ಚೆನ್ನೈ: ತಮಿಳುನಾಡಿನ ಎಐಎಡಿಎಂಕೆಯಲ್ಲಿ ನಾಯಕತ್ವಕ್ಕಾಗಿ ಓಪಿಎಸ್ (OPS) ಮತ್ತು ಇಪಿಎಸ್ ಬಣಗಳ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಇಂದು ಮುಂಜಾನೆ ಈ ಸಂಬಂಧ ಭಾರೀ ಹೈಡ್ರಾಮಾ ನಡೆದಿದ್ದು, ರಸ್ತೆಯಲ್ಲೇ ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡು ಗಲಾಟೆಯೆಬ್ಬಿಸಿದ್ದರು. ಇದೀಗ ಜನರಲ್ ಕೌನ್ಸಿಲ್ ಸಭೆಯಲ್ಲಿ ಓ ಪನ್ನೀರ್ಸೆಲ್ವಂಗೆ (O Panneerselvam) ಭಾರೀ ಹಿನ್ನಡೆಯಾಗಿದ್ದು, ಇ. ಪಳನಿಸ್ವಾಮಿ (Edappadi Palaniswami) ಎಐಎಡಿಎಂಕೆ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಹಾಗೇ, ಎಐಎಡಿಎಂಕೆ ಪಕ್ಷದ ಹೊಸ ಬಾಸ್ ಆಗಿ ಇಪಿಎಸ್ (ಇ. ಪಳನಿಸ್ವಾಮಿ) ಘೋಷಣೆಯಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಓಪಿಎಸ್ (ಓ ಪನ್ನೀರ್ಸೆಲ್ವಂ) ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಇಂದಿನ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯು ಪೆರಿಯಾರ್, ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಜೆ ಜಯಲಲಿತಾ ಅವರಿಗೆ ಭಾರತ ರತ್ನಕ್ಕೆ ಬೇಡಿಕೆಯ ನಿರ್ಣಯವನ್ನು ಅಂಗೀಕರಿಸಿತು. ಪಕ್ಷದ ಸಭೆಯಲ್ಲಿ ಎಐಎಡಿಎಂಕೆಯ ಹೊಣೆಗಾರಿಕೆಯನ್ನು ಪಳನಿಸ್ವಾಮಿ ಪಡೆದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
Chennai, Tamil Nadu | A clash-like situation breaks out between supporters of AIADMK leaders E Palaniswami and O Panneerselvam near party headquarters ahead of the General Council meeting, today pic.twitter.com/rSW9LsQFJE
— ANI (@ANI) July 11, 2022
ಎಡಪ್ಪಾಡಿ ಪಳನಿಸ್ವಾಮಿ ಅವರು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ತಮಿಳುನಾಡಿನ ವನಗಾರಂನಲ್ಲಿ ನಡೆದ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಇ. ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯು ವನಗಾರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ 16 ನಿರ್ಣಯಗಳು ಅಂಗೀಕಾರವಾಗುವ ನಿರೀಕ್ಷೆಯಿದೆ.
ಇ. ಪಳನಿಸ್ವಾಮಿ ನೇತೃತ್ವದಲ್ಲಿ ಇಂದು ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಯಲಿದ್ದು, ಓ. ಪನೀರ್‌ಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಯ ಬಾಗಿಲು ಒಡೆದಿದ್ದಾರೆ. ಇಂದು ನಡೆಯಲಿರುವ ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಎಐಎಡಿಎಂಕೆ ನಾಯಕರಾದ ಇ. ಪಳನಿಸ್ವಾಮಿ ಮತ್ತು ಓ. ಪನ್ನೀರಸೆಲ್ವಂ ಅವರ ಬೆಂಬಲಿಗರ ನಡುವೆ ಪಕ್ಷದ ಪ್ರಧಾನ ಕಚೇರಿಯ ಬಳಿ ಘರ್ಷಣೆ ಉಂಟಾಗಿದೆ.
Published On - 10:32 am, Mon, 11 July 22