ಜಾರ್ಖಂಡ್​ನಲ್ಲಿ ಜೆಎಂಎಂ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಮೈತ್ರಿ; ಸಿಎಂ ಹೇಮಂತ್ ಸೊರೆನ್ ಘೋಷಣೆ

ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಒಟ್ಟಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಇಂದು ಘೋಷಿಸಿದ್ದಾರೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

ಜಾರ್ಖಂಡ್​ನಲ್ಲಿ ಜೆಎಂಎಂ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಮೈತ್ರಿ; ಸಿಎಂ ಹೇಮಂತ್ ಸೊರೆನ್ ಘೋಷಣೆ
ಹೇಮಂತ್ ಸೊರೆನ್
Follow us
|

Updated on: Oct 19, 2024 | 5:57 PM

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯ ಬ್ಲಾಕ್ ಒಟ್ಟಾಗಿ ಸ್ಪರ್ಧಿಸಲಿದೆ. ಜಾರ್ಖಂಡ್​ನಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 81 ವಿಧಾನಸಭಾ ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಳಿದ 11 ಭಾಗಗಳಿಗೆ ಇತರ ಮೈತ್ರಿ ಪಾಲುದಾರರಾದ ಆರ್‌ಜೆಡಿ ಮತ್ತು ಎಡ ಪಕ್ಷಗಳೊಂದಿಗೆ ಹಂಚಿಕೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಉಳಿದ 11 ಸ್ಥಾನಗಳಿಗೆ ಮೈತ್ರಿ ಪಾಲುದಾರರಾದ ಆರ್‌ಜೆಡಿ ಮತ್ತು ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಮಂತ್ ಸೋರೆನ್ ಹೇಳಿದ್ದಾರೆ. ಹೇಮಂತ್ ಸೋರೆನ್ ಮತ್ತು ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಆದರೆ ಹೇಮಂತ್ ಸೊರೆನ್ ರಾಷ್ಟ್ರೀಯ ಜನತಾ ದಳಕ್ಕೆ ಎಷ್ಟು ಸ್ಥಾನಗಳನ್ನು ನೀಡಲಾಗುವುದು ಮತ್ತು ಎಡರಂಗವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ಉಲ್ಲೇಖಿಸಿಲ್ಲ.

ಇದನ್ನೂ ಓದಿ: ನಾರಿ ಶಕ್ತಿ ನನಗೆ ಸದಾ ಪ್ರೇರಣೆ; ಒಡಿಶಾದ ಮಹಿಳೆಗೆ ಮೋದಿ ಧನ್ಯವಾದ

“ಮೊದಲ ಸುತ್ತಿನ ಮಾತುಕತೆಯಂತೆ, ಜಾರ್ಖಂಡ್ ರಾಜ್ಯದಲ್ಲಿ 70 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಸ್ಪರ್ಧಿಸಲು ನಾವು ನಿರ್ಧರಿಸಿದ್ದೇವೆ. ಇತರ ಇಂಡಿಯಾ ಮೈತ್ರಿ ಪಾಲುದಾರರು ಉಳಿದ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ” ಎಂದು ಹೇಮಂತ್ ಸೋರೆನ್ ಮೈತ್ರಿ ಪಾಲುದಾರರನ್ನು ಭೇಟಿಯಾದ ನಂತರ ಹೇಳಿದ್ದಾರೆ. “ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿವರಗಳನ್ನು ನಂತರ ನೀಡಲಾಗುವುದು” ಎಂದಿದ್ದಾರೆ.

2019ರಲ್ಲಿ ಕಾಂಗ್ರೆಸ್‌ನ ಮಂಜು ಕುಮಾರಿಯನ್ನು ಸೋಲಿಸಿ 18,175 ಮತಗಳ ಅಂತರದಿಂದ ಗೆದ್ದಿದ್ದ ಜಮುವಾದ ಹಾಲಿ ಶಾಸಕ ಹಜ್ರಾ ಮತ್ತು ರಜಾಕ್ ಸಮಾರಂಭವೊಂದರಲ್ಲಿ ಜೆಎಂಎಂಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಜೆಎಂಎಂಗೆ ಸ್ವಾಗತಿಸಿದ ಮುಖ್ಯಮಂತ್ರಿ ಹೇಮಂತ್ ಸೊರೆನ್, ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇಬ್ಬರೂ ಹಳೆಯ ಯೋಧರು ಪಕ್ಷವನ್ನು ಬಲಪಡಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ: 68 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ, ಮಿತ್ರಪಕ್ಷಗಳಿಗೆ 13 ಸ್ಥಾನಗಳು

ಜಾರ್ಖಂಡ್‌ನಲ್ಲಿ ನವೆಂಬರ್ 13ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತಗಳ ಎಣಿಕೆ ನಡೆಯಲಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ 81 ಸ್ಥಾನಗಳಲ್ಲಿ ಜೆಎಂಎಂ 30, ಕಾಂಗ್ರೆಸ್ 16 ಮತ್ತು ಆರ್‌ಜೆಡಿ ಒಂದು ಸ್ಥಾನವನ್ನು ಗೆದ್ದವು. ಮೂರು ಪಕ್ಷಗಳು ಬಹುಮತದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದವು. 2014ರಲ್ಲಿ 37 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡರೆ, ಎಜೆಎಸ್‌ಯು ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ