ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಐಟಿ ದಾಳಿ; ವಂಶಿರಾಂ ಬಿಲ್ಡರ್ಸ್ ಸುಬ್ಬಾರೆಡ್ಡಿ ಮನೆಯಲ್ಲಿ ಶೋಧ
ಹೈದರಾಬಾದ್ನ ಜುಬಿಲಿ ಹಿಲ್ಸ್ ರಸ್ತೆ ನಂ.45ರಲ್ಲಿರುವ ವಂಶಿರಾಮ್ ಬಿಲ್ಡರ್ಸ್ ಸುಬ್ಬಾರೆಡ್ಡಿ ಅವರ ಸೋದರ ಮಾವ ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ತಪಾಸಣೆ ನಡೆಸಲಾಯಿತು. ಹೀಗಾಗಿ ಅವರ ಮನೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮಂಗಳವಾರ ಮುಂಜಾನೆ ಹೈದರಾಬಾದ್ ಮತ್ತು ವಿಜಯವಾಡದ ಹಲವೆಡೆ ಆದಾಯ ತೆರಿಗೆ ಇಲಾಖೆ (Income Tax)ದಾಳಿ ನಡೆಸಿದೆ. ವಂಶಿರಾಂ ಬಿಲ್ಡರ್ಸ್‌ನ ಕಚೇರಿಗಳು ಮತ್ತು ನಿರ್ದೇಶಕರ ಮನೆಗಳಲ್ಲಿ ಬೆಳಗ್ಗೆಯಿಂದ ಐಟಿ ಇಲಾಖೆ ಶೋಧ ನಡೆಸುತ್ತಿದ್ದು, 36 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿದೆ. ವಂಶಿರಾಂ ಬಿಲ್ಡರ್ಸ್(Vamseeram builders) ಅಧ್ಯಕ್ಷ ತಿಕ್ಕವರಪು ಸುಬ್ಬಾರೆಡ್ಡಿ ಜತೆಗೆ ನಿರ್ದೇಶಕ ಜನಾರ್ದನರೆಡ್ಡಿ ಅವರ ಮನೆಯಲ್ಲೂ ಶೋಧ ನಡೆಯುತ್ತಿದೆ. ವಂಶಿರಾಂ ಬಿಲ್ಡರ್ ಸುಬ್ಬಾರೆಡ್ಡಿ ಅವರ ಮನೆಯಲ್ಲಿ ತಪಾಸಣೆ ನಡೆಯುತ್ತಿದೆ. ಹೈದರಾಬಾದ್ನ ಜುಬಿಲಿ ಹಿಲ್ಸ್ ರಸ್ತೆ ನಂ.45ರಲ್ಲಿರುವ ವಂಶಿರಾಮ್ ಬಿಲ್ಡರ್ಸ್ ಸುಬ್ಬಾರೆಡ್ಡಿ ಅವರ ಸೋದರ ಮಾವ ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ತಪಾಸಣೆ ನಡೆಸಲಾಯಿತು. ಹೀಗಾಗಿ ಅವರ ಮನೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಏತನ್ಮಧ್ಯೆ, ತೆಲಂಗಾಣದ ಪ್ರಮುಖ ರಾಜಕೀಯ ನಾಯಕನಿಗೆ ಸಂಬಂಧಿಸಿದ ಹೂಡಿಕೆಗಳ ಹಣಕಾಸು ವ್ಯವಹಾರಗಳ ಮೇಲೆ ಐಟಿ ಅಧಿಕಾರಿಗಳು ಗಮನಹರಿಸಿದ್ದಾರೆ ಎಂದು ವರದಿಯಾಗಿದೆ. ಅದರ ಭಾಗವಾಗಿಯೇ ಈ ದಾಳಿಗಳು ನಡೆಯುತ್ತಿವ ಎಂದು ಹೇಳಲಾಗಿದೆ. ಮತ್ತೊಂದೆಡೆ, ವಿಜಯವಾಡದಲ್ಲಿರುವ ವೈಎಸ್‌ಆರ್‌ಸಿಪಿ ನಾಯಕ ದೇವಿನೇನಿ ಅವಿನಾಶ್ ಅವರ ಮನೆಯಲ್ಲಿ ಐಟಿ ಶೋಧ ನಡೆಯುತ್ತಿದೆ. ಇಂದು ಬೆಳಗ್ಗೆ 6.30ಕ್ಕೆ ಅವಿನಾಶ್ ಮನೆಗೆ ತೆರಳಿದ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ವಂಶಿರಾಂ ಬಿಲ್ಡರ್ಸ್ ಮೇಲಿನ ದಾಳಿಯು ತೆಲಂಗಾಣ ರಾಜ್ಯದ ಪ್ರಮುಖ ಬಿಲ್ಡರ್‌ಗಳಾದ ಸುರೇಶ್ ಚುಕ್ಕಪಲ್ಲಿ ಅವರ ಫೀನಿಕ್ಸ್ ಗ್ರೂಪ್ ಮತ್ತು ಇತರ ಪ್ರಮುಖ ಇನ್‌ಫ್ರಾ ಗುಂಪುಗಳಾದ ಸುಮಧುರ, ವಾಸವಿ ಮತ್ತು ಸಾಹಿತಿ ಇನ್‌ಫ್ರಾ ವೆಂಚರ್ಸ್ ಹಲವಾರು ರಾಜಕೀಯ ನಾಯಕರಿಂದ ಹಣಕಾಸು ಹೂಡಿಕೆಗೆ ಸಂಬಂಧಿಸಿದಂತೆ ಪರಸ್ಪರ ಸಂಪರ್ಕ ಹೊಂದಿದೆ ಎಂದು ಸಾಕ್ಷಿ ಡಾಟ್ ಕಾಂ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Tue, 6 December 22