ಅಲ್ಮೇರಾದಲ್ಲಿ ಬಟ್ಟೆ ಜೋಡಿಸೋದನ್ನ ನೋಡಿದ್ದೇವೆ, ಆದ್ರೆ ಇವನು ನೋಡಿ ಏನು ಜೋಡಿಸಿಟ್ಟವನೇ!

ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್​ ಜೈನ್​ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್​ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ. ಇದೆಲ್ಲವೂ ಸಂಜಯ್​ ಜೈನ್​ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ […]

ಅಲ್ಮೇರಾದಲ್ಲಿ ಬಟ್ಟೆ ಜೋಡಿಸೋದನ್ನ ನೋಡಿದ್ದೇವೆ, ಆದ್ರೆ ಇವನು ನೋಡಿ ಏನು ಜೋಡಿಸಿಟ್ಟವನೇ!
Follow us
ಸಾಧು ಶ್ರೀನಾಥ್​
|

Updated on:Oct 27, 2020 | 12:08 PM

ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್​ ಜೈನ್​ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್​ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ.

ಇದೆಲ್ಲವೂ ಸಂಜಯ್​ ಜೈನ್​ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ ಸಂಜಯ್​ ಜೈನ್​ನ ಒಂದು ನಿವಾಸದ ಬೀರು, ಅಲ್ಮೇರಾಗಳಲ್ಲಿ 2.37 ಕೋಟಿ ರೂಪಾಯಿ ನಗದು ಮತ್ತು 2.89 ಕೋಟಿ ರೂ ಮೌಲ್ಯದ ಆಭರಣಗಳನ್ನು Income Tax Department ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಇದೆಲ್ಲ ಅಕ್ರಮ ಸಂಪತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

Published On - 12:07 pm, Tue, 27 October 20