ನಕಲಿ ಕ್ರಿಪ್ಟೋಕರೆನ್ಸಿ: ಕೇರಳದಲ್ಲಿ 900 ಮಂದಿಗೆ ₹1200 ಕೋಟಿಗಿಂತಲೂ ಹೆಚ್ಚು ಮೊತ್ತ ವಂಚನೆ

ಕಳೆದ ಕೆಲವು ದಿನಗಳಿಂದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ದೆಹಲಿಯ 11 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿತ್ತು. ಬೆಂಗಳೂರು ಮೂಲದ ಲಾಂಗ್ ರಿಚ್ ಟೆಕ್ನಾಲಜೀಸ್ ಮತ್ತು ಮೋರಿಸ್ ಟ್ರೇಡಿಂಗ್ ಸೊಲ್ಯೂಷನ್ಸ್ ಸೇರಿದಂತೆ ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ.

ನಕಲಿ ಕ್ರಿಪ್ಟೋಕರೆನ್ಸಿ: ಕೇರಳದಲ್ಲಿ 900 ಮಂದಿಗೆ ₹1200 ಕೋಟಿಗಿಂತಲೂ ಹೆಚ್ಚು ಮೊತ್ತ ವಂಚನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 07, 2022 | 1:45 PM

ತಿರುವನಂತಪುರಂ: ಅಸ್ತಿತ್ವದಲ್ಲಿಲ್ಲದ ಕ್ರಿಪ್ಟೋಕರೆನ್ಸಿಗಾಗಿ(cryptocurrency) ಕೇರಳದ (Kerala) ವ್ಯಕ್ತಿಯೊಬ್ಬರು ನೀಡಿದ “ಆರಂಭಿಕ ನಾಣ್ಯ ಕೊಡುಗೆ” ಯಲ್ಲಿ 1,200 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆಯಾಗಿದ್ದು ಸುಮಾರು 900 ಮಂದಿ ವಂಚನೆಗೊಳಗಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ( Enforcement Directorate)ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇಡಿ ಮೂಲಗಳ ಪ್ರಕಾರ, ಬೋಗಸ್ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆಗಳನ್ನು 2020 ರಲ್ಲಿ ಮೊದಲ ಲಾಕ್‌ಡೌನ್ ಸಮಯದಲ್ಲಿ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಸಂತ್ರಸ್ತರು ಕೊಯಮತ್ತೂರಿನ ಫ್ರಾಂಕ್ ಪ್ಲಾಟ್‌ಫಾರ್ಮ್ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ “ಮೋರಿಸ್ ಕಾಯಿನ್” ಅನ್ನು ಆರಂಭಿಕ ಸಾರ್ವಜನಿಕ ಕೊಡುಗೆಯ ರೀತಿಯಲ್ಲಿ ಖರೀದಿಸಿದ್ದಾರೆ.  ಹತ್ತು ಮೋರಿಸ್ ಕಾಯಿನ್ 300 ದಿನಗಳ ಲಾಕ್-ಇನ್ ಅವಧಿಯೊಂದಿಗೆ 15,000 ರೂ ಆಗಿದ್ದು ಈ ಕರೆನ್ಸಿ ನಕಲಿಯಾಗಿತ್ತು. ಹೂಡಿಕೆದಾರರಿಗೆ ಇ-ವ್ಯಾಲೆಟ್ ನೀಡಲಾಯಿತು ಮತ್ತು ವಿನಿಮಯದಲ್ಲಿ ವ್ಯಾಪಾರ ಮಾಡುವಾಗ ನಾಣ್ಯ ಮೌಲ್ಯವು ಹೆಚ್ಚಾಗುತ್ತದೆ ಎಂದು ಹೇಳಲಾಗಿತ್ತು ಎಂದು ಇಡಿ ಮೂಲಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

“ಆದರೆ ನಾಣ್ಯದ ಪ್ರವರ್ತಕರು ಹಣವನ್ನು ಬೇರೆ ಕಾರ್ಯಕ್ಕಾಗಿ ಬಳಸಿದ್ದು ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿನ ಸ್ಥಿರ ಆಸ್ತಿಗಳಲ್ಲಿ, ವಿಶೇಷವಾಗಿ ರಿಯಲ್ ಎಸ್ಟೇಟ್​​ನಲ್ಲಿ ಯಾವುದೇ ಆದಾಯದ ಮೂಲವನ್ನು ತೋರಿಸದೆ ಅಕ್ರಮವಾಗಿ ಹೂಡಿಕೆ ಮಾಡಿದ್ದಾರೆ” ಎಂದು ಮೂಲವು ಹೇಳಿದೆ.

ಕಳೆದ ಕೆಲವು ದಿನಗಳಿಂದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ದೆಹಲಿಯ 11 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿತ್ತು. ಬೆಂಗಳೂರು ಮೂಲದ ಲಾಂಗ್ ರಿಚ್ ಟೆಕ್ನಾಲಜೀಸ್ ಮತ್ತು ಮೋರಿಸ್ ಟ್ರೇಡಿಂಗ್ ಸೊಲ್ಯೂಷನ್ಸ್ ಸೇರಿದಂತೆ ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ. ಮಲಯಾಳಂ ನಟ ಉಣ್ಣಿ ಮುಕುಂದನ್ ಸ್ಥಾಪಿಸಿದ ಕಂಪನಿ ಉಣ್ಣಿ ಮುಕುಂದನ್ ಫಿಲ್ಮ್ಸ್ ಪ್ರೈ. ಲಿಮಿಟೆಡ್  ಮತ್ತು ನೆಕ್ಸ್ಟೆಲ್ ಗ್ರೂಪ್, ಇಡಿಯಿಂದ ಶೋಧಿಸಿದ ಸ್ಥಳಗಳಲ್ಲಿ ಸೇರಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮಲಪ್ಪುರಂ ಜಿಲ್ಲೆಯ ಪೂಕ್ಕೊಟ್ಟುಂಪಾಡಂ ಗ್ರಾಮದ ನಿಶಾದ್ 31 ವರ್ಷ ವಂಚನೆಯ ಮಾಸ್ಟರ್ ಮೈಂಡ್ ಎಂದು ಇಡಿ ಗುರುತಿಸಿದೆ. ಇಡಿ ಅಧಿಕಾರಿಗಳು ನಟ ಉನ್ನಿ, ನಿಶಾದ್ ಜೊತೆ ನಂಟು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳ ಪೊಲೀಸರು ನಿಶಾದ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ) ಅಡಿಯಲ್ಲಿ ವಿವಿಧ ದೂರುಗಳನ್ನು ದಾಖಲಿಸಿದ ನಂತರ, ನಿರ್ದೇಶನಾಲಯವು ಕಳೆದ ವರ್ಷ ಪ್ರಕರಣವನ್ನು ಕೈಗೆತ್ತಿಕೊಂಡಿತು.  ಆಪಾದಿತ ಕ್ರಿಮಿನಲ್‌ಗಳು ಕೂಡ ಪೊಂಜಿ ಯೋಜನೆಯಲ್ಲಿ ಭಾಗಿಯಾಗಿದ್ದರು. ಕಂಪನಿಯು ಭರವಸೆ ನೀಡಿದ ಲಾಭವನ್ನು ಪಾವತಿಸುವುದನ್ನು ನಿಲ್ಲಿಸಿದ ನಂತರ, ಅನೇಕ ಹೂಡಿಕೆದಾರರು ಪೊಲೀಸರಿಗೆ ಹೋಗಿ ದೂರು ನೀಡಿದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಕೇರಳ ಹೈಕೋರ್ಟ್‌ನಿಂದ ಪೊಲೀಸ್ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಪಡೆದ ನಂತರ ನಿಶಾದ್ ದೇಶದಿಂದ ಪರಾರಿಯಾಗಿದ್ದನು.

ಇದನ್ನೂ ಓದಿ:  PM Modi’s Security Breach ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ

Published On - 1:43 pm, Fri, 7 January 22