AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಕಂಗಾಲಾದ ಭಾರತ; ಸಹಾಯಕ್ಕೆ ಧಾವಿಸಿದ ಹಾಂಕಾಂಗ್, ಐರ್ಲೆಂಡ್

ಕೊರೊನಾ ಸೋಂಕಿನಿಂದ ಎದುರಾದ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಭಾರತಕ್ಕೆ ಐರ್ಲೆಂಡ್ ದೇಶ ಕೂಡ ನೆರವು ನೀಡಲು ಮುಂದಾಗಿದೆ. ಐರ್ಲೆಂಡ್‌ನಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ 700 ಆಕ್ಸಿಜನ್ ಸಾಂದ್ರಕ, 365 ವೆಂಟಿಲೇಟರ್ ಆಗಮಿಸಿದೆ‌ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಛಿ ಮಾಹಿತಿ‌ ನೀಡಿದ್ದಾರೆ.

ಕೊರೊನಾದಿಂದ ಕಂಗಾಲಾದ ಭಾರತ; ಸಹಾಯಕ್ಕೆ ಧಾವಿಸಿದ ಹಾಂಕಾಂಗ್, ಐರ್ಲೆಂಡ್
ಆಯೇಷಾ ಬಾನು
ಆಯೇಷಾ ಬಾನು|

Updated on: Apr 30, 2021 | 9:24 AM

Share

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ‌ ವ್ಯಾಪಕವಾಗಿ ಹಬ್ಬುತ್ತಿದ್ದು ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿದೆ. ಪರಿಣಾಮವಾಗಿ ವೈದ್ಯಕೀಯ ಸೌಲಭ್ಯಗಳ ಅಭಾವ ಸೃಷ್ಟಿಯಾಗಿದ್ದು ಗಂಭೀರಾವಸ್ಥೆಗೆ ತಲುಪಿದ ಹಲವು ಸೋಂಕಿತರು ಸಮಯಕ್ಕೆ‌ ಸರಿಯಾದ‌ ಚಿಕಿತ್ಸೆ ದೊರಕದೆ ಜೀವ ಬಿಡುತ್ತಿದ್ದಾರೆ. ಭಾರತದ ಈ ಪರಿಸ್ಥಿತಿಯನ್ನು ಗಮನಿಸಿ ಹಲವು ದೇಶಗಳು ನೆರವಿಗೆ ಮುಂದಾಗಿದ್ದು ಹಾಂಕಾಂಗ್, ಐರ್ಲೆಂಡ್ ದೇಶಗಳು ಕೂಡಾ ಸಹಾಯ ಹಸ್ತ ಚಾಚಿವೆ. ಹಾಂಕಾಂಗ್‌ನಿಂದ ಭಾರತಕ್ಕೆ 300 ಆಕ್ಸಿಜನ್ ಸಾಂದ್ರಕ ಹಾಗೂ ಇತರ ವೈದ್ಯಕೀಯ ಉಪಕರಣ ಹೊತ್ತ ವಿಮಾನ ಆಗಮಿಸಿದ್ದು, ದೆಹಲಿಯ ವಿಮಾನ‌ ನಿಲ್ದಾಣದಲ್ಲಿ ಈ ಪರಿಕರಗಳನ್ನು ಹೊತ್ತ ಇಂಡಿಗೋ ವಿಮಾನ ಬಂದಿಳಿದಿದೆ. ಈ ಉಪಕರಣಗಳು ಸದ್ಯದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಲಿವೆ.‌ ಈಗಾಗಲೇ ನಾವು ಮಾಡುತ್ತಿರುವ ಕೆಲಸಕ್ಕೆ ಇನ್ನಷ್ಟು ಶಕ್ತಿ ಒದಗಿಸಿದಂತಾಗಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ‌ ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಎದುರಾದ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಭಾರತಕ್ಕೆ ಐರ್ಲೆಂಡ್ ದೇಶ ಕೂಡ ನೆರವು ನೀಡಲು ಮುಂದಾಗಿದೆ. ಐರ್ಲೆಂಡ್‌ನಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ 700 ಆಕ್ಸಿಜನ್ ಸಾಂದ್ರಕ, 365 ವೆಂಟಿಲೇಟರ್ ಆಗಮಿಸಿದೆ‌ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಛಿ ಮಾಹಿತಿ‌ ನೀಡಿದ್ದಾರೆ.

ಇದಕ್ಕೂ ಮುನ್ನ, ಕಳೆದ ಸೋಮವಾರ (ಏಪ್ರಿಲ್ 26) ನ್ಯೂಯಾರ್ಕ್‌ನಿಂದ ಒಟ್ಟು 328 ಆಕ್ಸಿಜನ್‌ ಪೂರೈಕೆ ಪರಿಕರವನ್ನು ಹೊತ್ತು ತಂದ ಏರ್‌ ಇಂಡಿಯಾ ವಿಮಾನ ಭಾರತವನ್ನು ತಲುಪಿತ್ತು. ಜತೆಗೆ, ವಿಶ್ವದ ಇನ್ನಿತರ ದೇಶಗಳು ಸಹ ಈ ಸಂದರ್ಭದಲ್ಲಿ ಭಾರತಕ್ಕೆ‌ ಹೆಗಲಾಗಲು ನಿರ್ಧರಿಸಿ ಮುಂದೆ ಬರುತ್ತಿವೆ.

ಇದನ್ನೂ ಓದಿ: ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್​ ಸಭೆ ಸಫಲ, ಭಾರತಕ್ಕೆ ನೆರವು ನೀಡಲು 135 ಸಿಇಓಗಳ ಒಪ್ಪಿಗೆ

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!