ದೆಹಲಿ: ಮಹತ್ವದ ಆದೇಶವೊಂದನ್ನು ಹೊರಡಿಸಿರುವ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು ಆನ್ಲೈನ್ ಸುದ್ದಿ ವೆಬ್ಸೈಟ್ ಗಳನ್ನು ಅಂಕುಶದಲ್ಲಿಡುವ ಆದೇಶ ಹೊರಡಿಸಿದೆ. ಈ ಮೂಲಕ ಡಿಜಿಟಲ್ ಪತ್ರಿಕೋದ್ಯಮಕ್ಕೆ ಅಧಿಕೃತ ಮಾನ್ಯತೆ ನೀಡಿದೆ.
ಆದರೆ ಇನ್ಮುಂದೆ ಸುದ್ದಿ ಜಾಲತಾಣಗಳು ಮಾಹಿತಿ ಮತ್ತು ಪ್ರಸಾರಾಂಗ ಮಂತ್ರಾಲಯದಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ. ಈ ಆದೇಶ ಜಾರಿಯಾದರೆ ಸುಳ್ಳು ಸುದ್ದಿಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಆದೇಶ ಮುನ್ನೆಲೆಗೆ ಬರುತ್ತಿರುವ ಡಿಜಿಟಲ್ ಪತ್ರಿಕೋದ್ಯಮವನ್ನು ಅಧಿಕೃತಗೊಳಿಸಿದ ನಡೆಯಾಗಿದೆ. ಅಲ್ಲದೆ ಸುಳ್ಳು ಸುದ್ದಿ ತಡೆಗಟ್ಟಲು ನೆರವಾಗಲಿದೆ. ನೋಂದಾಯಿತ ಸುದ್ದಿತಾಣ ಸುಳ್ಳು ಸುದ್ದಿ ಪ್ರಕಟಿಸಿದರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.