
ಬರೇಲಿ, ಸೆಪ್ಟೆಂಬರ್ 27: ಉತ್ತರ ಪ್ರದೇಶದ ಬರೇಲಿಯಲ್ಲಿ “ಐ ಲವ್ ಮುಹಮ್ಮದ್” ಅಭಿಯಾನಕ್ಕೆ (I Love Muhammad row) ಸಂಬಂಧಿಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಿದೆ. ಇದಾದ ಒಂದು ದಿನದ ನಂತರ ಪೊಲೀಸರು ಇಂದು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಜಾ ಖಾನ್ ಅವರನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 9ರಂದು ಕಾನ್ಪುರದಲ್ಲಿ ಬಾರಾವಾಫತ್ ಮೆರವಣಿಗೆಯ ಸಂದರ್ಭದಲ್ಲಿ ಐ ಲವ್ ಮುಹಮ್ಮದ್ ಎಂದು ಬರೆದಿರುವ ಫಲಕಗಳನ್ನು ಅಳವಡಿಸಿದಾಗ ವಿವಾದ ಹುಟ್ಟಿಕೊಂಡಿತು. ಹಿಂದೂಪರ ಗುಂಪುಗಳು ಇದನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಕರೆದು ಆಕ್ಷೇಪ ವ್ಯಕ್ತಪಡಿಸಿದವು. ಅಂದಿನಿಂದ, ಈ ವಿಷಯ ಉತ್ತರ ಪ್ರದೇಶದ ಇತರ ಜಿಲ್ಲೆಗಳಿಗೂ ಹರಡಿತು. ಬಳಿಕ ದೇಶಾದ್ಯಂತ ಚರ್ಚೆಗೆ ಕಾರಣವಾಯಿತು.
बरेली में ‘आइ लव मुहम्मद’ का फ्लैक्स लेकर मुस्लिम युवाओं ने कोतवाली के समाने की नारेबाजी। पुलिस ने युवकों को रोककर लौटाया।
भीड़ नियंत्रण के लिए पुलिस ने किया लाठीचार्ज#bareilly #ILoveMuhammad pic.twitter.com/Z8i20jJfSN
— Vinay Saxena (@vinaysaxenaj) September 26, 2025
ಸೆಪ್ಟೆಂಬರ್ 26ರಂದು ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಖಾನ್ ಅವರ ನಿವಾಸದ ಹೊರಗೆ ದೊಡ್ಡ ಜನಸಮೂಹ ಜಮಾಯಿಸಿತು. ಈ ಅಭಿಯಾನವನ್ನು ಬೆಂಬಲಿಸಿ ನಡೆದ ಪ್ರತಿಭಟನೆಗಳಿಗೆ ಈ ಸಭೆ ಸಂಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾರ್ಥನೆಯ ನಂತರ ಬಹುಪಾಲು ಜನ ಶಾಂತಿಯುತವಾಗಿ ಚದುರಿಹೋದರು. ಆದರೆ, ದುಷ್ಕರ್ಮಿಗಳ ಗುಂಪು ಕಲ್ಲು ತೂರಾಟ ಮತ್ತು ಗುಂಡು ಹಾರಿಸಲು ಪ್ರಾರಂಭಿಸಿತು. ಇದು ಅವ್ಯವಸ್ಥೆಗೆ ಕಾರಣವಾಯಿತು.
ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್ ವಿವಾದ: ಏನಿದು? ಶುರುವಾಗಿದ್ದು ಎಲ್ಲಿಂದ?
ಈ ಘಟನೆಯಲ್ಲಿ 10 ಪೊಲೀಸರು ಗಾಯಗೊಂಡರು ಮತ್ತು ಡಜನ್ಗಟ್ಟಲೆ ಜನರನ್ನು ವಶಕ್ಕೆ ಪಡೆಯಲಾಯಿತು. ಹಿಂಸಾಚಾರದಲ್ಲಿ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಎರಡು ಡಜನ್‌ಗೂ ಹೆಚ್ಚು ಜನರನ್ನು ತಕ್ಷಣವೇ ಬಂಧಿಸಲಾಯಿತು. ಅಧಿಕಾರಿಗಳು ಭಾಗಿಯಾಗಿರುವ ಇತರರನ್ನು ಗುರುತಿಸಲು ವಿಡಿಯೋ ಮತ್ತು ಫೋಟೋ ಪುರಾವೆಗಳನ್ನು ಪರಿಶೀಲಿಸುತ್ತಿರುವುದರಿಂದ ಹೆಚ್ಚಿನ ಬಂಧನಗಳು ಸಂಭವಿಸುವ ಸಾಧ್ಯತೆಯಿದೆ.
Lathi Charge on “I Love Muhammad” march in Bareilly.
Yogi knows the best way to deal with violence.pic.twitter.com/rdpocFgSiu
— Kashmiri Hindu (@BattaKashmiri) September 26, 2025
ಇಂದು (ಶನಿವಾರ) ಲಕ್ನೋದಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಬಹುದೆಂದು ನಂಬಿದವರು ಅಧಿಕಾರದಲ್ಲಿ ಯಾರಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಯಾವುದೇ ಕರ್ಫ್ಯೂ ಅಥವಾ ರಸ್ತೆ ತಡೆ ಇರುವುದಿಲ್ಲ ಎಂದು ಘೋಷಿಸಿದರು ಮತ್ತು ಭವಿಷ್ಯದ ಗಲಭೆಗಳನ್ನು ತಡೆಯಲು ಕಠಿಣ ಶಿಕ್ಷೆಯನ್ನು ನೀಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಲಡಾಖ್‌ನ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಸೋನಮ್ ವಾಂಗ್‌ಚುಕ್ ಬಂಧನ
ಪೊಲೀಸರ ಪ್ರಕಾರ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಘರ್ಷಣೆಯಲ್ಲಿ ಭಾಗಿಯಾಗಿದ್ದ ಹಲವಾರು ಜನರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆಗೂ ಮುನ್ನ ಅಧಿಕಾರಿಗಳು ಮೌಲಾನಾ ತೌಕೀರ್ ರಜಾ ಅವರನ್ನು ಗೃಹಬಂಧನದಲ್ಲಿ ಇರಿಸಿದರು. ರಜಾ ಪ್ರಭಾವಿ ವ್ಯಕ್ತಿ ಮತ್ತು ಸುನ್ನಿ ಇಸ್ಲಾಂನ ಬರೇಲ್ವಿ ಪಂಥದ ಸ್ಥಾಪಕ ಅಹ್ಮದ್ ರಜಾ ಖಾನ್ ಅವರ ನೇರ ವಂಶಸ್ಥರು ಎಂದು ಪಿಟಿಐ ವರದಿ ತಿಳಿಸಿದೆ.
ಇದಾದ ನಂತರ ಮೂರು ಅಥವಾ ನಾಲ್ಕು ಸ್ಥಳಗಳಲ್ಲಿ ಗಲಭೆಗಳು ಸಂಭವಿಸಿದವು. ಇದರ ಪರಿಣಾಮವಾಗಿ 10ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ತನಿಖೆಗಳು ಈ ಪ್ರತಿಭಟನೆಯ ಹಿಂದೆ ಪೂರ್ವಯೋಜಿತ ಪಿತೂರಿ ಇತ್ತು ಎಂಬುದನ್ನು ಸೂಚಿಸುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ