ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ವೀರ ಸಾವರ್ಕರ್, ರಾಣಿ ಚೆನ್ನಮ್ಮನನ್ನು ಮರೆಯುವಂತಿಲ್ಲ; ಪ್ರಧಾನಿ ಮೋದಿ
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಬಿಜೆಪಿ ಅವಮಾನ ಮಾಡಿದೆ ಎಂಬ ಟೀಕೆಯ ಬೆನ್ನಲ್ಲೇ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವಾಗ ನರೇಂದ್ರ ಮೋದಿ ನೆಹರೂ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ.
ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗಿವೆ. ಅಮೃತ ಮಹೋತ್ಸವದ (Amrit Mahothsav) ಸಂಭ್ರಮದಲ್ಲಿರುವ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣೀಕರ್ತರಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೆಲ್ಲರಿಗೂ ಭಾರತ ಕೃತಜ್ಞವಾಗಿದೆ ಎಂದಿದ್ದಾರೆ. ‘ಆಜಾದಿಯ ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರನಾಯಕರನ್ನು ಸ್ಮರಿಸಿದ್ದೇವೆ. ಆಗಸ್ಟ್ 14ರಂದು ನಾವು ದೇಶದ ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ಮೋದಿ ಹೇಳಿದ್ದಾರೆ.
ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿಯನ್ನೇ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ರಾಷ್ಟ್ರ ಕೃತಜ್ಞವಾಗಿದೆ. ದೇಶಕ್ಕಾಗಿ ಜೀವವನ್ನೇ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ನಮ್ಮ ದೇಶದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
This nation is thankful to Mangal Pandey, Tatya Tope, Bhagat Singh, Sukhdev, Rajguru, Chandrashekhar Azad, Ashfaqulla Khan, Ram Prasad Bismil and our innumerable revolutionaries who shook the foundation of the British Rule: Prime Minister Narendra Modi at Red Fort #IndiaAt75 pic.twitter.com/ipe2hI9ocT
— ANI (@ANI) August 15, 2022
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್ ಮುಂತಾದ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಭಾರತ ಹೆಮ್ಮೆಯಿಂದ ಬೀಗುತ್ತದೆ ಎಂದು ನರೇಂದ್ರ ಮೋದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಕೊಡುಗೆ, ಬಲಿದಾನವನ್ನು ಮೋದಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: Independence Day 2022: ಭಾರತ ಪ್ರಜಾಪ್ರಭುತ್ವದ ತಾಯಿ, ವೈವಿಧ್ಯತೆಯೇ ಅದರ ಶಕ್ತಿ; ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಅಥವಾ ದೇಶವನ್ನು ಕಟ್ಟಿದವರಾದ ಡಾ. ರಾಜೇಂದ್ರ ಪ್ರಸಾದ್, ನೆಹರೂ, ಸರ್ದಾರ್ ಪಟೇಲ್, ಎಸ್ಪಿ ಮುಖರ್ಜಿ, ಎಲ್ಬಿ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೆಪಿ ನಾರಾಯಣ್, ಆರ್ಎಂ ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯ ಭಾರತಿ ಅವರಂತಹ ಮಹಾನ್ ವ್ಯಕ್ತಿಗಳ ಮುಂದೆ ತಲೆಬಾಗಬೇಕಾದ ದಿನವಿದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತ ತನ್ನ 75 ವರ್ಷಗಳ ಪ್ರಯಾಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಮೋದಿ ಹೇಳಿದ್ದಾರೆ.
The citizens are thankful to Bapu, Netaji Subhash Chandra Bose, Babasaheb Ambedkar, Veer Savarkar who gave their lives on the path of duty. Kartvya path hi unka jeevan path raha: Prime Minister Narendra Modi at Red Fort #IndiaAt75 pic.twitter.com/rHuTSeFrr5
— ANI (@ANI) August 15, 2022
ನಾವು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ, ಬುಡಕಟ್ಟು ಸಮುದಾಯವನ್ನು ಮರೆಯಲು ಸಾಧ್ಯವಿಲ್ಲ. ಭಗವಾನ್ ಬಿರ್ಸಾ ಮುಂಡಾ, ಸಿಧು-ಕನ್ಹು, ಅಲ್ಲೂರಿ ಸೀತಾರಾಮ ರಾಜು, ಗೋವಿಂದ್ ಗುರು ಮುಂತಾದವರು ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿದ್ದವರು. ಇವರೆಲ್ಲರೂ ಬುಡಕಟ್ಟು ಸಮುದಾಯವನ್ನು ಮಾತೃಭೂಮಿಗಾಗಿ ಬದುಕಲು ಮತ್ತು ಪ್ರಾಣತ್ಯಾಗ ಮಾಡಲು ಪ್ರೇರೇಪಿಸಿದರು ಎಂದು ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದ ವೇಳೆ ಹೇಳಿದ್ದಾರೆ.
Be it those who fought for independence or built the nation -Dr Rajendra Prasad, Nehru ji, Sardar Patel, SP Mookerjee, LB Shastri, Deendayal Upadhyaya, JP Narayan, RM Lohia, Vinoba Bhave, Nanaji Deshmukh, Subramania Bharati -it’s the day to bow before such great personalities: PM pic.twitter.com/eNrGBs1pUY
— ANI (@ANI) August 15, 2022
ಆವಿಷ್ಕಾರದ ಮಹತ್ವ ನಾವೆಲ್ಲರೂ ಮನಗಾಣಬೇಕು. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಮಂತ್ರವನ್ನೂ ನಾವು ಮನಗಾಣಬೇಕು. ಹೊಸ ತಂತ್ರಜ್ಞಾನದ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕು. ಜೈ ಅನುಸಂಧಾನ್ ನಮ್ಮ ಹೊಸ ಮಂತ್ರವಾಗಲಿ. ಪಂಚಪ್ರಾಣಗಳ ಹೆಸರಿನಲ್ಲಿ ಐದು ಸಂಕಲ್ಪಗಳನ್ನು ದೇಶದ ಎದುರು ತೆರೆದಿಟ್ಟ ನರೇಂದ್ರ ಮೋದಿ. ದೇಶವು ಸ್ವಾತಂತ್ರ್ಯ ದಿನಾಚರಣೆಯ ಶತಮಾನೋತ್ಸವದ ಒಳಗೆ ಈ ಆಶಯಗಳು ಈಡೇರಬೇಕು ಎಂದು ಮೋದಿ ಕರೆ ನೀಡಿದರು. 1) ವಿಕಸಿತ ಭಾರತ, 2) ಸ್ವಾಭಿಮಾನಿ ಭಾರತ (ಎಲ್ಲಿಯೂ ಜೀತ ಪದ್ಧತಿ ಇರಬಾರದು), 3) ಪರಂಪತೆಯ ಬಗ್ಗೆ ಹೆಮ್ಮೆ (ವಿರಾಸತ್), 4) ಏಕತೆ, 5) ನಾಗರಿಕ ಕರ್ತವ್ಯ ಧ್ಯೇಯವಾಕ್ಯವಾಗಬೇಕು ಎಂದು ಮೋದಿ ಹೇಳಿದ್ದಾರೆ.
Every India is filled with pride when they remember the strength of the women of India- be it Rani Laxmibai, Jhalkari Bai, Chennamma, Begum Hazrat Mahal: PM Modi at Red Fort pic.twitter.com/HiVSfDbxZZ
— ANI (@ANI) August 15, 2022
ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಪುನರುಚ್ಚರಿಸಿದ ನರೇಂದ್ರ ಮೋದಿ, ನಮ್ಮ ದೇಶವು ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ. ಈ 75 ವರ್ಷಗಳ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದೆ ಎಂದು ಹೇಳಿದರು. ಭಾರತ ಪ್ರಜಾಪ್ರಭುತ್ವದ ತಾಯಿ, ನಮ್ಮ ದೇಶದ ವೈವಿಧ್ಯತೆಯೇ ಅದರ ಶಕ್ತಿ ಎಂದು ಮೋದಿ ಹೇಳಿದ್ದಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಯುವಜನರಿಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದಾರೆ. ಭಾರತದ ಯುವಜನತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವುದರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡುವಂತೆ ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Independence Day 2022: ಮಹಿಳೆಯರನ್ನು ಗೌರವಿಸಿ, ನಾರಿ ಶಕ್ತಿಯನ್ನು ಪ್ರೋತ್ಸಾಹಿಸಿ; ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ
ಈ 75 ವರ್ಷಗಳ ಪಯಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ ನಾವು ಎಲ್ಲರ ಪ್ರಯತ್ನದಿಂದ ನಾವು ಎಲ್ಲಿಗೆ ತಲುಪಿದ್ದೇವೆ. 2014ರಲ್ಲಿ ಈ ದೇಶದ ಜನರು ನನಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿಯಾದ ನಾನು ಇಂದು ಕೆಂಪು ಕೋಟೆಯಿಂದ ಈ ದೇಶದ ನಾಗರಿಕರನ್ನು ಹಾಡಿ ಹೊಗಳುವ ಅವಕಾಶವನ್ನು ಪಡೆದಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Addressing the nation on Independence Day. https://t.co/HzQ54irhUa
— Narendra Modi (@narendramodi) August 15, 2022
ಭಾರತದ ಅಭಿವೃದ್ಧಿ ಪಥದ ಬಗ್ಗೆ ಸಂಶಯ ಇರುವವರಿಗೆ ಈ ಮಣ್ಣು ವಿಶೇಷವಾದುದು ಎಂದು ತಿಳಿದಿರಲಿಲ್ಲ. ನಾವು ಸ್ವಾತಂತ್ರ್ಯವನ್ನು ಪಡೆದಾಗ ನಮ್ಮ ಅಭಿವೃದ್ಧಿಯ ಪಥವನ್ನು ಅನುಮಾನಿಸುವ ಅನೇಕ ಸಂದೇಹವಾದಿಗಳು ಇದ್ದರು. ಆದರೆ, ಈ ನಾಡಿನ ಜನರಲ್ಲಿ ಏನೋ ಒಂದು ವ್ಯತ್ಯಾಸವಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಈ ಮಣ್ಣು ವಿಶೇಷ ಎಂಬುದು ಅವರಿಗೆ ತಿಳಿದಿರಲಿಲ್ಲ. ಈಗ ನಾವು ಸಾಧನೆಗಳ ಮೂಲಕ ನಮ್ಮ ಸಾಮರ್ಥ್ಯವನ್ನು ಸಾರುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Mon, 15 August 22