, 2021
ಇಂದು ನಡೆಯುತ್ತಿರೋದು ತಾಲೀಮು ಪ್ರಕ್ರಿಯೆ.. ಕೊರೊನಾ ಲಸಿಕೆ ವಿತರಣೆ ಅಲ್ಲ.. ಅಲ್ಲ.. ಅಲ್ಲ
Published On - 3:54 pm, Sat, 2 January 21