ನಾರಿ ಶಕ್ತಿ ನನಗೆ ಸದಾ ಪ್ರೇರಣೆ; ಒಡಿಶಾದ ಮಹಿಳೆಗೆ ಮೋದಿ ಧನ್ಯವಾದ
ಬಿಜೆಪಿ ಸದಸ್ಯತ್ವಕ್ಕೆ ತನ್ನ ದುಡಿಮೆಯ 100 ರೂ. ಹಣವನ್ನು ನೀಡಿದ ಒಡಿಶಾದ ಬುಡಕಟ್ಟು ಜನಾಂಗದ ಮಹಿಳೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ದೇಶದ ನಾರಿ ಶಕ್ತಿಗೆ ನನ್ನ ನಮಸ್ಕಾರ ಎಂದು ಮೋದಿ ಹೇಳಿದ್ದಾರೆ.
ನವದೆಹಲಿ: ಬಿಜೆಪಿ ಸದಸ್ಯರಾಗಲು 100 ರೂ. ನೋಂದಣಿ ಶುಲ್ಕ ನೀಡಬೇಕು. ಈ ಹಿನ್ನೆಲೆಯಲ್ಲಿ ಒಡಿಶಾದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಮೋದಿಗೆ ಆಶೀರ್ವದಿಸಿ 100 ರೂ. ಹಣವನ್ನು ನೀಡಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದು, ಈ ವಾತ್ಸಲ್ಯದಿಂದ ಮನಸು ತುಂಬಿದೆ. ಸದಾ ನನ್ನನ್ನು ಆಶೀರ್ವದಿಸುತ್ತಿರುವುದಕ್ಕಾಗಿ ನಮ್ಮ ದೇಶದ ನಾರಿ ಶಕ್ತಿಗೆ ನಾನು ನಮಸ್ಕರಿಸುತ್ತೇನೆ. ಅವರ ಆಶೀರ್ವಾದವು ನನಗೆ ವಿಕಸಿತ ಭಾರತವನ್ನು ನಿರ್ಮಿಸಲು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದಿದ್ದಾರೆ.
ನಿನ್ನೆ ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದಲ್ಲಿ ಈ ಆದಿವಾಸಿ ಮಹಿಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ “ಧನ್ಯವಾದಗಳನ್ನು ತಿಳಿಸಲು” ನನಗೆ 100 ನೀಡಿದರು. ಆ ಹಣವನ್ನು ಮೋದಿಯವರಿಗೆ ನೀಡಲು ಮನವಿ ಮಾಡಿದರು. ಇದು ಒಡಿಶಾ ಮತ್ತು ಭಾರತ ಅನುಭವಿಸುತ್ತಿರುವ ರೂಪಾಂತರದ ಪ್ರತಿಬಿಂಬವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ಅನ್ನು ರೀಟ್ವೀಟ್ ಮಾಡಿರುವ ಪಿಎಂ ನರೇಂದ್ರ ಮೋದಿ ಬುಡಕಟ್ಟು ಸಮುದಾಯದ ಮಹಿಳೆಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ವಿಶ್ವ ದೂರಸಂಪರ್ಕ ಸಮಾವೇಶ, ಇಂಡಿಯಾ ಮೊಬೈಲ್ ಸಮಾವೇಶಕ್ಕೆ ಮೋದಿ ಚಾಲನೆ
ಬಿಜೆಪಿ ಸಕ್ರಿಯ ಸದಸ್ಯತ್ವವನ್ನು ಹೆಚ್ಚಿಸುವ ಮೂಲಕ ಬಿಜೆಪಿಯನ್ನು ತಳಮಟ್ಟದಲ್ಲಿ ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಕ್ರಿಯ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದರು. ಬಿಜೆಪಿ ಸದಸ್ಯರು ಬೂತ್ ಮಟ್ಟದಲ್ಲಿ ಅಥವಾ ವಿಧಾನಸಭೆ ಮಟ್ಟದಲ್ಲಿ 50 ಸದಸ್ಯರನ್ನು ನೋಂದಾಯಿಸಿ ಸಕ್ರಿಯ ಸದಸ್ಯರಾಗಬೇಕು. ಇದರಿಂದ ಪಕ್ಷದ ಬೆಳವಣಿಗೆಯಾಗುತ್ತದೆ. ಈ ಸದಸ್ಯತ್ವ ಅಭಿಯಾನವು ಅಕ್ಟೋಬರ್ 31ರವರೆಗೆ ಮುಂದುವರಿಯುತ್ತದೆ.
Very touched by this affection. I bow to our Nari Shakti for always blessing me. Their blessings inspire me to keep working to build a Viksit Bharat. https://t.co/Iw8m51zagY
— Narendra Modi (@narendramodi) October 19, 2024
ಅಕ್ಟೋಬರ್ 18ರಂದು ಪ್ರಾರಂಭವಾದ ಬಿಜೆಪಿಯ ಸಕ್ರಿಯ ಸದಸ್ಯತ್ವ ಅಭಿಯಾನವು ಅಕ್ಟೋಬರ್ 31ರವರೆಗೆ ಮುಂದುವರಿಯುತ್ತದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು 100 ಹೊಸ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದು, ಅವರು ಸಕ್ರಿಯ ಸದಸ್ಯತ್ವಕ್ಕೆ ಅರ್ಹರಾಗಿರುತ್ತಾರೆ. ಪ್ರತಿಯೊಬ್ಬ ಸಕ್ರಿಯ ಸದಸ್ಯರು ನಮೋ ಅಪ್ಲಿಕೇಶನ್ ಮೂಲಕ 100 ರೂ. ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ: ಅಕ್ಟೋಬರ್ 22ಕ್ಕೆ ರಷ್ಯಾಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ
ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಬಿಜೆಪಿಯ ಸದಸ್ಯತ್ವ ಅಭಿಯಾನವು ವೇಗವನ್ನು ಪಡೆದುಕೊಂಡಿದೆ. ವಿಶೇಷವಾಗಿ ಆಫ್‌ಲೈನ್ ಪ್ರಯತ್ನಗಳ ಮೂಲಕ ಈ ಅಭಿಯಾನ ಚುರುಕಾಗಿದೆ. ರಾಜಸ್ಥಾನವೊಂದರಲ್ಲೇ ಇಲ್ಲಿಯವರೆಗೆ 45 ಲಕ್ಷ ಸದಸ್ಯರು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಮತ್ತು 15 ಲಕ್ಷ ಆಫ್‌ಲೈನ್ ವಿಧಾನಗಳ ಮೂಲಕ ಸದಸ್ಯತ್ವವನ್ನು ನೋಂದಾಯಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Sat, 19 October 24