AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2022: ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಕೈ ಜೋಡಿಸಿದ ಜನರು; ರಾಷ್ಟ್ರಧ್ವಜಕ್ಕೆ ಭಾರೀ ಬೇಡಿಕೆ

ಈ ವರ್ಷ ರಾಷ್ಟ್ರಧ್ವಜಕ್ಕೆ ಅಭೂತಪೂರ್ವ ಬೇಡಿಕೆ ಕಂಡುಬಂದಿದೆ. ನನ್ನ ವ್ಯವಹಾರದ ಕಳೆದ 16 ವರ್ಷಗಳಲ್ಲಿ ಇಂತಹ ಬೇಡಿಕೆಯನ್ನು ನಾನು ನೋಡಿಯೇ ಇರಲಿಲ್ಲ. ನಮಗೆ ಇನ್ನೂ ಆರ್ಡರ್​ಗಳು ಬರುತ್ತಿವೆ ಎಂದು ರಾಷ್ಟ್ರಧ್ವಜದ ತಯಾರಕರು ಹೇಳಿದ್ದಾರೆ.

Independence Day 2022: 'ಹರ್ ಘರ್ ತಿರಂಗ' ಅಭಿಯಾನಕ್ಕೆ ಕೈ ಜೋಡಿಸಿದ ಜನರು; ರಾಷ್ಟ್ರಧ್ವಜಕ್ಕೆ ಭಾರೀ ಬೇಡಿಕೆ
ರಾಷ್ಟ್ರಧ್ವಜ
TV9 Web
| Updated By: ಸುಷ್ಮಾ ಚಕ್ರೆ|

Updated on: Aug 15, 2022 | 11:11 AM

Share

ಕೊಲ್ಕತ್ತಾ: ಭಾರತಕ್ಕೆ ಸ್ವಾತಂತ್ರ್ಯ (Independence Day) ಸಿಕ್ಕಿ 75 ವರ್ಷಗಳ ಸ್ಮರಣಾರ್ಥ ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗ’ (Har Ghar Tiranga) ಅಭಿಯಾನದಿಂದಾಗಿ ತ್ರಿವರ್ಣ ಧ್ವಜದ (Tiranga) ಬೇಡಿಕೆ ಹೆಚ್ಚಾಗಿದೆ. ಧ್ವಜ ತಯಾರಕರು ಮತ್ತು ವ್ಯಾಪಾರಿಗಳು ರಾಷ್ಟ್ರ ಧ್ವಜದ ಮಾರಾಟದಲ್ಲಿ ಹೆಚ್ಚಳವಾದ್ದರಿಂದ ಭರ್ಜರಿ ಲಾಭದ ಮುಖ ನೋಡಿದ್ದಾರೆ.

“ಈ ವರ್ಷ ರಾಷ್ಟ್ರಧ್ವಜಕ್ಕೆ ಅಭೂತಪೂರ್ವ ಬೇಡಿಕೆ ಕಂಡುಬಂದಿದೆ. ನನ್ನ ವ್ಯವಹಾರದ ಕಳೆದ 16 ವರ್ಷಗಳಲ್ಲಿ ಇಂತಹ ಬೇಡಿಕೆಯನ್ನು ನಾನು ನೋಡಿಯೇ ಇರಲಿಲ್ಲ. ನಮಗೆ ಇನ್ನೂ ಆರ್ಡರ್​ಗಳು ಬರುತ್ತಿವೆ. ಆದರೆ ಸಮಯದ ಅಭಾವದಿಂದ ನಾವು ಕೆಲವು ಆರ್ಡರ್​​ಗಳನ್ನು ಕೊನೆಯ ಕ್ಷಣದಲ್ಲಿ ತಿರಸ್ಕರಿಸಿದ್ದೇವೆ. ನಾವು ಈಗಾಗಲೇ ಹರ್ ಘರ್ ತ್ರಿರಂಗ ಅಭಿಯಾನದ ಮೂಲಕ 10 ಲಕ್ಷ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡಿದ್ದೇವೆ. ಅಲ್ಲದೆ, ಬಾವುಟದ ಮಾರಾಟವನ್ನು ಹೆಚ್ಚಿಸಲಾಗಿದೆ” ಎಂದು ಮುಂಬೈ ಮೂಲದ ದಿ ಫ್ಲಾಗ್ ಕಂಪನಿಯ ಸಹ-ಸಂಸ್ಥಾಪಕ ದಲ್ವಿರ್ ಸಿಂಗ್ ನಾಗಿ ಪಿಟಿಐಗೆ ತಿಳಿಸಿದ್ದಾರೆ.

ದಲ್ವಿರ್ ಸಿಂಗ್ ನಾಗಿ ಮಾತ್ರವಲ್ಲ, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಮತ್ತೊಬ್ಬ ಧ್ವಜ ತಯಾರಕರಾದ ರಾಜು ಹಲ್ಡರ್, ತನ್ನ ಉತ್ಪಾದನಾ ಘಟಕದ 20 ಸದಸ್ಯರ ಕಾರ್ಮಿಕ ಬಲವು ಆದೇಶಗಳನ್ನು ತಲುಪಿಸುವಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ವಿತರಿಸಲಾದ ಆರ್ಡರ್‌ಗಳಿಗೆ ಹೋಲಿಸಿದರೆ, ಈ ಬಾರಿ ರಾಷ್ಟ್ರಧ್ವಜದ ಬೇಡಿಕೆ ಹಲವಾರು ಪಟ್ಟು ಹೆಚ್ಚಾಗಿದೆ. ರಾಷ್ಟ್ರಧ್ವಜದ ಬೇಡಿಕೆಯನ್ನು ಪೂರೈಸಲು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Independence Day 2022: ಮಹಿಳೆಯರನ್ನು ಗೌರವಿಸಿ, ನಾರಿ ಶಕ್ತಿಯನ್ನು ಪ್ರೋತ್ಸಾಹಿಸಿ; ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ

ದೇಶದ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಕೊಲ್ಕತ್ತಾದ ಬುರ್ರಾಬಜಾರ್‌ನಲ್ಲಿ ಧ್ವಜಗಳ ವ್ಯಾಪಾರಿ ಅಜಿತ್ ಸಹಾ, “ಈ ವರ್ಷ ಕೆಲವು ರೀತಿಯ ಧ್ವಜಗಳು ಮತ್ತು ಪರಿಕರಗಳ ಪೂರೈಕೆಗಿಂತ ಬೇಡಿಕೆಯೇ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ಕೊವಿಡ್-19 ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ವ್ಯಾಪಾರದಲ್ಲಿ ಕುಸಿತದ ನಂತರ, ಈ ವರ್ಷ ನಮಗೆ ಭರವಸೆ ಹೆಚ್ಚಾಗಿದೆ. ಇದರಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಭಾರತೀಯ ಅಂಚೆ ಇಲಾಖೆಯು ಸುಲಭವಾಗಿ ಸಂಗ್ರಹಣೆಗಾಗಿ ಆನ್‌ಲೈನ್‌ನಲ್ಲಿ ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Narendra Modi: ಧ್ವಜಾರೋಹಣದ ವೇಳೆ ಬಿಳಿ ಕುರ್ತಾ, ನೀಲಿ ಜಾಕೆಟ್, ರಾಷ್ಟ್ರಧ್ವಜದ ಮಾದರಿಯ ಟರ್ಬಾನ್ ತೊಟ್ಟು ಗಮನ ಸೆಳೆದ ಮೋದಿ

ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಪಿಎಸ್‌ಯು ಅಧಿಕಾರಿಗಳು ಅಭಿಯಾನವನ್ನು ಆಚರಿಸಲು ಮತ್ತು ಪ್ರಚಾರ ಮಾಡಲು ವಿಶೇಷ ಪ್ರಯತ್ನಗಳನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ಅಭಿಯಾನವು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುವ ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!