AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ವಿಲಾಸ ಪಾಸ್ವಾನ್ ರಾಜಕೀಯ ಉತ್ತರಾಧಿಕಾರಿ ನಾನೇ, ಚಿರಾಗ್ ಅಸ್ತಿ-ಪಾಸ್ತಿಗಳಿಗೆ ವಾರಸುದಾರರು: ಪಶುಪತಿ ಕುಮಾರ್ ಪಾರಸ್

ರಾಮ್ ವಿಲಾಸ್ ಪಾಸ್ವಾನ್ ಅವರು 2000ರಲ್ಲಿ ಜನತಾ ದಳದಿಂದ ಹೊರಬಿದ್ದ ನಂತರ ಲೋಕ ಜನಶಕ್ತಿ ಪಕ್ಷವನ್ನು ಕಟ್ಟಿದರು. ಆದರೆ ಅವರು ಗತಿಸಿದ ನಂತರ ಪಕ್ಷದ ನೇತೃತ್ವಕ್ಕಾಗಿ ಪಾರಸ್ ಮತ್ತು ಚಿರಾಗ್ ನಡುವೆ ಕದನ ಶುರುವಾಗಿದೆ. ಅವರಿಬ್ಬರೂ ತಾವೇ ಪಕ್ಷದ ನಾಯಕ ಎಂದು ಸಾರಿಕೊಳ್ಳುತ್ತಿದ್ದಾರೆ.

ರಾಮ್ ವಿಲಾಸ ಪಾಸ್ವಾನ್ ರಾಜಕೀಯ ಉತ್ತರಾಧಿಕಾರಿ ನಾನೇ, ಚಿರಾಗ್ ಅಸ್ತಿ-ಪಾಸ್ತಿಗಳಿಗೆ ವಾರಸುದಾರರು: ಪಶುಪತಿ ಕುಮಾರ್ ಪಾರಸ್
ಪಶುಪತಿ ಕುಮಾರ್ ಪಾರಸ್ ಮತ್ತು ಚಿರಾಗ್ ಪಾಸ್ವಾನ್
ಅರುಣ್​ ಕುಮಾರ್​ ಬೆಳ್ಳಿ
|

Updated on:Jul 09, 2021 | 1:13 AM

Share

ನವದೆಹಲಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಸರ್ಕಾರದಲ್ಲಿ ಬುಧವಾರವಷ್ಟೇ ಸಚಿವರಾಗಿ ಸೇಪರ್ಡೆಯಾಗಿರುವ ಪಶುಪತಿ ಕುಮಾರ್ ಪಾರಸ್​ ಅವರು, ತಾನೇ ದಿವಂಗತ ನಾಯಕ ರಾಮ್​ವಿಲಾಸ ಪಾಸ್ವಾನ್ ಅವರು ನಿಜವಾದ ಉತ್ತರಾಧಿಕಾರಿ ಅಗಿರುವುದರಿಂದ ಸಚಿವ ಸಂಪುಟದಲ್ಲಿ ಎಲ್​ಜೆಪಿ ಪಕ್ಷವನ್ನು ಪ್ರತಿನಿಧಿಸಿವುದಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಆದರೆ, ತಮ್ಮ ದಿವಂಗತ ಸಹೋದರನ ಆಸ್ತಿ-ಪಾಸ್ತಿಗಳಿಗೆ ಅವರ ಮಗ ಚಿರಾಗ್ ಪಾಸ್ವಾನ್ ಅವರು ಬಾದ್ಯಸ್ಥರು ಎಂದು ನೂತನ ಸಚಿವರು ಹೇಳಿದ್ದಾರೆ.

‘ರಾಜಕಿಯವಾಗಿ ನಾನೇ ಪಾಸ್ವಾನ್​ ಜೀ (ರಾಮ್ ವಿಲಾಸ ಪಾಸ್ವಾನ್) ಅವರ ಉತ್ತರಾಧಿಕಾರಿಯಾಗಿದ್ದೇನೆ. ಚಿರಾಗ್ ಪಾಸ್ವಾನ್ ಅವರು ಅವರ ಸುಪುತ್ರ ನಿಜ ಆದರೆ ಅವರ ರಾಜಕಿಯ ಉತ್ತರಾಧಿಕಾರಿ ಖಂಡಿತ ಅಲ್ಲ. ಅವರಿಗೆ (ಚಿರಾಗ್) ತಮ್ಮ ತಂದೆಯ ಆಸ್ತಿ ಮೇಲೆ ಎಲ್ಲ ಹಕ್ಕಿದೆ, ಅಸಲಿಗೆ ಅದಕ್ಕೆಲ್ಲ ಅವರೇ ವಾರಸುದಾರರು,’ ಎಂದು ಪಿಟಿಐ ಸುದ್ದಿಸಂಸ್ಥೆಗೆ ಪಾರಸ್ ತಿಳಿಸಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರು 2000ರಲ್ಲಿ ಜನತಾ ದಳದಿಂದ ಹೊರಬಿದ್ದ ನಂತರ ಲೋಕ ಜನಶಕ್ತಿ ಪಕ್ಷವನ್ನು ಕಟ್ಟಿದರು. ಆದರೆ ಅವರು ಗತಿಸಿದ ನಂತರ ಪಕ್ಷದ ನೇತೃತ್ವಕ್ಕಾಗಿ ಪಾರಸ್ ಮತ್ತು ಚಿರಾಗ್ ನಡುವೆ ಕದನ ಶುರುವಾಗಿದೆ. ಅವರಿಬ್ಬರೂ ತಾವೇ ಪಕ್ಷದ ನಾಯಕ ಎಂದು ಸಾರಿಕೊಳ್ಳುತ್ತಿದ್ದಾರೆ.

ಜೂನ್ 17 ರಂದು ಪಾರಸ್ ನೇತ್ರತ್ವದಲ್ಲಿ ಐವರು ಲೋಕ ಸಭಾಸದಸ್ಯರನ್ನೊಳಗೊಂಡ ಒಂದು ಗುಂಪು ಚಿರಾಗ್ ವಿರುದ್ಧ ಬಂಡಾಯವೆದ್ದಿತು. ಸಂಸತ್ತಿನಲ್ಲಿ ಆರು ಸದಸ್ಯರನ್ನು ಹೊಂದಿರುವ ಎಲ್​ಜೆಪಿ ನ್ಯಾಶನಲ್ ಡೆಮೊಕ್ರ್ಯಾಟಿಕ್ ಅಲಯನ್ಸ್ (ಎನ್​ಡಿಎ) ಸರ್ಕಾರದ ಮಿತ್ರಪಕ್ಷಗಳಲ್ಲಿ ಒಂದಾಗಿದೆ. ಲೋಕಸಭೆಯ ಸ್ಪೀಕರ್ ಅವರು ಪಾರಸ್ ಅವರನ್ನು ಸದನದಲ್ಲಿ ಎಲ್​ಜೆಪಿ ಯ ನಾಯಕರೆಂದು ಮಾನ್ಯ ಮಾಡಿದ್ದಾರೆ.

ಪಾಸ್ವಾನ್ ಅವರ ಸಹೋದರನಾಗಿರುವ ಪಾರಸ್ ಅವರು, ತನ್ನಣ್ಣನೇ ತಮ್ಮ ರಾಜಕಿಯ ಮೆಂಟರ್ ಆಗಿದ್ದಾರೆ, ಅವರ ತತ್ವಗಳನ್ನು ಅಳವಡಿಸಿಕೊಂಡು ರಾಜಕೀಯ ಬದುಕು ನಡೆಸುತ್ತಿರುವುದಾಗಿ ಸುದ್ದಿಗಾರರಿಗೆ ಹೇಳಿದ್ದಾರೆ. ‘ರಾಮ್ ವಿಲಾಸ ಪಾಸ್ವಾನ್​ ಜೀ ಅವರನ್ನು ನನ್ನ ಆರಾಧ್ಯ ದೈವ ಎಂದು ಭಾವಿಸುತ್ತೇನೆ, ಅವರು ನನ್ನ ಹಿರಿಯ ಸಹೋದರನಾಗಿದ್ದರು,’ ಎಂದು ಪಾರಸ್ ಹೇಳಿದ್ದಾರೆ.

ತಮ್ಮ ಅಂಕಲ್ ಅವರನ್ನು ನರೇಂದ್ರ ಮೋದಿ ಅವರ ಸಚಿವ ಸಂಪುಟಲ್ಲಿ ಸೇರಿಸಿಕೊಂಡಿರುವುದರ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಮನವಿ ಸಲ್ಲಿಸುವುದಾಗಿ ಹೇಳಿರುವ ಚಿರಾಗ್ ಅವರು ಲೋಕಸಭೆಯಲ್ಲಿ ಜಮೂಯಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಚಿರಾಗ್ ಅವರನ್ನೇ ಪಾಸ್ವಾನ್​ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗಿತ್ತು.

ಪಾರಸ್ ಅವರನ್ನು ಪಕ್ಷದಿಂದ ಈಗಾಗಲೇ ಉಚ್ಚಾಟಿಸಲಾಗಿದೆ ಮತ್ತು ಪಾರ್ಟಿ ಕೊಟಾದಡಿಯಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬರುವುದಿಲ್ಲ ಎಂದು ಚಿರಾಗ್ ಬುಧವಾರದಂದು ಮಾಧ್ಯಮದವರಿಗೆ ಹೇಳಿದ್ದರು.

ಲೋಕಸಬೆಯಲ್ಲಿ ಸ್ಪೀಕರ್ ಅವರು ತಮ್ಮನ್ನು ಎಲ್​ಜೆಪಿಯ ನಾಯಕನೆಂದು ಮಾನ್ಯ ಮಾಡಿರುವ ಕ್ರಮವನ್ನು ಚಿರಾಗ್ ಕೋರ್ಟ್​ನಲ್ಲಿ ಪ್ರಶ್ನಿಸಲು ನಿರ್ಧರಿಸಿರುವ ವಿಚಾರವನ್ನು ಪಾರಸ್ ಅವರ ಗಮನಕ್ಕೆ ತಂದಾಗ, ‘ಚಿರಾಗ್ ಕಾನೂನಾತ್ಮವಾಗಿ ಸರಿಯಲ್ಲ, ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಕೇವಲ ಬಹುಮತ ಮಾತ್ರ ಗಣನೆಗೆ ಬರುತ್ತದೆ,’ ಎಂದು ಹೇಳಿದರು.

ಇದನ್ನೂ ಓದಿ: Union Cabinet Reshuffle: ಪ್ರಧಾನಿ ಮೋದಿ ಸಂಪುಟದಿಂದ ಇಂದು ಹೊರಬಂದವರ ಪಟ್ಟಿ ಇಲ್ಲಿದೆ; ಉನ್ನತ ಖಾತೆಗಳ ಸಚಿವರಿಂದಲೂ ರಾಜೀನಾಮೆ

Published On - 11:45 pm, Thu, 8 July 21