ದೆಹಲಿಯ ವಾಣಿಜ್ಯ ಕಟ್ಟಡದಲ್ಲಿ ನಡೆದ ಅಗ್ನಿ ದುರಂತ ಕೇಸ್! ಗುರುತು ಪತ್ತೆಹಚ್ಚಲಾಗದಷ್ಟು ಸುಟ್ಟು ಕರಲಾಗಿರುವ ಮೃತದೇಹಗಳು

ದೆಹಲಿಯ ವಾಣಿಜ್ಯ ಕಟ್ಟಡದಲ್ಲಿ ನಡೆದ ಅಗ್ನಿ ದುರಂತ ಕೇಸ್! ಗುರುತು ಪತ್ತೆಹಚ್ಚಲಾಗದಷ್ಟು ಸುಟ್ಟು ಕರಲಾಗಿರುವ ಮೃತದೇಹಗಳು
ಅಗ್ನಿಯನ್ನು ಆರಿಸಿದ ಅಗ್ನಿಶಾಮಕ ಸಿಬ್ಬಂದಿ

ಘಟನೆಯಲ್ಲಿ ಸುಮಾರು 27 ಜನರು ಸಜೀವ ದಹನವಾಗಿದ್ದಾರೆ. ಕಟ್ಟಡದಲ್ಲಿ ಸೂಕ್ತ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಅಗ್ನಿಶಾಮಕ ಇಲಾಖೆಯಿಂದ ಕಟ್ಟಡಕ್ಕೆ ಎನ್ಒಸಿ ಪಡೆದಿರಲಿಲ್ಲ.

TV9kannada Web Team

| Edited By: sandhya thejappa

May 14, 2022 | 7:42 AM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ವಾಣಿಜ್ಯ ಕಟ್ಟಡದಲ್ಲಿ ನಡೆದ ಅಗ್ನಿ (Fire) ದುರಂತ ಪ್ರಕರಣಕ್ಕೆ ಸಂಬಂಧಿಸಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವರು ಕಟ್ಟಡದಿಂದ ಜಿಗಿದಿದ್ದಾರೆ. ಇನ್ನು ಕೆಲವರನ್ನ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ರಕ್ಷಣೆ ಮಾಡಿದೆ. 4.45ರಿಂದ ತಡರಾತ್ರಿವರೆಗೂ ರಕ್ಷಣೆಯ ಕಾರ್ಯ ನಡೆದಿತ್ತು. ಜನರು ಟಾರ್ಚ್ ಹಿಡಿದು ರಕ್ಷಿಸುವಂತೆ ಕೇಳುತ್ತಿದ್ದರು. ಬಿಲ್ಡಿಂಗ್ನಲ್ಲಿ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿದ್ದ ಹಿನ್ನೆಲೆ ಕ್ಷಣ ಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿತ್ತು. ಈ ಎಲ್ಲದರ ನಡುವೆ ಜೀವದ ಹಂಗು ತೊರೆದು ಮಹಿಳೆಯರು ಕ್ರೇನ್ ಮೇಲೆ ನಡೆದಿದ್ದಾರೆ.

ಘಟನೆಯಲ್ಲಿ ಸುಮಾರು 27 ಜನರು ಸಜೀವ ದಹನವಾಗಿದ್ದಾರೆ. ಕಟ್ಟಡದಲ್ಲಿ ಸೂಕ್ತ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಅಗ್ನಿಶಾಮಕ ಇಲಾಖೆಯಿಂದ ಕಟ್ಟಡಕ್ಕೆ ಎನ್ಒಸಿ ಪಡೆದಿರಲಿಲ್ಲ. ಮಾಲೀಕನ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಾಲೀಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾತ್ರಿ 2 ಗಂಟೆಯವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಗ್ನಿಶಾಮಕ ದಳದ 30 ವಾಹನಗಳಿಂದ ಕಾರ್ಯಾಚರಣೆ ನಡೆದಿದೆ. ಬೆಂಕಿ ಸಂಪೂರ್ಣ ನಂದಿಸಿದ ಬಳಿಕ ಬಿಲ್ಡಿಂಗ್ ಕೂಲಿಂಗ್ ಕಾರ್ಯವನ್ನು ನಡೆಸಲಾಯಿತು. ಇನ್ನು ಮೃತದೇಹಗಳು ಗುರುತು ಪತ್ತೆಹಚ್ಚಲಾಗದಷ್ಟು ಸುಟ್ಟು ಕರಕಲಾಗಿವೆ. ಮೃತದೇಹಗಳನ್ನ ಗುರುತಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಯುವತಿಯೊಬ್ಬಳು ಕಿಟಕಿಗೆ ಹಗ್ಗ ಕಟ್ಟಿ ಕೆಳಗೆ ಇಳಿದು ಜೀವ ಉಳಿಸಿಕೊಂಡರೆ, ಇನ್ನು ಮಹಿಳೆಯೊಬ್ಬರು ಹಗ್ಗ ಹಿಡಿದು ಸ್ಪೈಡರ್ ವುಮನ್​ ರೀತಿ ಕೆಳಗೆ ಬಂದಿದ್ದಾರೆ.

ಘಟನೆ ಏನು?
ನಿನ್ನೆ ಸಂಜೆ 4.40ರ ಸುಮಾರಿಗೆ ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಸಿಸಿಟಿವಿ ಉದ್ಪಾಧಿಸುವ 3 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಅದು ವಾಣಿಜ್ಯ ಕಟ್ಟಡವಾಗಿರುವುರಿಂದ ಕಟ್ಟಡದೊಳಗಡೆ ಸುಮಾರು 100ಕ್ಕೂ ಅಧಿಕ ಜನರು ಇದ್ದರು. ಬೆಂಕಿ ಕಾಣಿಸಿಕೊಂಡಾಗ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂಧಿ ಸುಮಾರು 80 ಮಂದಿಯನ್ನ ರಕ್ಷಣೆ ಮಾಡಿದ್ದರು. ಆದರೆ ಕಟ್ಟಡದಲ್ಲಿ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿದ್ದ ಕಾರಣ ಕ್ಷಣ ಕ್ಷಣಕ್ಕೂ ಹೆಚ್ಚಾದ ಬೆಂಕಿಯ ತೀವ್ರತೆಗೆ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada