Vigilance Attack: ಭ್ರಷ್ಟ ಅಧಿಕಾರಿ ವಿಜಿಲೆನ್ಸ್ ದಾಳಿಗೆ ಹೆದರಿ ಪಕ್ಕದ ಮನೆಯೊಳಕ್ಕೆ 2 ಕೋಟಿ ರೂ ಹಣ ಎಸೆದಾಗ..

ಪ್ರಶಾಂತ್ ಕುಮಾರ್ ರಾವುತ್ ಅವರು ಇತ್ತೀಚೆಗೆ ರೂ. 2000 ನೋಟುಗಳು ರೂ. 500 ನೋಟುಗಳನ್ನು ಬ್ಯಾಂಕಿನಲ್ಲಿ ಬದಲಾಯಿಸಿಕೊಂಡಿದ್ದರು. ಅದನ್ನು 6 ಪೆಟ್ಟಿಗೆಗಳಲ್ಲಿ ಮರೆಮಾಚಿ ಇಟ್ಟಿದ್ದರು. ಆದರೆ.. ಹಠಾತ್ ವಿಜಿಲೆನ್ಸ್ ದಾಳಿಯಿಂದ ವಿಚಲಿತರಾಗಿದ್ದಾರೆ.

Vigilance Attack:  ಭ್ರಷ್ಟ ಅಧಿಕಾರಿ ವಿಜಿಲೆನ್ಸ್ ದಾಳಿಗೆ ಹೆದರಿ ಪಕ್ಕದ ಮನೆಯೊಳಕ್ಕೆ 2 ಕೋಟಿ ರೂ ಹಣ ಎಸೆದಾಗ..
ವಿಜಿಲೆನ್ಸ್ ದಾಳಿಗೆ ಹೆದರಿ ಪಕ್ಕದ ಮನೆಯೊಳಕ್ಕೆ 2 ಕೋಟಿ ರೂ ಹಣ ಎಸೆದ ಭ್ರಷ್ಟ ಅಧಿಕಾರಿ
Follow us
ಸಾಧು ಶ್ರೀನಾಥ್​
|

Updated on: Jun 24, 2023 | 6:37 AM

ಒಂದು ವೇಳೆ ನೀವು ಆದಾಯ ಮೀರಿದ ಆಸ್ತಿಯನ್ನು (Corruption) ಹೊಂದಿದ್ದರೆ, ಆ ಭಯ ಹೇಗಿರುತ್ತದೆ ಎಂದು ನಿಮಗೆ ತಿಳಿದಿದೆಯಾ? ಅಕ್ರಮವಾಗಿ ಹಣ ಗಳಿಸುವುದು, ಗೊತ್ತಿಲ್ಲದೇ ನಿರ್ವಹಣೆ ಮಾಡುವುದು ಹೀಗೆ ಅಪಾರ ಹಣ ಗುಡ್ಡೆ ಹಾಕಿದಾಗ ಇಂತಹ ಪ್ರಸಂಗಗಳು ಎದುರಾಗುತ್ತವೆ. ಇತ್ತೀಚೆಗಷ್ಟೇ ಉನ್ನತ ಅಧಿಕಾರಿಯೊಬ್ಬರ ಪ್ರಕರಣದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಆತ, ಪ್ರಶಾಂತ್ ಕುಮಾರ್ ರಾವುತ್ ಅಂತಾ… ಒಡಿಶಾದ ನಬರಂಗಪುರ ಜಿಲ್ಲೆಯ ಹೆಚ್ಚುವರಿ ಸಬ್ ಕಲೆಕ್ಟರ್. ಅವರ ಮೇಲೆ… ಆದಾಯಕ್ಕೂ ಮೀರಿ ಅಪಾರ ಆಸ್ತಿ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದರೊಂದಿಗೆ.. ಭ್ರಷ್ಟಾಚಾರ ವಿರೋಧಿ ದಳದ ವಿಜಿಲೆನ್ಸ್ ಅಧಿಕಾರಿಗಳು (Anti corruption vigilance wing) ಫೀಲ್ಡಿಗಿಳಿದಿದ್ದರು. ಭುವನೇಶ್ವರದಲ್ಲಿರುವ ಅವರ ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಿಂದ ಗಾಬರಿಗೊಂಡ ಆತ ಐದಾರು ಬಾಕ್ಸ್ ಗಳಲ್ಲಿ ನಗದು ತುಂಬಿ ಪಕ್ಕದಲ್ಲಿದ್ದ ಮನೆಯೊಳಕ್ಕೆ (Neighbour) ಎಸೆದಿದ್ದಾನೆ. ಆದರೆ ಇದು ವಿಜಿಲೆನ್ಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಹಣ ತುಂಬಿದ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಶಾಂತ್ ಕುಮಾರ್ ರಾವುತ್ ಅವರು ಇತ್ತೀಚೆಗೆ ರೂ. 2000 ನೋಟುಗಳು ರೂ. 500 ನೋಟುಗಳನ್ನು ಬ್ಯಾಂಕಿನಲ್ಲಿ ಬದಲಾಯಿಸಿಕೊಂಡಿದ್ದರು. ಅದನ್ನು 6 ಪೆಟ್ಟಿಗೆಗಳಲ್ಲಿ ಮರೆಮಾಚಿ ಇಟ್ಟಿದ್ದರು. ಆದರೆ.. ಹಠಾತ್ ವಿಜಿಲೆನ್ಸ್ ದಾಳಿಯಿಂದ ವಿಚಲಿತರಾಗಿದ್ದಾರೆ. ಆ ಭಯದಿಂದಲೇ ಪಕ್ಕದ ಮನೆಯೊಳಕ್ಕೆ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಣದ ಬಾಕ್ಸ್ ಗಳನ್ನು ಎಸೆದಿದ್ದಾರೆ. ಇದನ್ನು ಗ್ರಹಿಸಿ ವಶಪಡಿಸಿಕೊಂಡಿದ್ದೇವೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Also Read:  ನಿವೃತ್ತ ಯೋಧ ಅಂತಾನೂ ನೋಡದೆ ಎದೆಗೂಡು ಮುರಿದಿದ್ದಾರೆ ನೆರೆಮನೆಯವರು, ಅಸಲಿ ವಿಷಯ ಏನು?

ಅಲ್ಲದೆ, ಪ್ರಶಾಂತ್ ಗೆ ಸೇರಿದ ಇತರ ಇನ್ನೂ ಒಂಬತ್ತು ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ನಬರಂಗಪುರದಲ್ಲಿ ಇನ್ನೂ 77 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಈ ದಾಳಿಗಳಲ್ಲಿ ರೂ. 3 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ನಬರಂಗಪುರ ಜಿಲ್ಲೆಯಲ್ಲಿ ಗಣಿಗಾರಿಕೆ ಮಾಫಿಯಾಗೆ ಸಹಕರಿಸುವ ಮೂಲಕ ರಾವತ್ ಅಪಾರ ಪ್ರಮಾಣದ ಅಕ್ರಮ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 2018 ರಲ್ಲಿ, ಅವರು ಸುಂದರ್‌ಗಢ ಜಿಲ್ಲೆಯಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿಯಾಗಿದ್ದಾಗ ಒಮ್ಮೆ ಲಂಚ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್