AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಮಹಿಳೆ ಮನೆಯಲ್ಲಿ ಟಾಯ್ಲೆಟ್​​ಗೆ ಅಂತಾ ಒಳಹೋದಾಗ, ಈ ಕಳ್ಳ ಏನು ಮಾಡಿದ ನೋಡಿ!

ಗುಂಟೂರಿನಲ್ಲಿ ಕಳ್ಳ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವುದನ್ನು ಕಂಡು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಸದ್ಯದಲ್ಲೇ ಕಳ್ಳನನ್ನು ಹಿಡಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಆ ಮಹಿಳೆ ಮನೆಯಲ್ಲಿ ಟಾಯ್ಲೆಟ್​​ಗೆ ಅಂತಾ ಒಳಹೋದಾಗ, ಈ ಕಳ್ಳ ಏನು ಮಾಡಿದ ನೋಡಿ!
ಆ ಮಹಿಳೆ ಟಾಯ್ಲೆಟ್​​ಗೆ ಅಂತಾ ಒಳಹೋದಾಗ...ಕಳ್ಳ ಏನು ಮಾಡಿದ ನೋಡಿ!
ಸಾಧು ಶ್ರೀನಾಥ್​
|

Updated on: Sep 28, 2023 | 4:43 PM

Share

ಗುಂಟೂರು, ಸೆಪ್ಟೆಂಬರ್ 28: ಕಳ್ಳರ ಬುದ್ದಿವಂತಿಕೆ ಮಾಮೂಲಿಯಲ್ಲ.. ಕಳ್ಳತನಕ್ಕೆ ಏನೆಲ್ಲಾ ಪ್ಲಾನ್ ಮಾಡುತ್ತಾರೆ ನೋಡಿ.. ಕಳ್ಳರ ಬುದ್ದಿವಂತಿಕೆ ಮಾಮೂಲಿಯಲ್ಲ.. ಕಳ್ಳತನಕ್ಕೆ ಎಂತೆಂಥಾ ಪ್ಲಾನ್ ಮಾಡುತ್ತಾರೆ ನೋಡಿ. ಅದರಲ್ಲೂ ಬಂಗಾರದ ಬೆಲೆ ಜಾಸ್ತಿಯಾಗಿರುವುದರಿಂದ ಕಳ್ಳರು ಚಿನ್ನಾಭರಣ ಕದಿಯಲು ವಿನೂತನ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಹೊಸ ರೀತಿಯಲ್ಲಿ ಕಳ್ಳತನ ಮಾಡಲಾಗುತ್ತಿದೆ. ಪೊಲೀಸರ ಕಣ್ಗಾವಲು ಎಷ್ಟು ಹೆಚ್ಚಿದೆಯೋ ಅದೇ ಮಟ್ಟದಲ್ಲಿ ಕಳ್ಳರು ಕೂಡ ಹೊಸ ವಿಧಾನಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಗುಂಟೂರಿನಲ್ಲಿ ಇದೇ ರೀತಿಯ ಕಳ್ಳತನ ನಡೆದಿದೆ.

ಗುಂಟೂರಿನಲ್ಲಿ ಬುಧವಾರ ಮಧ್ಯಾಹ್ನ ರಸ್ತೆಗಳು ನಿರ್ಜನವಾಗಿದ್ದವು. ಬಿಸಿಲು ತುಂಬಾ ತೀವ್ರವಾಗಿತ್ತು. ಚಂದ್ರಮೌಳಿ ನಗರದಲ್ಲಿ ಮೋಹನ್ ರೆಡ್ಡಿ ಮತ್ತು ಅನುರಾಧ ದಂಪತಿ ವಾಸವಿದ್ದಾರೆ. ಮಧ್ಯಾಹ್ನ ಮನೆಯಲ್ಲಿ ಅನುರಾಧಳನ್ನು ಬಿಟ್ಟರೆ ಯಾರೂ ಇಲ್ಲ. ಇನ್ನು ಮೋಹನ್ ರೆಡ್ಡಿ ಮಿರ್ಚಿ ಯಾರ್ಡ್​​​ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಹೋಗಿದ್ದಾರೆ. ಮಕ್ಕಳು ಕಾಲೇಜಿಗೆ ಹೋಗಿದ್ದರಿಂದ ಅನುರಾಧ ಒಬ್ಬಳೇ ಮನೆಯಲ್ಲಿದ್ದಳು.

ಈ ವೇಳೆ ಅನುರಾಧ ಬಾತ್ ರೂಮ್ ಗೆ ಹೋಗಿದ್ದಾರೆ. ಬಾತ್ ರೂಮಿಗೆ ಹೋಗುವ ಮುನ್ನ ಮನೆ ಬಾಗಿಲು ಮುಚ್ಚಲು ಮರೆತಿದ್ದರು. ಅದೇ ವೇಳೆಯಲ್ಲಿ ಅನುರಾಧ ಟಾಯ್ಲೆಟ್​​​ಗೆ ಹೋಗುವುದನ್ನು ಕಂಡ ಕಳ್ಳ ಮನೆಗೆ ನುಗ್ಗಿದ್ದಾನೆ. ಮನೆಯೊಳಗೆ ಬೀರುವಿನಲ್ಲಿದ್ದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಅಲ್ಲಿಂದ ಸೈಲೆಂಟಾಗಿ ಪರಾರಿಯಾಗಿದ್ದಾನೆ. ಹೋಗುವ ಮುನ್ನ ಬಾತ್ ರೂಂ ಬಾಗಿಲು ಬಂದ್​ ಮಾಡಿಟ್ಟು ಹೋಗಿದ್ದಾನೆ.

ಸ್ವಲ್ಪ ಸಮಯದ ನಂತರ ಅನುರಾಧ ಹೊರಬರಲು ಯತ್ನಿಸಿದ್ದಾರೆ. ಆದರೆ ಹೊರಗಿನಿಂದ ಬಾತ್ ರೂಂ ಬಾಗಿಲು ಬಂದ್​ ಆಗಿತ್ತು. ಆಗ ಕಿರುಚಿಕೊಂಡಿದ್ದಾರೆ. ಪಕ್ಕದ ಅಪಾರ್ಟ್‌ಮೆಂಟ್‌ನ ವಾಚ್‌ಮನ್.. ಅನುರಾಧಾಳ ಅಳು ಕೂಗಾಟ ಕೇಳಿ ಮನೆಯೊಳಗೆ ಬಂದಿದ್ದಾನೆ. ಅನುರಾಧ ಬಾತ್ ರೂಂನಿಂದ ಕಿರುಚುತ್ತಿರುವುದನ್ನು ಕಂಡು ಅಲ್ಲಿಗೆ ಹೋಗಿ ನೋಡಿದರೆ ಹೊರಗಿನಿಂದ ಚಿಲುಕ ಹಾಕಿರುವುದು ಕಂಡುಬಂದಿದೆ.

ಆಗ ವಾಚ್​​ಮನ್​​ ಚಿಲಕ ತೆಗೆಯುತ್ತಿದ್ದಂತೆ ಅನುರಾದ ತಕ್ಷಣ ಹೊರಗೆ ಬಂದಿದ್ದಾರೆ. ಬಾತ್ ರೂಂನಿಂದ ಹೊರ ಬಂದ ಅನುರಾಧ ಅನುಮಾನಗೊಂಡು ರೂಮಿನೊಳಕ್ಕೆ ಹೋಗಿ ನೋಡಿದಾಗ ಬಾಗಿಲು ಹಾಕಿರುವುದು ಕಂಡು ಬಂದಿದೆ. ಬೀರುವನ್ನು ಪರಿಶೀಲಿಸಲಾಗಿ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ಕಳ್ಳ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವುದನ್ನು ಕಂಡು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಸದ್ಯದಲ್ಲೇ ಕಳ್ಳನನ್ನು ಹಿಡಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ