Lakhimpur Kheri Violence ‘ನಾನು ಮುಖ್ಯ ಅಲ್ಲ’: ಲಖಿಂಪುರ್ ಖೇರಿ ಗಡಿಯಲ್ಲಿ ಉತ್ತರ ಪ್ರದೇಶ ಪೊಲೀಸರೊಂದಿಗೆ ಪ್ರಿಯಾಂಕಾ ವಾಗ್ವಾದ

| Updated By: ರಶ್ಮಿ ಕಲ್ಲಕಟ್ಟ

Updated on: Oct 04, 2021 | 11:19 AM

Priyanka Gandhi: ನೀವು ಯಾವ ಸರ್ಕಾರದ ಪರವಾಗಿ ನಿಂತಿದ್ದಿರೋ ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ. ಅವರ ಮೇಲೆ ವಾಹನ ಹರಿದಿದೆ. ನಾನು ಅವರಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿಲ್ಲ. ನಾನು ಮನೆಯಿಂದ ಹೊರಗೆ ಕಾಲಿಟ್ಟು ಅಪರಾಧ ಮಾಡುತ್ತಿಲ್ಲ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ.

Lakhimpur Kheri Violence ‘ನಾನು ಮುಖ್ಯ ಅಲ್ಲ’: ಲಖಿಂಪುರ್ ಖೇರಿ ಗಡಿಯಲ್ಲಿ ಉತ್ತರ ಪ್ರದೇಶ ಪೊಲೀಸರೊಂದಿಗೆ ಪ್ರಿಯಾಂಕಾ ವಾಗ್ವಾದ
ಪ್ರಿಯಾಂಕಾ ಗಾಂಧಿ ವಾದ್ರಾ
Follow us on

ಲಕ್ನೊ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಸೋಮವಾರ ಬೆಳಿಗ್ಗೆ ಉತ್ತರ ಪ್ರದೇಶದ (Uttar Pradesh )ಸೀತಾಪುರ ಜಿಲ್ಲೆಯ ಹರ್​​ಗಾಂವ್ ನಲ್ಲಿ ಬಂಧಿಸಲಾಗಿದೆ. ಲಖಿಂಪುರ್ ಖೇರಿಯಲ್ಲಿ( Lakhimpur Kheri) ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದು ಅಲ್ಲಿಗೆ ಭೇಟಿ ನೀಡಲು ಪ್ರಿಯಾಂಕಾ ಹೋಗುತ್ತಿದ್ದ ವೇಳೆ ಪೊಲೀಸರು ತಡೆದಿದ್ದಾರೆ. ಭಾನುವಾರದ ಘಟನೆಯ ನಂತರ ಲಖಿಂಪುರ್ ಖೇರಿಗೆ ಹೋಗುತ್ತಿರುವ ಹಲವಾರು ವಿರೋಧ ಪಕ್ಷದ ನಾಯಕರನ್ನು ತಡೆಯಲಾಗಿದೆ. ಪ್ರಿಯಾಂಕಾ ಗಾಂಧಿ ಲಕ್ನೋಗೆ ಭೇಟಿ ನೀಡಿದಾಗ, ಆಕೆಯ ಬೆಂಗಾವಲು ವಾಹನಕ್ಕೆ ತಡೆಯೊಡ್ಡಲಾಯಿತು. ಪ್ರಿಯಾಂಕಾ ಲಕ್ನೋಗೆ ಭೇಟಿ ನೀಡಿದಾಗ ತಂಗಿದ್ದ ಕೌಲ್ ಹೌಸ್ ಅನ್ನು ಉತ್ತರ ಪ್ರದೇಶ ಪೊಲೀಸರು ಸುತ್ತುವರಿದರು. ಪ್ರಿಯಾಂಕಾ ಪೊಲೀಸರ ಕಣ್ತಪ್ಪಿಸಿ ತನ್ನ ನಿವಾಸದಿಂದ ಪಕ್ಕದ ಗೇಟ್ ಮೂಲಕ ಹೊರ ಬಂದು ಕಾರು ಹತ್ತಿದ್ದರು. ಕಾಂಗ್ರೆಸ್ ನಾಯಕ ದೀಪೇಂದ್ರ ಸಿಂಗ್ ಹೂಡಾ(Deependra Singh Hooda )ಪ್ರಿಯಾಂಕಾ ಅವರನ್ನು ಕಾರಿನಲ್ಲಿ ಲಖಿಂಪುರ್ ಖೇರಿಗೆ ಕರೆದೊಯ್ದಿದ್ದಾರೆ.

ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪ್ರಿಯಾಂಕಾ ಹರ್​ಗಾಂವ್ ತಲುಪಿದ ತಕ್ಷಣ ಅವರಿಗೆ ತಡೆಯೊಡ್ಡಲಾಯಿತು. ಪ್ರಿಯಾಂಕಾ ಮತ್ತು ಉತ್ತರಪ್ರದೇಶ ಪೋಲಿಸ್ ನಡುವೆ ಸಣ್ಣ ಜಗಳ ನಡೆದು ಪ್ರಿಯಾಂರಾ ಬಂಧನ ವಾರಂಟ್ ತೋರಿಸಿ ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ವಾಗ್ವಾದದ ವಿಡಿಯೊವನ್ನು ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಟ್ವೀಟ್ ಮಾಡಿದ್ದಾರೆ.


ವಿಡಿಯೊದಲ್ಲೇನಿದೆ?
ನೀವು ಯಾವ ಸರ್ಕಾರದ ಪರವಾಗಿ ನಿಂತಿದ್ದಿರೋ ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ. ಅವರ ಮೇಲೆ ವಾಹನ ಹರಿದಿದೆ. ನಾನು ಅವರಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿಲ್ಲ. ನಾನು ಮನೆಯಿಂದ ಹೊರಗೆ ಕಾಲಿಟ್ಟು ಅಪರಾಧ ಮಾಡುತ್ತಿಲ್ಲ. ನಾನು ಕೇವಲ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರ ದುಃಖವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಏನು ತಪ್ಪು ಮಾಡುತ್ತಿದ್ದೇನೆ? ನಾನು ಏನಾದರೂ ತಪ್ಪು ಮಾಡಿದ್ದರೆ, ನೀವು (ಯುಪಿ ಪೋಲಿಸ್) ಆದೇಶ, ವಾರಂಟ್ ಹೊಂದಿರಬೇಕು. ನೀವು (ಯುಪಿ ಪೋಲಿಸ್) ನನ್ನನ್ನು, ನನ್ನ ಕಾರನ್ನು ನಿಲ್ಲಿಸುತ್ತಿದ್ದೀರಿ, ಆದರೆ ಯಾವ ಕಾರಣಕ್ಕಾಗಿ? ಎಂದು ಹಿಂದಿಯಲ್ಲಿ ಪ್ರಿಯಾಂಕಾ ವಾಗ್ವಾದ ಮಾಡಿದ್ದಾರೆ.

ನಂತರ ಪೊಲೀಸ್ ಸಿಬ್ಬಂದಿ ಆಕೆಯನ್ನು ವಶಕ್ಕೆ ತೆಗೆದುಕೊಂಡು ಪಿಎಸಿ ಕಚೇರಿಗೆ ಕರೆತಂದರು. ಪ್ರಿಯಾಂಕಾ ಜೊತೆಗಿದ್ದ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ಮೂಲಕ ಆಕೆಯ ಬಂಧನವನ್ನು ವಿರೋಧಿಸಿದರು.

ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಭಾರತದ ರಾಜಕೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವವು ನಶಿಸಿಹೋಗಿದೆ ಎಂಬುದನ್ನು ಪ್ರಿಯಾಂಕಾ ಬಂಧನವು ಸಾಬೀತುಪಡಿಸಿದೆ. ನಾವು ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದೇವೆ ಮತ್ತು ಇಂತಹ ದಮನಕಾರಿ ಕ್ರಮಗಳಿಂದ ನಾವು ಹತಾಶರಾಗುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Priyanka Gandhi: ಉತ್ತರ ಪ್ರದೇಶದ ಹರಗಾಂವ್​ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಂಧನ

ಇದನ್ನೂ ಓದಿ: Lakhimpur Kheri Violence: ಲಖನೌದಲ್ಲಿ ಪೊಲೀಸ್​ ವಾಹನಕ್ಕೆ ಬೆಂಕಿ; ಅಖಿಲೇಶ್​ ಯಾದವ್​ಗೆ ಗೃಹಬಂಧನ