ಆಪರೇಷನ್ ಥಿಯೇಟರ್​​ನಲ್ಲಿಯೂ ಹಿಜಾಬ್ ಧರಿಸಲು ಅವಕಾಶ ಕೊಡಿ; ಪ್ರಾಂಶುಪಾಲರಿಗೆ ಪತ್ರ ಬರೆದ ಕೇರಳದ 7 ವೈದ್ಯಕೀಯ ವಿದ್ಯಾರ್ಥಿಗಳು

|

Updated on: Jun 28, 2023 | 5:50 PM

ವಿದ್ಯಾರ್ಥಿಗಳ ಬೇಡಿಕೆಯನ್ನು ಸದ್ಯಕ್ಕೆ ಒಪ್ಪಲು ಸಾಧ್ಯವಿಲ್ಲ, ಆಪರೇಷನ್ ಥಿಯೇಟರ್‌ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ರೋಗಿಗಳ ಸುರಕ್ಷತೆಯೇ ಮುಖ್ಯ ಎಂದು ಪ್ರಾಂಶುಪಾಲೆ  ಮಾಧ್ಯಮಗಳಿಗೆ ತಿಳಿಸಿದ್ದಾ

ಆಪರೇಷನ್ ಥಿಯೇಟರ್​​ನಲ್ಲಿಯೂ ಹಿಜಾಬ್ ಧರಿಸಲು ಅವಕಾಶ ಕೊಡಿ; ಪ್ರಾಂಶುಪಾಲರಿಗೆ ಪತ್ರ ಬರೆದ ಕೇರಳದ 7 ವೈದ್ಯಕೀಯ ವಿದ್ಯಾರ್ಥಿಗಳು
ಹಿಜಾಬ್
Follow us on

ತಿರುವನಂತಪುರಂ: ಕೇರಳದ ಕ್ಯಾಂಪಸ್‌ನಲ್ಲಿಯೂ ಈಗ ಹಿಜಾಬ್ (Hijab) ಚರ್ಚೆಯಾಗುತ್ತಿದೆ. ತಿರುವನಂತಪುರಂ (Thiruvananthapuram) ಮೆಡಿಕಲ್ ಕಾಲೇಜಿನ ಏಳು ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದು, ಸರ್ಜಿಕಲ್ ಡ್ಯೂಟಿ ಮಾಡುವಾಗಲೂ ಹಿಜಾಬ್ ಧರಿಸಲು ಅವಕಾಶಬೇಕು ಎಂದು ಕೇಳಿದ್ದಾರೆ. ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಮುಸ್ಲಿಂ (Muslim) ಮಹಿಳೆಯರು ಎಲ್ಲಾ ಸಂದರ್ಭಗಳಲ್ಲಿಯೂ ಹಿಜಾಬ್ ಧರಿಸುವುದು ಕಡ್ಡಾಯ ಎಂದು ಕಾಲೇಜು ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆಪರೇಷನ್ ಥಿಯೇಟರ್ ಒಳಗೆ ತಲೆ ಮುಚ್ಚಿಕೊಳ್ಳಲು ಅವಕಾಶವಿಲ್ಲ. ಮುಸ್ಲಿಂ ಮಹಿಳೆಯರಿಗೆ ಅವರ ಧಾರ್ಮಿಕ ನಂಬಿಕೆಗಳ ಪ್ರಕಾರ ಎಲ್ಲಾ ಸಂದರ್ಭಗಳಲ್ಲಿ ಹಿಜಾಬ್ ಕಡ್ಡಾಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹಿಜಾಬ್ ಧರಿಸುವ ಮಹಿಳೆಯರು ಧಾರ್ಮಿಕವಾಗಿ ಉಡುಗೆ ಧರಿಸಬೇಕು. ಆಸ್ಪತ್ರೆ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯ ನಿಯಮಗಳನ್ನು ಅನುಸರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಪಂಚದ ಇತರ ಭಾಗಗಳಲ್ಲಿನ ಏಕರೂಪದ ಆರೋಗ್ಯ ಕಾರ್ಯಕರ್ತರ ಆಧಾರದ ಮೇಲೆ ಪರ್ಯಾಯಗಳನ್ನು ಸೂಚಿಸುತ್ತದೆ. ಶಸ್ತ್ರಚಿಕಿತ್ಸಾ ವಿಧಾನಗಳಿಗಾಗಿ ಬಟ್ಟೆಗಳನ್ನು ತಯಾರಿಸುವ ಕಂಪನಿಗಳು ನೀಡುವ ಆಯ್ಕೆಗಳನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ಹೇಳಿದೆ.
ಲಾಂಗ್ ಸ್ಲೀವ್ ಸ್ಕ್ರಬ್ ಜಾಕೆಟ್‌ಗಳು ಮತ್ತು ಸ್ಟೆರೈಲ್ ಆಗಿರುವ ಸರ್ಜಿಕಲ್ ಹುಡ್‌ಗಳಂತೆಯೇ ಹಿಜಾಬ್ ಕೂಡಾ ಎಂದು ಪತ್ರದಲ್ಲಿ ಹೇಳಿದ್ದು ಇವುಗಳನ್ನು ಧರಿಸಲು ಅವಕಾಶ ನೀಡುವಂತೆ ಪ್ರಾಂಶುಪಾಲರಲ್ಲಿ ಮನವಿ ಮಾಡಲಾಗಿದೆ. ವಿದ್ಯಾರ್ಥಿಗಳ ಬೇಡಿಕೆ ಕುರಿತು ಚರ್ಚಿಸಲು ಸಮಿತಿ ರಚಿಸಲಾಗಿದೆ ಎಂದು ಪ್ರಾಂಶುಪಾಲೆ ಡಾ.ಲಿನೆಟ್ ಮೋರಿಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ ಬ್ಯಾನ್ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಮನುವಾದಿಗಳು: ನಟ ಕಿಶೋರ್

ವಿದ್ಯಾರ್ಥಿಗಳ ಬೇಡಿಕೆಯನ್ನು ಸದ್ಯಕ್ಕೆ ಒಪ್ಪಲು ಸಾಧ್ಯವಿಲ್ಲ, ಆಪರೇಷನ್ ಥಿಯೇಟರ್‌ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ರೋಗಿಗಳ ಸುರಕ್ಷತೆಯೇ ಮುಖ್ಯ ಎಂದು ಪ್ರಾಂಶುಪಾಲೆ  ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವಿಚಾರದಲ್ಲಿ ನಾನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಇದಕ್ಕಾಗಿ ರಚಿಸಲಾಗಿರುವ ಸಮಿತಿಯು 10 ದಿನಗಳಲ್ಲಿ ಪರಿಹಾರ ನೀಡಲಿದೆ ಎಂದರು.

ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ವಿನಂತಿಯನ್ನು ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ