Coronavirus India Update: 3.86 ಲಕ್ಷ ಹೊಸ ಕೊವಿಡ್ ಪ್ರಕರಣಗಳೊಂದಿಗೆ ದಾಖಲೆ ಬರೆದ ಭಾರತ , ಒಂದೇದಿನ 3,498 ಮಂದಿ ಸಾವು

|

Updated on: Apr 30, 2021 | 11:10 AM

Covid 19 in India: ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 1.87 ಕೋಟಿ ತಲುಪಿದೆ. 31 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಇಲ್ಲಿದ್ದು 1.53 ಕೋಟಿ ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ,ದೇಶದಲ್ಲಿ ಒಂದೇ ದಿನ 3,498 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 2.08 ಲಕ್ಷಕ್ಕೆ ತಲುಪಿದೆ.

Coronavirus India Update: 3.86 ಲಕ್ಷ ಹೊಸ ಕೊವಿಡ್ ಪ್ರಕರಣಗಳೊಂದಿಗೆ ದಾಖಲೆ ಬರೆದ ಭಾರತ , ಒಂದೇದಿನ 3,498 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಎರಡನೇ ಅಲೆ ಅತೀ ಗಂಭೀರ ಸ್ವರೂಪ ತಾಳುತ್ತಿದೆ . ಕಳೆದ 24 ಗಂಟೆಗಳಲ್ಲಿ 3.86 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು, ಸಾಂಕ್ರಾಮಿಕ ರೋಗ ಆರಂಭವಾದಂದಿನಿಂದ ಇಲ್ಲಿಯವರೆಗೆ ಅತೀ ಹೆಚ್ಚು ರೋಗ ಪ್ರಕರಣಗಳು ಗುರುವಾರ ಪತ್ತೆಯಾಗಿದೆ. ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 1.87 ಕೋಟಿ ತಲುಪಿದೆ. 31 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಇಲ್ಲಿದ್ದು 1.53 ಕೋಟಿ ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ,ದೇಶದಲ್ಲಿ ಒಂದೇ ದಿನ 3,498 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 2.08 ಲಕ್ಷಕ್ಕೆ ತಲುಪಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ 395 ಮಂದಿ ಸಾವಿಗೀಡಾಗಿದ್ದು ಕೊವಿಡ್ ಪ್ರಕರಣಗಳ ಸಂಖ್ಯೆ 24, 235ಕ್ಕೇರಿದೆ. ದೆಹಲಿಯ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಲ್ಲಿ 32.82 ಪಾಸಿಟಿವಿಟಿ ದರ ಇದೆ. ಕೊವಿಡ್ ಸೋಂಕಿತರ ಸಂಖ್ಯೆ 11,22,286 ಆಗಿದ್ದು, 10.08ಲಕ್ಷಕ್ಕಿಂತ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 15,772 ಆಗಿದೆ.

ಕೊವಿಡ್ ರೋಗ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಿ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.


ಮಹಾರಾಷ್ಟ್ರದಲ್ಲಿ ಕೊವಿಡ್ ನಿರ್ಬಂಧಗಳನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆ 2005 ಪ್ರಕಾರ ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಬ್ರೇಕ್ ಮಾಡಲು 2021 ರ ಮೇ 1 ರಂದು ಬೆಳಿಗ್ಗೆ 7 ಗಂಟೆಗೆಯಿಂದ 2021 ಮೇ 15 ರಂದು ಬೆಳಿಗ್ಗೆ 7 ಗಂಟೆಯವರೆಗೆ ರಾಜ್ಯದಾದ್ಯಂತ ಪ್ರಸ್ತುತ ನಿರ್ಬಂಧಗಳ ಜಾರಿಗೊಳಿಸುವಿಕೆಯನ್ನು ಮುಂದುವರಿಸುವುದು ಅವಶ್ಯಕ ಎಂದು ಹೇಳಿದೆ.


ಒಂದು ಪ್ರಮುಖ ಬೆಳವಣಿಗೆಯಲ್ಲಿ, ಭಾರತ್ ಬಯೋಟೆಕ್ ಗುರುವಾರ ಕೋವಾಕ್ಸಿನ್ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ.ಗಳ ದರದಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿತು. ಈ ಹಿಂದೆ ಲಸಿಕೆಯ ಬೆಲೆಯನ್ನು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂಗೆ ನೀಡುವುದಾಗಿ ಹೇಳಿತ್ತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಆಗಿರುವ ಅಗಾಧ ಸವಾಲುಗಳನ್ನು ಗುರುತಿಸಿ, ನಾವು ಕೊವಾಕ್ಸಿನ್ ಅನ್ನು ರಾಜ್ಯ ಸರ್ಕಾರಗಳಿಗೆ ಡೋಸ್ ಗೆ 400 ರೂ ದರದಲ್ಲಿ ನೀಡಲಿದ್ದೇವೆ ಎಂದು ಭಾರತ್ ಬಯೋಟೆಕ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

18 ರಿಂದ 45 ವರ್ಷದೊಳಗಿನ ಎಲ್ಲ ವಯಸ್ಕರನ್ನು ಒಳಗೊಳ್ಳುವ ರಾಷ್ಟ್ರವ್ಯಾಪಿ ಕೊರೊನಾವೈರಸ್ ಲಸಿಕೆ ಅಭಿಯಾನತದ ಮುಂದಿನ ಹಂತಕ್ಕಾಗಿ ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 1.33 ಕೋಟಿ ಜನರು ಹೆಸರ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 35,024 ಮಂದಿಗೆ ಕೊರೊನಾ ಸೋಂಕು, 270 ಸಾವು

ಲಸಿಕೆಗಾಗಿ 18-45 ವರ್ಷದವರು ನಾಳೆ ಆಸ್ಪತ್ರೆಗೆ ಹೋಗಬೇಡಿ, ಅಧಿಕೃತವಾಗಿ ಹೇಳೋ ತನಕ ಕಾಯಬೇಕು: ಡಾ.ಸುಧಾಕರ್

(In new record high India reported 3.86 lakh new Covid-19 cases 3498 deaths in the last 24 hours)

Published On - 10:35 am, Fri, 30 April 21