ಇಂಡಿಯಾ ಬಣ ಪ್ರಧಾನಿ ನರೇಂದ್ರ ಮೋದಿಯನ್ನು ಮಾನಸಿಕವಾಗಿ ಸೋಲಿಸಿದೆ: ರಾಹುಲ್ ಗಾಂಧಿ

|

Updated on: Sep 04, 2024 | 4:37 PM

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. 1947 ರಲ್ಲಿ ಭಾರತ ಸಂವಿಧಾನವನ್ನು ಅಂಗೀಕರಿಸಿತು. ರಾಜರನ್ನು ತೆಗೆದುಹಾಕಲಾಯಿತು ಮತ್ತು ಪ್ರಜಾಪ್ರಭುತ್ವ ಸರ್ಕಾರಗಳನ್ನು ಆಯ್ಕೆ ಮಾಡಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ, ವ್ಯವಹಾರಗಳನ್ನು ರಾಜನಿಂದ ನಡೆಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇಂಡಿಯಾ ಬಣ ಪ್ರಧಾನಿ ನರೇಂದ್ರ ಮೋದಿಯನ್ನು ಮಾನಸಿಕವಾಗಿ ಸೋಲಿಸಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ಶ್ರೀನಗರ ಸೆಪ್ಟೆಂಬರ್ 04: ಪ್ರತಿಪಕ್ಷ ಇಂಡಿಯಾ ಬಣವು (INDIA bloc) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮಾನಸಿಕವಾಗಿ ಸೋಲಿಸಿದೆ, ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಪ್ರಧಾನಿ ಮೋದಿ ಅವರು ತಮ್ಮ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ, ಅವರಿಗೆ ಭಗವಾನ್ (ದೇವರೊಂದಿಗೆ) ನೇರ ಸಂಪರ್ಕವಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬಹಿರಂಗವಾಗಿ ನಾನ್‌ಬಯೋಲಾಜಿಕಲ್ ಎಂದು ಹೇಳಿದ್ದಾರೆ, ಆದರೆ ಉಳಿದ ಭಾರತವು ಜೈವಿಕವಾಗಿದೆ. ಈ ಚುನಾವಣೆಯಲ್ಲಿ ದೇವರು ಅವರಿಗೆ ನೇರ ಸಂದೇಶ ನೀಡಿದ್ದು, ಅವರು ಸಾರ್ವಜನಿಕರೊಂದಿಗೆ ಮಾತನಾಡಿ ಅವರ ಆಶಯದಂತೆ ನಡೆದುಕೊಳ್ಳಲು ಹೇಳಿದೆ ಎಂದಿದ್ದಾರೆ ರಾಹುಲ್ ಗಾಂಧಿ.

ದೇಶದಲ್ಲಿ ಜಾತಿ ಗಣತಿ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು, ಆದರೆ ಪ್ರತಿಪಕ್ಷಗಳು ಅದರ ಬೇಡಿಕೆಯಲ್ಲಿ ದೃಢವಾಗಿ ನಿಂತಿವೆ. ಇದೀಗ ಆರ್‌ಎಸ್‌ಎಸ್ ಸದಸ್ಯರು ಸಹ ಅದನ್ನು ಬೆಂಬಲಿಸುತ್ತಿದ್ದಾರೆ.

“ನಾನು ಸಂಸತ್ತಿನಲ್ಲಿ ಅವರ ಮುಂದೆ ಕುಳಿತುಕೊಳ್ಳುತ್ತೇನೆ.ಅವರ ವಿಶ್ವಾಸವು ಹೋಗಿದೆ. ಇಂಡಿಯಾ ಬಣ ಒಟ್ಟಾಗಿ ನಿಂತು ಒಗ್ಗಟ್ಟಿನಿಂದ ಹೋರಾಡಿತು. ಪಿಎಂ ಮೋದಿ ಲ್ಯಾಟರಲ್ ಎಂಟ್ರಿ ಮೂಲಕ ಜನರನ್ನು ಕರೆತರಲು ಬಯಸಿದ್ದರು, ಆದರೆ ಅದನ್ನು ವಿರೋಧಿಸಲಾಯಿತು ಮತ್ತು ನಂತರ ಬಿಜೆಪಿ ತನ್ನ ನಿಲುವನ್ನು ಬದಲಾಯಿಸಿತು ”ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನರೇಂದ್ರ ಮೋದಿಯವರು ದೇಶದಲ್ಲಿ ಜನರಿಗೆ ಹೆದರುತ್ತಿದ್ದಾರೆ. ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕಲು ಸ್ವಲ್ಪ ಸಮಯ ಮಾತ್ರ ಉಳಿದಿದೆ ಎಂದು ಅವರು ಹೇಳಿದರು.

“ನಾವು ದೇಶದಲ್ಲಿ ಸಹೋದರತ್ವವನ್ನು ಬಯಸುತ್ತೇವೆ, ಅಲ್ಲಿ ಪ್ರತಿಯೊಬ್ಬರನ್ನು ಗೌರವಿಸಲಾಗುತ್ತದೆ ಮತ್ತು ಜನರು ಪರಸ್ಪರ ಘನತೆಯಿಂದ ಮಾತನಾಡುತ್ತಾರೆ. ದುರ್ಬಲ ಗುಂಪುಗಳು, ಅವರು ರೈತರು, ಕಾರ್ಮಿಕರು ಅಥವಾ ಸಣ್ಣ ವ್ಯಾಪಾರ ಮಾಲೀಕರು ಯಾರೇ ಆಗಿರಲಿ ಅವರು ಈ ದೇಶದಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಭಾವಿಸಬೇಕು. ಇದು ಜಮ್ಮು ಮತ್ತು ಕಾಶ್ಮೀರದಲ್ಲೂ ಆಗಬೇಕೆಂದು ನಾವು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. 1947 ರಲ್ಲಿ ಭಾರತ ಸಂವಿಧಾನವನ್ನು ಅಂಗೀಕರಿಸಿತು. ರಾಜರನ್ನು ತೆಗೆದುಹಾಕಲಾಯಿತು ಮತ್ತು ಪ್ರಜಾಪ್ರಭುತ್ವ ಸರ್ಕಾರಗಳನ್ನು ಆಯ್ಕೆ ಮಾಡಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ, ವ್ಯವಹಾರಗಳನ್ನು ರಾಜನಿಂದ ನಡೆಸಲಾಗುತ್ತಿದೆ ಮತ್ತು ಅವರ ಹೆಸರು ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಎಂದು ಕಾಂಗ್ರೆಸ್ ನಾಯಕ ರಾಹುಲ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಯಾವಾಗ?

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ. ಹರ್ಯಾಣದಲ್ಲಿ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ.  2014 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 87 ಸ್ಥಾನಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆಗ ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) 28 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 25 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ: Rahul Gandhi: ಭೂಕುಸಿತ ಪೀಡಿತ ವಯನಾಡಿನ ಪುನರ್ವಸತಿ ಕಾರ್ಯಕ್ಕೆ ತಮ್ಮ 1 ತಿಂಗಳ ಸಂಬಳ ನೀಡಿದ ರಾಹುಲ್ ಗಾಂಧಿ

ಆಗ ಆಡಳಿತದಲ್ಲಿದ್ದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) 15 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದಿತ್ತು. 2015 ರಲ್ಲಿ ಸಯೀದ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಪಿಡಿಪಿ ಮತ್ತು ಬಿಜೆಪಿ ಕೈಜೋಡಿಸಿದ್ದವು. ಸಯೀದ್ ಅವರ ಮರಣದ ನಂತರ ಅವರ ಪುತ್ರಿ ಮೆಹಬೂಬಾ ಮುಫ್ತಿ ಸಿಎಂ ಆದರು ಆದರೆ 2018 ರಲ್ಲಿ ಬಿಜೆಪಿ ಬೆಂಬಲ ಹಿಂತೆಗೆದುಕೊಂಡ ನಂತರ ಸರ್ಕಾರ ಪತನವಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ