ಐಐಟಿ ಬಾಂಬೆ ಕ್ಯಾಂಟೀನ್‌ನಲ್ಲಿ ಸಸ್ಯಾಹಾರಿಗಳಿಗೆ ಮಾತ್ರ ಪ್ರವೇಶ ಪೋಸ್ಟರ್, ಹುಟ್ಟುಹಾಕಿತೊಂದು ವಿವಾದ
IIT Bombay: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ ಹಾಸ್ಟೆಲ್‌ನಲ್ಲಿರುವ ಕ್ಯಾಂಟೀನ್‌ನ ಗೋಡೆಗಳ ಮೇಲೆ ಸಸ್ಯಾಹಾರಿಗಳು ಮಾತ್ರ ಎಂದು ಬರೆದಿರುವ ಪೋಸ್ಟರ್‌ಗಳು ಕೋಲಾಹಲವನ್ನು ಸೃಷ್ಟಿಸಿವೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ(IIT Bombay) ಹಾಸ್ಟೆಲ್‌ನಲ್ಲಿರುವ ಕ್ಯಾಂಟೀನ್‌ನ ಗೋಡೆಗಳ ಮೇಲೆ ಸಸ್ಯಾಹಾರಿಗಳು ಮಾತ್ರ ಎಂದು ಬರೆದಿರುವ ಪೋಸ್ಟರ್‌ಗಳು ಕೋಲಾಹಲವನ್ನು ಸೃಷ್ಟಿಸಿವೆ. ಇಲ್ಲಿಯ ವಿದ್ಯಾರ್ಥಿಗಳು ಆಹಾರದಲ್ಲಿ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂಸ್ಥೆಯ ಹಾಸ್ಟೆಲ್ ಸಂಖ್ಯೆ 12 ರ ಕ್ಯಾಂಟೀನ್‌ನ ಗೋಡೆಗಳ ಮೇಲೆ ಕಳೆದ ವಾರ ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಊಟ ಮಾಡಲು ಪ್ರತ್ಯೇಕ ಮಾರ್ಗಸೂಚಿ ಇಲ್ಲ. ಪೋಸ್ಟರ್‌ಗಳ ಬಗ್ಗೆ ತಿಳಿದಿದ್ದರೂ ಕ್ಯಾಂಟೀನ್‌ನಲ್ಲಿ ಯಾರು ಹಾಕಿದ್ದಾರೆ ಎಂಬುದು ತಿಳಿದಿಲ್ಲ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತಷ್ಟು ಓದಿ: ಐಐಟಿಗಳಲ್ಲಿ ಸರಣಿ ಆತ್ಮಹತ್ಯೆ ಪ್ರಕರಣ; ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಹೊಸ ಮಾರ್ಗಗಳನ್ನು ಪರಿಚಯಿಸಲಿರುವ ಐಐಟಿ
ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‌ಸಿ) ಪ್ರತಿನಿಧಿಗಳು ಘಟನೆಯನ್ನು ಖಂಡಿಸಿದರು ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕಿದರು. ಘಟನೆಯ ನಂತರ ಹಾಸ್ಟೆಲ್ ಪ್ರಧಾನ ಕಾರ್ಯದರ್ಶಿ ಎಲ್ಲಾ ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿದ್ದಾರೆ, ಜೈನ ಆಹಾರ ವಿತರಣೆಗೆ ಕೌಂಟರ್ ಇದೆ ಎಂದು ತಿಳಿಸಿದ್ದಾರೆ.
ಆದರೆ ಜೈನ್ ಊಟ ಮಾಡುವವರಿಗೆ ಕುಳಿತುಕೊಳ್ಳಲು ವಿಶೇಷ ಸ್ಥಳವಿಲ್ಲ, ಕೆಲವು ಮಂದಿ ಕೆಲವು ಪ್ರದೇಶಗಳನ್ನು ಜೈನ ಆಸನ ಪ್ರದೇಶಗಳು ಎಂದು ಬಲವಂತವಾಗಿ ಗೊತ್ತುಪಡಿಸಿದ ವರದಿಗಳಿವೆ.ಮಾಂಸಾಹಾರಿ ಆಹಾರವನ್ನು ತರುವ ವ್ಯಕ್ತಿಗಳನ್ನು ಆ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅನುಮತಿಸುತ್ತಿಲ್ಲ. ಈ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ