Rahul Gandhi: ಭೂಕುಸಿತ ಪೀಡಿತ ವಯನಾಡಿನ ಪುನರ್ವಸತಿ ಕಾರ್ಯಕ್ಕೆ ತಮ್ಮ 1 ತಿಂಗಳ ಸಂಬಳ ನೀಡಿದ ರಾಹುಲ್ ಗಾಂಧಿ

ಕೇರಳದ ಭೂಕುಸಿತ ಪೀಡಿತ ವಯನಾಡಿನಲ್ಲಿ ಪುನರ್ವಸತಿ ಕಾರ್ಯಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ವಯನಾಡ್‌ನಲ್ಲಿನ ಭೂಕುಸಿತದಿಂದಾಗಿ ಊರಿಗೆ ಊರೇ ಕೊಚ್ಚಿ ಹೋಯಿತು. ನೂರಾರು ಜನ ಪ್ರಾಣ ಕಳೆದುಕೊಂಡರು.

Rahul Gandhi: ಭೂಕುಸಿತ ಪೀಡಿತ ವಯನಾಡಿನ ಪುನರ್ವಸತಿ ಕಾರ್ಯಕ್ಕೆ ತಮ್ಮ 1 ತಿಂಗಳ ಸಂಬಳ ನೀಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
|

Updated on: Sep 04, 2024 | 3:34 PM

ನವದೆಹಲಿ: ಜುಲೈನಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೇರಳದ ವಯನಾಡ್ ಜಿಲ್ಲೆಗೆ ಹಾನಿಯಾಯಿತು. ಇದು ಬೆಟ್ಟಗಳ ಕುಸಿತಕ್ಕೆ ಕಾರಣವಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರವಾಹ ಪೀಡಿತ ವಯನಾಡಿನಲ್ಲಿ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ತಮ್ಮ 1 ತಿಂಗಳ ವೇತನವನ್ನು ದೇಣಿಗೆ ನೀಡುವುದಾಗಿ ಇಂದು ಘೋಷಿಸಿದ್ದಾರೆ.

“ಕೇರಳದ ವಯನಾಡಿನಲ್ಲಿರುವ ನಮ್ಮ ಸಹೋದರರು ಮತ್ತು ಸಹೋದರಿಯರು ವಿನಾಶಕಾರಿ ದುರಂತವನ್ನು ಸಹಿಸಿಕೊಂಡಿದ್ದಾರೆ. ಅವರು ಎದುರಿಸಿದ ಊಹಿಸಲಾಗದ ಸಂಕಷ್ಟದಿಂದ ಚೇತರಿಸಿಕೊಳ್ಳಲು ಅವರಿಗೆ ನಮ್ಮ ಬೆಂಬಲದ ಅಗತ್ಯವಿದೆ. ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ಸಹಾಯ ಮಾಡಲು ನಾನು ನನ್ನ 1 ತಿಂಗಳ ಸಂಪೂರ್ಣ ಸಂಬಳವನ್ನು (2.3 ಲಕ್ಷ ರೂ.) ನೀಡಿದ್ದೇನೆ. ಎಲ್ಲಾ ಭಾರತೀಯರು ಕೂಡ ತಮ್ಮಿಂದ ಆಗುವಷ್ಟು ಕೊಡುಗೆ ನೀಡುವಂತೆ ನಾನು ಪ್ರಾಮಾಣಿಕವಾಗಿ ಕೇಳಿಕೊಳ್ಳುತ್ತೇನೆ. ನಿಮ್ಮ ಸಣ್ಣ ಕಾಣಿಕೆಯೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬಲ್ಲದು” ಎಂದು ರಾಹುಲ್ ಗಾಂಧಿ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Rahul Gandhi: ಸ್ವಾತಂತ್ರ್ಯವೇ ನಮ್ಮ ದೊಡ್ಡ ರಕ್ಷಣಾ ಕವಚ; ರಾಹುಲ್ ಗಾಂಧಿ

ವಯನಾಡಿನಲ್ಲಿ ಜುಲೈನಲ್ಲಿ ಧಾರಾಕಾರ ಮಳೆ ಸುರಿದಿದೆ. ಇದು ಬೆಟ್ಟಗಳ ಕುಸಿತಕ್ಕೆ ಕಾರಣವಾಯಿತು, ಮಣ್ಣು, ನೀರು ಮತ್ತು ಬಂಡೆಗಳ ಬೃಹತ್ ಧಾರೆಗಳನ್ನು ಪ್ರಚೋದಿಸಿತು. ಈ ದುರಂತವು ಸುಮಾರು 276 ಜನರ ಸಾವಿಗೆ ಕಾರಣವಾಯಿತು. ಈ ದುರಂತದಲ್ಲಿ 240 ಜನರು ನಾಪತ್ತೆಯಾಗಿದ್ದರು.

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುವುದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಿಪ್ರವಾಗಿ ಸ್ಪಂದಿಸಿದ್ದು, ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಇದಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇರಳಕ್ಕೆ ತಮ್ಮ ರಾಜ್ಯದ ಬೆಂಬಲದ ಭರವಸೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ