AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೆಲಂಗಾಣ ಸಿಎಂ ಕೆಸಿಆರ್​ ರಾಜ್ಯದ ಗರ್ಭಿಣಿಯರಿಗೆ ಪತಿಯಿದ್ದಂತೆ..’-​ ಹೊಗಳುವ ಭರದಲ್ಲಿ ವಿವಾದ ಸೃಷ್ಟಿಸಿದ ಟಿಆರ್​ಎಸ್​ ಶಾಸಕ

ಶಾಸಕ ಕೆ.ಚಂದ್ರಶೇಖರ್​ ರಾವ್​ ಭಾಷಣದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅವರನ್ನು ನೆಟ್ಟಿಗರು ವಿಪರೀತ ಟ್ರೋಲ್​ ಮಾಡಿದ್ದಾರೆ. ಮುಖ್ಯಮಂತ್ರಿ ಕೆಸಿಆರ್​ ಮಹಿಳೆಯರ ಪಾಲಿಗೆ ಕೇವಲ ಪಾಲಕರು ಮಾತ್ರವಲ್ಲ, ಗಂಡನೂ ಹೌದು ಎಂದು ವ್ಯಂಗ್ಯವಾಗಿ ಅನೇಕರು ಕಾಮೆಂಟ್​ ಮಾಡಿದ್ದಾರೆ.

‘ತೆಲಂಗಾಣ ಸಿಎಂ ಕೆಸಿಆರ್​ ರಾಜ್ಯದ ಗರ್ಭಿಣಿಯರಿಗೆ ಪತಿಯಿದ್ದಂತೆ..’-​ ಹೊಗಳುವ ಭರದಲ್ಲಿ ವಿವಾದ ಸೃಷ್ಟಿಸಿದ ಟಿಆರ್​ಎಸ್​ ಶಾಸಕ
ವಿವಾದ ಸೃಷ್ಟಿಸಿದ ಶಾಸಕ ರಾಜಯ್ಯ
TV9 Web
| Edited By: |

Updated on:Oct 04, 2021 | 11:59 AM

Share

ತೆಲಂಗಾಣದಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಅನುಕೂಲಕ್ಕಾಗಿ ಅಲ್ಲಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ (Telangana Chief Minister K Chandrasekhar Rao) ಅವರು ಕೆಸಿಆರ್​ ಕಿಟ್​ ಮತ್ತು ಅಮ್ಮಾ ವೋಡಿ ಎಂಬ ಎರಡು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಗರ್ಭಿಣಿಯರಿಗೆ ನೀಡಲಾಗುವ ಈ ಕೆಸಿಆರ್​ ಕಿಟ್​​ನಲ್ಲಿ, ಅವರಿಗೆ ಹೆರಿಗೆಯ ನಂತರ ಬೇಕಾಗುವ ಅತ್ಯಗತ್ಯವಾದ 16 ವಸ್ತುಗಳನ್ನು ಇಡಲಾಗುತ್ತದೆ. ಇದೀಗ ಈ ಯೋಜನೆಯನ್ನು, ಅದನ್ನು ಜಾರಿಗೊಳಿಸಿದ ಕೆಸಿಆರ್​​​ರನ್ನು ಹೊಗಳುವ ಭರದಲ್ಲಿ ತೆಲಂಗಾಣದ ಮಾಜಿ ಉಪಮುಖ್ಯಮಂತ್ರಿ, ಸ್ಟೇಶನ್​ ಘನಪುರ್​​ ಕ್ಷೇತ್ರದ ಶಾಸಕ ತಟಿಕೊಂಡ ರಾಜಯ್ಯ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.  

ಅಕ್ಟೋಬರ್​ 6ರಿಂದ ಪ್ರಾರಂಭವಾಗಲಿರುವ ಬಥುಕಮ್ಮ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಬಡ ಮಹಿಳೆಯರಿಗೆ ಬಥುಕಮ್ಮ ಸೀರೆ ವಿತರಣೆ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ. ಹಾಗೇ, ಲಿಂಗಾಲ ಘನಪುರ ಮಂಡಲದಲ್ಲೂ ಸೀರೆ ವಿತರಣೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಟಿಆರ್​ಎಸ್​ ಶಾಸಕ ರಾಜಯ್ಯ, ‘ನಮ್ಮ ರಾಜ್ಯದ ಮುಖ್ಯಮಂತ್ರಿ ಕೆಸಿಆರ್​ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರು, ನವಜಾತ ಶಿಶುಗಳಿಗಾಗಿ ಕೆಸಿಆರ್​​ ಕಿಟ್​​ನಂತಹ ಯೋಜನೆಗಳನ್ನು ರೂಪಿಸಿದ್ದಾರೆ. ಈ ಕಿಟ್​​ನಲ್ಲಿ ಸೀರೆ, ಮಗುವಿಗೆ ಬೇಕಾದ ಸೋಪ್​, ಡೈಪರ್​, ಎರಡು ಜತೆ ಬಟ್ಟೆ, ಎಣ್ಣೆ, ಸೊಳ್ಳೆ ಪರದೆ ಸೇರಿ ಹಲವು ಅಗತ್ಯ ವಸ್ತುಗಳು ಇರಲಿದೆ. ಒಬ್ಬ ಗರ್ಭಿಣಿಗೆ ಆಕೆಯ ಪತಿ ಮಾಡಿಕೊಡಬೇಕಾದ ವ್ಯವಸ್ಥೆಯನ್ನು ಕೆಸಿಆರ್​ ಮಾಡಿಕೊಡುತ್ತಿದ್ದಾರೆ. ಗರ್ಭಿಣಿಯರಿಗೆ ಆಕೆಯ ಪತಿ, ತಂದೆ-ತಾಯಿ, ಅತ್ತೆ-ಮಾವ ನೀಡುವುದಕ್ಕಿಂತಲೂ ಹೆಚ್ಚಿನ ಸೌಲಭ್ಯ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ‘ರಾಜ್ಯದಲ್ಲಿ ಗರ್ಭಿಣಿಯರ ಪಾಲಿಗೆ ಪತಿಯ ಪಾತ್ರ ವಹಿಸಿ, ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದೂ ಹೇಳಿದ್ದಾರೆ.

ಸಿಕ್ಕಾಪಟೆ ಟ್ರೋಲ್​ ಆದ ಶಾಸಕ ಶಾಸಕ ಕೆ.ಚಂದ್ರಶೇಖರ್​ ರಾವ್​ ಭಾಷಣದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅವರನ್ನು ನೆಟ್ಟಿಗರು ವಿಪರೀತ ಟ್ರೋಲ್​ ಮಾಡಿದ್ದಾರೆ. ಕೆಲವರಂತೂ ಬೈದಿದ್ದಾರೆ. ಮುಖ್ಯಮಂತ್ರಿ ಕೆಸಿಆರ್​ ಮಹಿಳೆಯರ ಪಾಲಿಗೆ ಕೇವಲ ಪಾಲಕರು ಮಾತ್ರವಲ್ಲ, ಗಂಡನೂ ಹೌದು ಎಂದು ವ್ಯಂಗ್ಯವಾಗಿ ಅನೇಕರು ಕಾಮೆಂಟ್​ ಮಾಡಿದ್ದಾರೆ. ಹೀಗೆ ತನ್ನ ಮಾತಿನಿಂದ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗುತ್ತಿದೆ. ತಾವಾಡಿದ ಮಾತು ಬೇರೆಯದೇ ಅರ್ಥ ಪಡೆದುಕೊಂಡಿದೆ ಎಂದು ಗೊತ್ತಾಗುತ್ತಿದ್ದಂತೆ ಶಾಸಕ ರಾಜಯ್ಯ ಕ್ಷಮೆ ಕೇಳಿದ್ದಾರೆ. ಮಹಿಳೆಯರ ಭಾವನೆಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ಕ್ಷಮೆ ಇರಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್​ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ

ತುಮಕೂರಿನ ಕಡಬದಿಂದ ಬಸ್ ಸಂಚಾರ ಆರಂಭ; ಬಸ್ ಚಾಲನೆ ಮಾಡಿ ಹಸಿರು ನಿಶಾನೆ ತೋರಿದ ಶಾಸಕ ಎಸ್.ಆರ್.ಶ್ರೀನಿವಾಸ್

Published On - 11:37 am, Mon, 4 October 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!