ದೇವಸ್ಥಾನದ ಲೌಡ್​ಸ್ಪೀಕರ್​ ಕುರಿತು ಐಎಎಸ್ ಅಧಿಕಾರಿ ಶೈಲಬಾಲಾ ವಿವಾದಾತ್ಮಕ ಹೇಳಿಕೆ

ಶೈಲಬಾಲಾ ಮಧ್ಯಪ್ರದೇಶ ಕೇಡರ್‌ನ 2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಪ್ರಸ್ತುತ ಅವರು ಸಾರ್ವಜನಿಕ ಆಡಳಿತ ಇಲಾಖೆಯಲ್ಲಿ ಅಂದರೆ ಸಾಮಾನ್ಯ ಆಡಳಿತ ಇಲಾಖೆಯಲ್ಲಿ (GAD) ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ದೇವಸ್ಥಾನದ ಲೌಡ್​ಸ್ಪೀಕರ್​ ಕುರಿತು ಐಎಎಸ್ ಅಧಿಕಾರಿ ಶೈಲಬಾಲಾ ವಿವಾದಾತ್ಮಕ ಹೇಳಿಕೆ
ಶೈಲಬಾಲಾ ಮಾರ್ಟಿನ್
Follow us
ಸುಷ್ಮಾ ಚಕ್ರೆ
|

Updated on: Oct 22, 2024 | 3:27 PM

ಭೂಪಾಲ್: ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದೇವಸ್ಥಾನಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಂತಹ ಸಾರ್ವಜನಿಕ ವ್ಯವಸ್ಥೆಗಳು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದು ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ. ಕಳೆದ ಭಾನುವಾರ, ಶೈಲಬಾಲಾ ಮಾರ್ಟಿನ್ ಎಂಬ ಐಎಎಸ್​ ಅಧಿಕಾರಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ದೇವಾಲಯಗಳು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಬಳಿಕ ತೀವ್ರ ಚರ್ಚೆಗೊಳಗಾಗಿದ್ದಾರೆ.

“ಮಸೀದಿಗಳ ಧ್ವನಿವರ್ಧಕಗಳಿಂದ ಆಜಾನ್ ಶಬ್ದವು ಜನರಿಗೆ ತೊಂದರೆ ಉಂಟುಮಾಡುತ್ತಿರುವಾಗ ಮಸೀದಿಗಳ ಮುಂದೆ ಡಿಜೆ ನುಡಿಸಿದರೆ ಅವರಿಗೆ ಏಕೆ ತೊಂದರೆಯಾಗಬೇಕು? ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿದೆ. ಮಸೀದಿಗಳಿಂದ ಹೊರಬರುತ್ತಿರುವ ಶಬ್ದ ಜನರನ್ನು ಡಿಸ್ಟರ್ಬ್ ಮಾಡುತ್ತಿದೆ ಎಂದು ಪತ್ರಕರ್ತರೊಬ್ಬರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್, ದೇವಸ್ಥಾನಗಳಲ್ಲಿ ಕೂಡ ಲೌಡ್​ಸ್ಪೀಕರ್​​ಗಳನ್ನು ಹಾಕಲಾಗುತ್ತದೆ. ಅದರಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ನಾರಿ ಶಕ್ತಿ ನನಗೆ ಸದಾ ಪ್ರೇರಣೆ; ಒಡಿಶಾದ ಮಹಿಳೆಗೆ ಮೋದಿ ಧನ್ಯವಾದ

ಹಲವಾರು ಬೀದಿಗಳಲ್ಲಿ ಕೇಳುವ ಮತ್ತು ತಡರಾತ್ರಿಯವರೆಗೆ ಮುಂದುವರಿಯುವ ದೇವಸ್ಥಾನಗಳ ಲೌಡ್​ಸ್ಪೀಕರ್​ಗಳ ಘೋಷಣೆಗಳು ಅನೇಕ ಬೀದಿಗಳಲ್ಲಿ ಸ್ಪೀಕರ್‌ಗಳ ಮೂಲಕ ಶಬ್ದ ಮಾಲಿನ್ಯವನ್ನು ಹರಡುತ್ತವೆ ಎಂದು ಐಎಎಸ್​ ಅಧಿಕಾರಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಶೈಲಬಾಲಾ ಮಾರ್ಟಿನ್ ಯಾರು?:

ಶೈಲಬಾಲಾ ಮಾರ್ಟಿನ್ ಅವರು 2009ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಮಧ್ಯಪ್ರದೇಶದ ಆಡಳಿತ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಇಂದೋರ್‌ನವರಾದ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ನಿವಾರಿ ಜಿಲ್ಲೆಯ ಕಲೆಕ್ಟರ್ ಮತ್ತು ಬುರ್ಹಾನ್‌ಪುರದ ಮುನ್ಸಿಪಲ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಶೈಲಬಾಲಾ ಮಾರ್ಟಿನ್ 56ನೇ ವಯಸ್ಸಿನಲ್ಲಿ ವಿವಾಹವಾದರು. ಶೈಲಬಾಲಾ ಮಾರ್ಟಿನ್ ಮತ್ತು ಪತ್ರಕರ್ತ ರಾಕೇಶ್ ಪಾಠಕ್ ಅವರ ಪ್ರೇಮಕಥೆಯು ಟಿವಿ ಚರ್ಚೆಯ ಸಮಯದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಪ್ರಾರಂಭವಾಯಿತು. ಸಂದರ್ಶನಕ್ಕಾಗಿ ಪರಿಚಯಗೊಂಡ ಅವರಿಬ್ಬರೂ ಬಳಿಕ ಮದುವೆಯಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್