ನವದೆಹಲಿ: ಭಾರತಕ್ಕೆ ಇಂದು ಸ್ವಾತಂತ್ರ್ಯೋತ್ಸವದ (Independence Day) ಅಮೃತ ಮಹೋತ್ಸವದ (Azadi Ka Amrit Mahothsav) ಸಂಭ್ರಮ. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ (Red Fort) ಸತತ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಪುನರುಚ್ಚರಿಸಿದ ನರೇಂದ್ರ ಮೋದಿ, ನಮ್ಮ ದೇಶವು ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ. ಈ 75 ವರ್ಷಗಳ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದೆ ಎಂದು ಹೇಳಿದರು. ಭಾರತ ಪ್ರಜಾಪ್ರಭುತ್ವದ ತಾಯಿ, ನಮ್ಮ ದೇಶದ ವೈವಿಧ್ಯತೆಯೇ ಅದರ ಶಕ್ತಿ ಎಂದು ಹೇಳಿದ್ದಾರೆ.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಯುವಜನರಿಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದಾರೆ. ಭಾರತದ ಯುವಜನತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವುದರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡುವಂತೆ ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ.
India is the mother of democracy. India has proved that it has a precious ability, and faced many challenges during its journey of 75 years: PM Modi at Red Fort#IndiaAt75 pic.twitter.com/qBxb43XDYs
— ANI (@ANI) August 15, 2022
ಈ ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರನ್ನು ಅಭಿನಂದಿಸುತ್ತೇನೆ. ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನ ನಾಗರಿಕರು ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ಕರ್ತವ್ಯದ ಹಾದಿಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ಭಾರತದ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ, ಬೇಗುನ್ ಹಜರತ್ ಮಹಲ್, ಈ ದೇಶವು ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ನಮ್ಮ ದೇಶ ಕೃತಜ್ಞವಾಗಿದೆ ಎಂದು ಮೋದಿ ಹೇಳಿದ್ದಾರೆ.
#WATCH Live: Prime Minister Narendra Modi addresses the nation from the ramparts of the Red Fort on #IndependenceDay (Source: DD National)
— ANI (@ANI) August 15, 2022
ಇದನ್ನೂ ಓದಿ: Narendra Modi: ಧ್ವಜಾರೋಹಣದ ವೇಳೆ ಬಿಳಿ ಕುರ್ತಾ, ನೀಲಿ ಜಾಕೆಟ್, ರಾಷ್ಟ್ರಧ್ವಜದ ಮಾದರಿಯ ಟರ್ಬಾನ್ ತೊಟ್ಟು ಗಮನ ಸೆಳೆದ ಮೋದಿ
ಈ 75 ವರ್ಷಗಳ ಪಯಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ ನಾವು ಎಲ್ಲರ ಪ್ರಯತ್ನದಿಂದ ನಾವು ಎಲ್ಲಿಗೆ ತಲುಪಿದ್ದೇವೆ. 2014ರಲ್ಲಿ ಈ ದೇಶದ ಜನರು ನನಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿಯಾದ ನಾನು ಇಂದು ಕೆಂಪು ಕೋಟೆಯಿಂದ ಈ ದೇಶದ ನಾಗರಿಕರನ್ನು ಹಾಡಿ ಹೊಗಳುವ ಅವಕಾಶವನ್ನು ಪಡೆದಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
In this 75-yr journey, amid hopes, aspirations, highs&lows we reached where we could with everyone’s effort. In 2014,citizens gave me the responsibility-the first person born after independence who received opportunity to sing praises of citizens of this country from Red Fort: PM pic.twitter.com/PoNJ4yvLWG
— ANI (@ANI) August 15, 2022
ಭಾರತದ ಅಭಿವೃದ್ಧಿ ಪಥದ ಬಗ್ಗೆ ಸಂಶಯ ಇರುವವರಿಗೆ ಈ ಮಣ್ಣು ವಿಶೇಷವಾದುದು ಎಂದು ತಿಳಿದಿರಲಿಲ್ಲ. ನಾವು ಸ್ವಾತಂತ್ರ್ಯವನ್ನು ಪಡೆದಾಗ ನಮ್ಮ ಅಭಿವೃದ್ಧಿಯ ಪಥವನ್ನು ಅನುಮಾನಿಸುವ ಅನೇಕ ಸಂದೇಹವಾದಿಗಳು ಇದ್ದರು. ಆದರೆ, ಈ ನಾಡಿನ ಜನರಲ್ಲಿ ಏನೋ ಒಂದು ವ್ಯತ್ಯಾಸವಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಈ ಮಣ್ಣು ವಿಶೇಷ ಎಂಬುದು ಅವರಿಗೆ ತಿಳಿದಿರಲಿಲ್ಲ. ಈಗ ನಾವು ಸಾಧನೆಗಳ ಮೂಲಕ ನಮ್ಮ ಸಾಮರ್ಥ್ಯವನ್ನು ಸಾರುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published On - 9:04 am, Mon, 15 August 22