ದೆಹಲಿ: ಕೊರೊನಾ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ವಿಧಾನವನ್ನ ಕೈಬಿಟ್ಟು ಐಸಿಎಂಆರ್ ಆದೇಶ ಹೊರಡಿಸಿದೆ. ಅದರಂತೆ ಕೊವಿಡ್-19 ಚಿಕಿತ್ಸಾ ಗೈಡ್‌ಲೈನ್ಸ್‌ನಿಂದ ಪ್ಲಾಸ್ಮಾ ಥೆರಪಿ ತೆಗಯಲಾಗಿದೆ. ನಮ್ಮ ದೇಶದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುತ್ತಿರುವ ಪ್ಲಾಸ್ಮಾ ಥೆರಪಿಯಿಂದ ಅವರ ಜೀವ ಉಳಿಸಲು ಸಾಧ್ಯವೇ ಇಲ್ಲ. ಹೀಗಾಗಿ, ಸದ್ಯದಲ್ಲೇ ನಮ್ಮ ದೇಶದಲ್ಲಿ ಕೊರೊನಾ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಬದಲಾವಣೆ ಆಗಲಿದೆ. ಪ್ಲಾಸ್ಮಾ ಥೆರಪಿಯನ್ನು ನಿಲ್ಲಿಸಲು ಸೂಚಿಸಿ ಹೊಸ ಮಾರ್ಗಸೂಚಿಯನ್ನು ಐಸಿಎಂಆರ್ ಹೊರಡಿಸಲಿದೆ ಎಂದು ಹೇಳಲಾಗಿತ್ತು.
ಭಾರತದಲ್ಲಿ ಕೊರೊನಾ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಗೆಳಲ್ಲಿ ಪ್ಲಾಸ್ಮಾ ಥೆರಪಿ ಸಹ ಒಂದಾಗಿತ್ತು. ಪ್ಲಾಸ್ಮಾ ಥೆರಪಿಯಿಂದ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ರೋಗಿಗಳ ಪ್ರಾಣ ಉಳಿಸಬಹುದೆಂದು ವೈದ್ಯರು ಈ ಚಿಕಿತ್ಸೆಯನ್ನು ನೀಡುತ್ತಿದ್ದರು. ಕೇಂದ್ರ ಸರ್ಕಾರ ಕೂಡ ಪ್ಲಾಸ್ಮಾ ಥೆರಪಿಯನ್ನು ಕೊರೊನಾ ರೋಗಿಗಳ ವೈದ್ಯಕೀಯ ಚಿಕಿತ್ಸೆಯ ಮಾರ್ಗಸೂಚಿಯಲ್ಲಿ ಸೇರಿಸಿತ್ತು.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳ ರಕ್ತದ ಪ್ಲಾಸ್ಮಾವನ್ನು ಸಂಗ್ರಹಿಸಿ ಪ್ಲಾಸ್ಮಾ ಥೆರಪಿ ನೀಡಲು ಸರ್ಕಾರ ಒಪ್ಪಿಗೆ ನೀಡಿತ್ತು. ಕಳೆದೊಂದು ವರ್ಷದಿಂದ ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಕೂಡ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡಲಾಗುತ್ತಿತ್ತು. ಚೀನಾ, ಇಂಗ್ಲೆಂಡ್, ಆಮೆರಿಕಾ ಸೇರಿದಂತೆ ಬಹುತೇಕ ದೇಶಗಳಲ್ಲಿ ಕೊರೊನಾ ರೋಗಿಗಳ ಜೀವ ಉಳಿಸಲು ಅಂತಿಮ ಅಸ್ತ್ರವಾಗಿ ವೈದ್ಯರು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುತ್ತಿದ್ದರು. ನಮ್ಮ ದೇಶದಲ್ಲೂ ಕೊರೊನಾದಿಂದ ಗುಣಮುಖರಾದವರು ಬೇರೆಯವರ ಜೀವ ಉಳಿಸಲು ಪ್ಲಾಸ್ಮಾ ಥೆರಪಿಗಾಗಿ ಪ್ಲಾಸ್ಮಾ ದಾನ ಮಾಡುವುದನ್ನು ಪೋತ್ಸಾಹಿಸಲಾಗುತ್ತಿತ್ತು. ದೆಹಲಿ ಸರ್ಕಾರ ಪ್ಲಾಸ್ಮಾ ದಾನ ಮಾಡಿದವರಿಗೆ ಮೆಚ್ಚುಗೆಯ ಸರ್ಟಿಫಿಕೇಟ್ ನೀಡಿ ಪೋತ್ಸಾಹಿಸುತ್ತಿತ್ತು. ಆದರೆ ಈಗ, ಐಸಿಎಂಆರ್ ಆದೇಶದಂತೆ ಕೊವಿಡ್ ಚಿಕಿತ್ಸಾ ಗೈಡ್‌ಲೈನ್ಸ್‌ನಿಂದ ಪ್ಲಾಸ್ಮಾ ಥೆರಪಿಯನ್ನು ತೆಗೆಯಲಾಗಿದೆ.
ಇದನ್ನೂ ಓದಿ: ಐಸಿಎಮ್ಆರ್ ತಜ್ಞರ ಪ್ರಕಾರ ಪ್ಲಾಸ್ಮಾ ಚಿಕಿತ್ಸೆಯಿಂದ ಕೊವಿಡ್-19 ರೋಗಿಗೆ ಯಾವುದೇ ಉಪಯೋಗವಿಲ್ಲ!
ಕೊರೊನಾ ತಡೆಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ 11ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರ ಜತೆ ಡಿಸಿಎಂ ಮಾತುಕತೆ
Published On - 10:57 pm, Mon, 17 May 21