ಹಿರಿಯ ಅಧಿಕಾರಿ ಮೇಲೆ ಮರಳು ಎರಚಿದ ಆಂಧ್ರದ ಮಹಿಳಾ ಉದ್ಯೋಗಿ; ದೌರ್ಜನ್ಯ ಆರೋಪ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 06, 2021 | 7:22 PM

ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉಪ ಆಯುಕ್ತರೊಂದಿಗಿನ ಸಭೆಯ ವೇಳೆ ಇತರ ಮೂರು ಅಧಿಕಾರಿಗಳ ಮುಂದೆಯೇ ನಡೆದಿದೆ. ಶಾಂತಿ ಕೋಣೆಗೆ ನುಗ್ಗಿ ಮರಳನ್ನು ಪುಷ್ಪವರ್ಧನ್ ಮುಖಕ್ಕೆ ಎಸೆಯುತ್ತಿರುವುದನ್ನು ಸಿಸಿಟಿವಿ ದೃಶ್ಯದಲ್ಲಿದೆ.

ಹಿರಿಯ ಅಧಿಕಾರಿ ಮೇಲೆ ಮರಳು ಎರಚಿದ ಆಂಧ್ರದ ಮಹಿಳಾ ಉದ್ಯೋಗಿ; ದೌರ್ಜನ್ಯ ಆರೋಪ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸಿಸಿಟಿವಿ ದೃಶ್ಯ
Follow us on

ಹೈದರಾಬಾದ್: ಆಂಧ್ರಪ್ರದೇಶದ ವೈಜಾಗ್‌ನಲ್ಲಿನ ಸರ್ಕಾರಿ ಕಚೇರಿಯಲ್ಲಿ ನಡೆದನಾಟಕೀಯ ಕ್ಷಣವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ, ದತ್ತಿ ಇಲಾಖೆಯ ಸಹಾಯಕ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಯೊಬ್ಬರು ಉಪ ಆಯುಕ್ತರ ಕಚೇರಿಗೆ ನುಗ್ಗಿದರು ಅವರ ಮುಖಕ್ಕೆ ಮರಳು ಎರಚುತ್ತಿರುವ ದೃಶ್ಯ ಅದು.

ಶಾಂತಿ ಎಂಬ ಮಹಿಳೆ ಡೆಪ್ಯುಟಿ ಕಮೀಷನರ್ ವಿ ಪುಷ್ಪವರ್ಧನ್ ವಿರುದ್ಧ ದೌರ್ಜನ್ಯ ಆರೋಪ ಮಾಡಿದ್ದು ಕಳೆದ ಒಂದು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ . ದೇವಾಲಯದ ಆಸ್ತಿಗಳನ್ನು ರಕ್ಷಿಸುವ ಕೆಲಸ ಮಾಡುವ ಅಧಿಕಾರಿಗಳ ಬಗ್ಗೆ ಅವರ ಟೀಕೆಗಳಿಂದ ಮಹಿಳೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉಪ ಆಯುಕ್ತರೊಂದಿಗಿನ ಸಭೆಯ ವೇಳೆ ಇತರ ಮೂರು ಅಧಿಕಾರಿಗಳ ಮುಂದೆಯೇ ನಡೆದಿದೆ. ಶಾಂತಿ ಕೋಣೆಗೆ ನುಗ್ಗಿ ಮರಳನ್ನು ಪುಷ್ಪವರ್ಧನ್ ಮುಖಕ್ಕೆ ಎಸೆಯುತ್ತಿರುವುದನ್ನು ಸಿಸಿಟಿವಿ ದೃಶ್ಯದಲ್ಲಿದೆ. ಇತರ ಮೂವರು ಅಧಿಕಾರಿಗಳು ಆಕೆಯನ್ನು ಕೊಠಡಿಯಿಂದ ಹೊರಹೋಗುವಂತೆ ಸೂಚಿಸುತ್ತಿರುವುದು ವಿಡಿಯೊದಲ್ಲಿದೆ.

ಪುಷ್ಪವರ್ಧನ್ ಈ ಘಟನೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಎರಡು ತಿಂಗಳ ಹಿಂದೆಯೇ ಪುಷ್ಪವರ್ಧನ್ ಅವರನ್ನು ಉಪ ಆಯುಕ್ತರನ್ನಾಗಿ ಕರೆತರಲಾಯಿತು ಮತ್ತು ಇತ್ತೀಚೆಗೆ ಹಣಕಾಸಿನ ಅಕ್ರಮಗಳ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಆದಾಗ್ಯೂ, ಶಾಂತಿಯೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಥವಾ ದ್ವೇಷಗಳಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ:  ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ

(In Andhra Pradesh’s Vizag woman officer Throws Sand At Superior alleges Harassment incident caught on CCTV camera)

Published On - 6:55 pm, Fri, 6 August 21