Aircraft Crash: ರಾಜಸ್ಥಾನದಲ್ಲಿ ವಾಯುಪಡೆಯ ಯುದ್ಧ ವಿಮಾನ ಪತನ; ಪೈಲಟ್ ರಕ್ಷಣೆ

| Updated By: ಸುಷ್ಮಾ ಚಕ್ರೆ

Updated on: Aug 25, 2021 | 7:21 PM

IAF MiG-21 Bison Fighter Aircraft Crash: ಬರ್ಮರ್​ನಿಂದ 35 ಕಿ.ಮೀ ದೂರದಲ್ಲಿರುವ ಮತಸರ್ ಗ್ರಾಮದಲ್ಲಿ ಯುದ್ಧ ವಿಮಾನದ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ವಿಮಾನ ಪತನವಾಗಿದೆ.

Aircraft Crash: ರಾಜಸ್ಥಾನದಲ್ಲಿ ವಾಯುಪಡೆಯ ಯುದ್ಧ ವಿಮಾನ ಪತನ; ಪೈಲಟ್ ರಕ್ಷಣೆ
ಬರ್ಮರ್​ನಲ್ಲಿ ಪತನವಾದ ಯುದ್ಧವಿಮಾನ
Follow us on

ಜೈಪುರ: ಭಾರತೀಯ ವಾಯುಸೇನೆಯ ಮಿಗ್-21 ಬೈಸನ್ ಯುದ್ಧ ವಿಮಾನ ರಾಜಸ್ಥಾನದ ಬರ್ಮರ್​ನಲ್ಲಿ ಪತನವಾಗಿದೆ. ಬರ್ಮರ್​ನಲ್ಲಿ ಯುದ್ಧ ವಿಮಾನದ ತರಬೇತಿ ವೇಳೆ ಈ ದುರಂತ ಸಂಭವಿಸಿದ್ದು, ಪೈಲಟ್ ಅನ್ನು ಸುರಕ್ಷಿತವಾಗಿ ಹೊರಗೆ ಎಳೆಯಲಾಗಿದೆ. ವಿಮಾನ ಕೆಳಗೆ ಬೀಳುತ್ತಿದ್ದಂತೆ ಹೊತ್ತಿ ಉರಿದಿದ್ದು, ಇಂದು ಸಂಜೆ 5.30ರ ವೇಳೆಗೆ ಈ ಘಟನೆ ಸಂಭವಿಸಿದೆ.

ಬರ್ಮರ್​ನಿಂದ 35 ಕಿ.ಮೀ ದೂರದಲ್ಲಿರುವ ಮತಸರ್ ಗ್ರಾಮದಲ್ಲಿ ಯುದ್ಧ ವಿಮಾನದ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ವಿಮಾನ ಪತನವಾಗಿದೆ. ಪೈಲಟನ್ನು ರಕ್ಷಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಉತ್ತರ್​ಲಾಯ್ ವಾಯುಪಡೆಯ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಆಗಮಿಸಿದ್ದಾರೆ. ವಿಮಾನ ಪತನವಾಗುತ್ತಿದ್ದಂತೆ ಗ್ರಾಮಸ್ಥರು ವಾಟರ್​ ಟ್ಯಾಂಕರ್​ಗಳನ್ನು ತರಿಸಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಅವರೇ ಪೈಲಟನ್ನು ಹೊರಗೆ ಎಳೆದು, ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಈ ದುರಂತಕ್ಕೆ ಕಾರಣವೇನೆಂದು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: Russia Aircraft Crash: ರಷ್ಯಾದಲ್ಲಿ ಮಿಲಿಟರಿ ವಿಮಾನ ಪತನ; ಕೊನೆ ಕ್ಷಣದ ಶಾಕಿಂಗ್ ವಿಡಿಯೋ ಇಲ್ಲಿದೆ

Haiti Earthquake: ಹುಡುಕಿದಷ್ಟೂ ಸಿಗುತ್ತಿವೆ ಶವಗಳು; ಹೈಟಿ ಭೂಕಂಪ ಭೀಕರತೆ, ಸಾವಿನ ಸಂಖ್ಯೆ 2207ಕ್ಕೆ ಏರಿಕೆ

(IAF MiG-21 Bison Fighter Aircraft crashes in Rajasthan’s Barmer Pilot Safe)

Published On - 7:16 pm, Wed, 25 August 21